SSLC 2026 ಪ್ರಕಟ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು ಸುರಕ್ಷಿತವಾಗಿಡಲು DigiLocker ಅಪ್ಲಿಕೇಶನ್ ಬಳಸಬಹುದು. ನಿಮ್ಮ ಆಧಾರ್ ವಿವರಗಳನ್ನು ಬಳಸಿ ಲಾಗಿನ್ ಆಗುವ ಮೂಲಕ ಅಧಿಕೃತ ಅಂಕಪಟ್ಟಿಯನ್ನು ಇಲ್ಲಿ ಪಡೆಯಬಹುದು.

SSLC 2026 : ಬೆಂಗಳೂರು: ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಇಂದು ತೆರೆ ಬೀಳುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು, ಏಪ್ರಿಲ್ 23 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್‌ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಸರ್ವರ್ ಸಮಸ್ಯೆ ತಪ್ಪಿಸಲು ಮತ್ತು ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತವನ್ನು ಅನುಸರಿಸಿ.

SSLC 2026  : ವೆಬ್‌ಸೈಟ್ ಮೂಲಕ ಫಲಿತಾಂಶ ಚೆಕ್ ಮಾಡುವುದು ಹೇಗೆ ?

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಲು ಈ ಕೆಳಗಿನ ಹಂತಗಳನ್ನು ಪಾಲಿಸಿ:

  • ಮೊದಲಿಗೆ ಅಧಿಕೃತ ವೆಬ್‌ಸೈಟ್ karresults.nic.inಥವಾ kseab.karnataka.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿSSLC Examination 1 Result 2026′ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ (Registration Number) ಅನ್ನು ನಿಖರವಾಗಿ ನಮೂದಿಸಿ.
  • ಪ್ರವೇಶ ಪತ್ರದಲ್ಲಿರುವಂತೆ ನಿಮ್ಮ ಜನ್ಮ ದಿನಾಂಕವನ್ನು (Date of Birth) ಆಯ್ಕೆ ಮಾಡಿ.
  • ‘Submit’ ಬಟನ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
  •  ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇಂಟರ್ನೆಟ್ ಇಲ್ಲದೆಯೂ ರಿಸಲ್ಟ್ ಪಡೆಯಬಹುದು

ಒಂದೇ ಸಮಯದಲ್ಲಿ ಲಕ್ಷಾಂತರ ಜನರು ವೆಬ್‌ಸೈಟ್ ಬಳಸುವುದರಿಂದ ಲೋಡ್ ಆಗಲು ವಿಳಂಬವಾಗಬಹುದು. ಅಂತಹ ಸಂದರ್ಭದಲ್ಲಿ ಎಸ್‌ಎಂಎಸ್ ಮೂಲಕ ಈ ಕೆಳಗಿನಂತೆ ಫಲಿತಾಂಶ ಪಡೆಯಿರಿ:

  • ನಿಮ್ಮ ಮೊಬೈಲ್‌ನಲ್ಲಿ KAR10 <space> Registration Number ಟೈಪ್ ಮಾಡಿ.
  • ಇದನ್ನು 56263 ಸಂಖ್ಯೆಗೆ ಕಳುಹಿಸಿ.
  • ನಿಮ್ಮ ಅಂಕಗಳು ತಕ್ಷಣವೇ ಸಂದೇಶದ ಮೂಲಕ ದೊರೆಯುತ್ತವೆ.

ಡಿಜಿಲಾಕರ್ (DigiLocker)ನಲ್ಲಿ ಸಿಗಲಿದೆ ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ

ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು ಸುರಕ್ಷಿತವಾಗಿಡಲು DigiLocker ಅಪ್ಲಿಕೇಶನ್ ಬಳಸಬಹುದು. ನಿಮ್ಮ ಆಧಾರ್ ವಿವರಗಳನ್ನು ಬಳಸಿ ಲಾಗಿನ್ ಆಗುವ ಮೂಲಕ ಅಧಿಕೃತ ಅಂಕಪಟ್ಟಿಯನ್ನು ಇಲ್ಲಿ ಪಡೆಯಬಹುದು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಮುಖ ಅಂಶಗಳು

  • ಪಾಸಿಂಗ್ ಮಾರ್ಕ್ಸ್: ವಿದ್ಯಾರ್ಥಿಗಳು ತೇರ್ಗಡೆಯಾಗಲು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
  • ಮರು ಮೌಲ್ಯಮಾಪನ: ಒಂದು ವೇಳೆ ಫಲಿತಾಂಶದಲ್ಲಿ ತೃಪ್ತಿ ಇಲ್ಲದಿದ್ದರೆ ಅಥವಾ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ಮರು ಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರ ದಿನಾಂಕಗಳನ್ನು ಮಂಡಳಿಯು ಶೀಘ್ರವೇ ಪ್ರಕಟಿಸಲಿದೆ.
  • ಮೂಲ ಅಂಕಪಟ್ಟಿ: ಆನ್‌ಲೈನ್‌ನಲ್ಲಿ ಲಭ್ಯವಿರುವ ಅಂಕಪಟ್ಟಿ ಕೇವಲ ತಾತ್ಕಾಲಿಕ ಮಾಹಿತಿ ನೀಡುತ್ತದೆ. ಮೂಲ ಅಂಕಪಟ್ಟಿಯನ್ನು ಕೆಲವು ದಿನಗಳ ನಂತರ ನಿಮ್ಮ ಶಾಲೆಯಲ್ಲೇ ವಿತರಿಸಲಾಗುತ್ತದೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories