ಮನೆಯಲ್ಲಿ ನವಿಲುಗರಿಗಳನ್ನು ಎಲ್ಲೆಲ್ಲಿ ಇಡಬಾರದು? ವಾಸ್ತು ಶಾಸ್ತ್ರದ ಸಲಹೆ ಏನು?
ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿಗಳು ತುಂಬಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಆದ್ದರಿಂದ ಅವುಗಳನ್ನು ಮನೆಯಲ್ಲಿ ಇಡುವಾಗ ಸರಿಯಾಗ ಜಾಗದಲ್ಲಿ ಇಡಬೇಕು. ಅಪ್ಪಿತಪ್ಪಿಯೂ ಈ ಜಾಗಗಳಲ್ಲಿ ಇಡಬಾರದು.
ಜಗತ್ತಿನಲ್ಲಿ ವಾಸ್ತು ಶಾಸ್ತ್ರವನ್ನು ಜ್ಯೋತಿಷ್ಯ ಶಾಸ್ತ್ರದಷ್ಟೇ ನಂಬುತ್ತಾರೆ. ವಾಸ್ತು ಶಾಸ್ತ್ರ ಮನೆ ಮತ್ತು ಕುಟುಂಬದ ಏಳ್ಗೆಗಾಗಿ ಇರುವ ಸೂತ್ರಗಳಾಗಿವೆ. ಶ್ರೀಕೃಷ್ಣನ ಮುಕುಟದಲ್ಲಿ ವಿರಾಜಿಸುವ ನವಿಲುಗರಿಗೆ ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. ಜೊತೆಗೆ ನವಿಲು ಸುಬ್ರಹ್ಮಣ್ಯ ಸ್ವಾಮಿಯ ವಾಹನವೂ ಆಗಿದೆ. ಹಾಗಾಗಿ ಅದನ್ನು ಮಂಗಳಕರ ವಸ್ತುವೆಂದು ಪರಿಗಣಿಸಲಾಗಿದೆ. ಇದು ಮನೆಯೊಳೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ಹಲವರಿಗೆ ನವಿಲುಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಹವ್ಯಾಸವಿರುತ್ತದೆ. ಆದರೆ ನವಿಲುಗರಿಯನ್ನು ಸರಿಯಾದ ಜಾಗದಲ್ಲಿ ಇರಿಸುವುದು ಬಹಳ ಮುಖ್ಯವಾಗಿದೆ. ಆದ್ದರಿಂದ ನವಿಲು ಗರಿಗಳಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಮನೆಯಲ್ಲಿ ಎಲ್ಲಿ ನವಿಲು ಗರಿಗಳನ್ನು ಇಡಬಾರದು ಎಂದು ನೋಡೋಣ.
ನವಿಲು ಗರಿಯನ್ನು ಸ್ನಾನದ ಮನೆಯಲ್ಲಿ ಇಡಬೇಡಿ: ವಾಸ್ತು ಪ್ರಕಾರ ನವಿಲು ಗರಿಗಳು ಬಹಳ ಶ್ರೇಷ್ಠವಾಗದುದು. ಆದ್ದರಿಂದ ಅದನ್ನು ಸ್ನಾನದ ಗೃಹ, ಕೈ ತೊಳೆಯುವ ಸಿಂಕ್ ನಂತಹ ಜಾಗದಲ್ಲಿ ಇಡಬಾರದು. ಅದು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಅಡುಗೆ ಮನೆಯಲ್ಲಿ ನವಿಲು ಗರಿ ಇಡಬಾರದು: ವಾಸ್ತು ಪ್ರಕಾರ ಬೆಂಕಿಯಿರುವ ಸ್ಥಳಗಳಲ್ಲಿ ನವಿಲುಗರಿಗಳನ್ನು ಇಡಬಾರದು. ಏಕೆಂದರೆ ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಇರುವುದರಿಂದ ಅಲ್ಲಿ ನವಿಲುಗರಿ ಇಡುವುದು ಸೂಕ್ತವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಮನೆಯ ಜನರ ಹೊಟ್ಟೆ ತುಂಬಿಸುವ ಅಡುಗೆ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಇರುವುದು ಮುಖ್ಯವಾಗಿದೆ.
ಇದನ್ನೂ ಓದಿ: ಅಕ್ಷಯ ತೃತೀಯ 2026: ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಏರಿಕೆ; ಹೂಡಿಕೆದಾರರಿಗೆ ಬಿಸಿ ತಟ್ಟಿದ ‘ಅಕ್ಷಯ’ ಬೆಲೆ
ಹಾಸಿಗೆಯ ಕೆಳಗೆ ಇಡಬೇಡಿ: ನವಿಲುಗರಿಗಳನ್ನು ಎಂದಿಗೂ ಹಾಸಿಗೆಯ ಕೆಳಗೆ ಇಡಬಾರದು. ಏಕೆಂದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಗರಿಗಳನ್ನು ಮುಚ್ಚಿಡುವುದು ಸರಿಯಲ್ಲ ಎಂದು ಶಾಸ್ತ್ರ ಹೇಳುತ್ತದೆ. ನವಿಲುಗರಿಗಳನ್ನು ಯಾವಾಗಲು ತೆರೆದ ಸ್ವಚ್ಛ ಜಾಗದಲ್ಲಿ ಇಡಬೇಕು. ಆಗ ಅದು ಉತ್ತಮ ಸಕಾರಾತ್ಮಕ ಪರಿಣಾಮ ಬೀರಲು ಸಾಧ್ಯವಾಗುತ್ತದೆ.



