ಗೃಹಜ್ಯೋತಿ ಬಳಕೆದಾರರಿಗೆ ಗುಡ್ನ್ಯೂಸ್ : ಮನೆ ಶಿಫ್ಟ್ ಮಾಡಿದರೂ ಇಲ್ಲ ಯಾವುದೇ ತೊಂದರೆ
ಗೃಹಜ್ಯೋತಿ ಯೋಜನೆ ಬಳಕೆಗೆ ಇಲ್ಲಿದೆ ಶುಭ ಸುದ್ದಿ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ, ಇನ್ನೂ ಈ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದವರು ಮತ್ತೊಂದು ಕಡೆ. ನಗರ ಪ್ರದೇಶಗಳಲ್ಲಿ ಪದೇ ಪದೇ ಬಾಡಿಗೆ ಮನೆ ಬದಲಾಯಿಸುವವರು ಗೃಹಜ್ಯೋತಿ ಯೋಜನೆಯನ್ನು ವರ್ಗಾವಣೆ ಮಾಡಿಕೊಳ್ಳಲು ಪರದಾಡುವಂತಾಗುತ್ತಿತ್ತು. ಆದರೆ ಇದೀಗ ಈ ವಿಚಾರವಾಗಿ ಬೆಸ್ಕಾಂ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು ನಗರವಾಸಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೌದು..! ಈಗ ಇರುವ ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಶಿಫ್ಟ್ ಆಗುವವರು ಗೃಹ ಜ್ಯೋತಿ ಸೌಲಭ್ಯವನ್ನೂ ವರ್ಗಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಬೆಸ್ಕಾಂ ಡಿ ಲಿಂಕ್ ವ್ಯವಸ್ಥೆ ಕಲ್ಪಿಸಿದ್ದು, ಇದನ್ನು ಬಳಕೆ ಮಾಡಿ ಸರ್ಕಾರದ ಗೃಹಜ್ಯೋತಿ ಯೋಜನೆಯನ್ನು ಸುಲಭವಾಗಿ ಶಿಫ್ಟ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕಾರ್ಮಿಕರ ಆರೋಗ್ಯ ರಕ್ಷಣೆಗೆ ಹೈಟೆಕ್ ಸ್ಪರ್ಶ..! ಬೆವರು ಸುರಿಸುವ ಕೈಗಳಿಗೆ ಆರೋಗ್ಯ ಭಾಗ್ಯ
ಸೇವಾಸಿಂಧು ಗ್ಯಾರಂಟಿ ಸ್ಕೀಮ್ ಪೋರ್ಟ್ಲ್ನ ಅಧಿಕೃತ ಲಿಂಕ್ಗಳಾದ https://sevasindhugs.karnataka.gov.in/ ಹಾಗೂ https://sevasindhu.karnataka.gov.in/GruhaJyothi_Delink/GetAadhaarData.aspx ಗೆ ಭೇಟಿ ನೀಡುವ ಮೂಲಕ ನೀವು ಗೃಹಜ್ಯೋತಿ ಯೋಜನೆಯನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಶಿಫ್ಟ್ ಮಾಡಬಹುದಾಗಿದೆ.
ಈ ಲಿಂಕ್ಗೆ ಭೇಟಿ ನೀಡಿದ ಬಳಿಕ ಹಳೆಯ ಮನೆಯ ಆರ್ಆರ್ ಸಂಖ್ಯೆಯನ್ನು ಡಿ – ಲಿಂಕ್ ಮಾಡಬೇಕು. ಹಾಲಿ ಇರುವ ಮನೆಯ ಆರ್ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿ. ಈ ರೀತಿ ಮಾಡುವ ಮೂಲಕ ನೀವು ಗೃಹಜ್ಯೋತಿ ಯೋಜನೆಯನ್ನು ವರ್ಗಾವಣೆ ಮಾಡಬಹುದಾಗಿದೆ.



