ಕಾರ್ಮಿಕರ ಆರೋಗ್ಯ ರಕ್ಷಣೆಗೆ ಹೈಟೆಕ್​ ಸ್ಪರ್ಶ..! ಬೆವರು ಸುರಿಸುವ ಕೈಗಳಿಗೆ ಆರೋಗ್ಯ ಭಾಗ್ಯ

ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಆರೋಗ್ಯ ರಕ್ಷಣೆಗೆಂದೇ ಸರ್ಕಾರ ಹೊಸದೊಂದು ಆರೋಗ್ಯ ಭಾಗ್ಯ ನೀಡಿದೆ. ಕಾರ್ಮಿಕರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ಒದಗಿಸುವ ಉದ್ದೇಶದೊಂದಿಗೆ. ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ‘ಹೈಟೆಕ್​ ಸಂಚಾರಿ ಆರೋಗ್ಯ ಘಟಕ’ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಸಂಚಾರಿ ವಾಹನಗಳನ್ನು ಎಲ್ಲೆಡೆ ನಿಯೋಜಿಸುವ ಮೂಲಕ ಕಾರ್ಮಿಕರಿಗೆ ತ್ವರಿತ ಚಿಕಿತ್ಸೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಕಾರ್ಮಿಕ ಇಲಾಖೆ ಜಾರಿಗೆ ತಂದಿರುವ ಈ ಯೋಜನೆಯಡಿ, ಸುಸಜ್ಜಿತ ವೈದ್ಯಕೀಯ ಸೌಲಭ್ಯವಿರುವ ವಾಹನಗಳು ನೇರವಾಗಿ ಕಾರ್ಮಿಕರು ಕೆಲಸ ಮಾಡುವ ಸೈಟ್‌ಗಳಿಗೇ ಭೇಟಿ ನೀಡಲಿವೆ. ಇದೊಂದು ಚಲಿಸುವ ಆಸ್ಪತ್ರೆಯಂತಿದ್ದು, ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲಾಗಿದೆ. ಸಂಚಾರ ಸಂಜೀವಿನಿಯ ಮೂಲಕ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಅಲೆದಾಡಿ ಹಣ ವ್ಯಯಿಸುತ್ತಿರುವ ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತಿದೆ.

ನೋಂದಾಯಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರಿಗಾಗಿ ಈ ಸಂಚಾರಿ ಚಿಕಿತ್ಸಾ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಮಿಕರು ಅನಾರೋಗ್ಯದ ಸಂದರ್ಭದಲ್ಲಿ ಕೆಲಸ ಬಿಟ್ಟು ಆಸ್ಪತ್ರೆಗೆ ಅಲೆಯುವುದನ್ನು ತಪ್ಪಿಸಲು ಈ ‘ಕ್ಲಿನಿಕ್ ಆನ್ ವೀಲ್ಸ್’ ಮಾದರಿಯ ವಾಹನಗಳು ನೇರವಾಗಿ ಕೆಲಸದ ಸ್ಥಳಕ್ಕೇ ಭೇಟಿ ನೀಡಲಿವೆ.

ಇದನ್ನೂ ಓದಿ: ರಾಜಕೀಯ ರಂಗಕ್ಕೆ ಶಿಕ್ಷಣದ ಸ್ಪರ್ಶ..!? ರಾಜಕೀಯ ಕಾಲೇಜು ಸ್ಥಾಪನೆಗೆ ಚಿಂತನೆ : ಬಸವರಾಜ ಹೊರಟ್ಟಿ

ಪ್ರತಿ ಜಿಲ್ಲೆಗೆ ತಲಾ ಮೂರು ಹೈಟೆಕ್ ಸಂಚಾರಿ ವಾಹನಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರತಿ ವಾಹನದಲ್ಲಿ ಒಬ್ಬ ಎಂಬಿಬಿಎಸ್ ವೈದ್ಯರು, ನರ್ಸ್, ಫಾರ್ಮಾಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಇರುತ್ತಾರೆ. ಈ ವಾಹನಗಳು ಜಿಪಿಎಸ್ ಸೌಲಭ್ಯ ಹೊಂದಿದ್ದು, ಬೆಂಗಳೂರಿನಲ್ಲಿರುವ ಕೇಂದ್ರೀಕೃತ ಕಮಾಂಡ್ ಸೆಂಟರ್ ಗಳು ಇವುಗಳನ್ನು ನಿರ್ವಹಿಸುತ್ತವೆ. ಪ್ರಥಮ ಚಿಕಿತ್ಸೆ, ವೈದ್ಯಕೀಯ ಸಲಹೆ, ಅಗತ್ಯ ಔಷಧೋಪಚಾರಗಳು ಹಾಗೂ ಡಿಜಿಟಲ್ ಆಧಾರಿತ ಆರೋಗ್ಯ ಸೇವೆಗಳು ಲಭ್ಯವಿರುತ್ತವೆ.ಇದಕ್ಕಾಗಿ ಸಹಾಯವಾಣಿಯನ್ನೂ ತೆರೆಯಲಾಗಿದ್ದು, ತುರ್ತು ಸಂದರ್ಭದಲ್ಲಿ ಕಾರ್ಮಿಕರು 155214 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories