ಜೀವನಾಂಶ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು : ವಿವಾಹ ನಂತರ ಜನಿಸಿದ ಕಂದಮ್ಮನಿಗೂ ನಿಯಮ ಅನ್ವಯ
ವ್ಯಕ್ತಿಯೊಬ್ಬ ತನ್ನ ಜೈವಿಕ ಮಗು ಅಲ್ಲದ ಮಗುವಿಗೆ ಜೀವನಾಂಶ ಪಾವತಿಸಬೇಕೆಂದೇನಿಲ್ಲ. ಮಗು ವಿವಾಹದ ಬಳಿಕ ಜನಿಸಿದ್ದರೂ ಸಹ ಈ ನಿಯಮ ಅನ್ವಯಿಸಲಿದೆ.
ವಿವಾಹದ ಬಳಿಕ ಮಗು ಜನಿಸಿದ್ದರೂ ಡಿಎನ್ಎ ವರದಿ ಸಾಬೀತಾಗದೇ ಹೋದಲ್ಲಿ ಆ ಮಗುವಿಗೆ ತಂದೆ ಜೀವನಾಂಶ ಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. 2016ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ವೈಮನಸ್ಯ ಉಂಟಾದ ಹಿನ್ನೆಲೆಯಲ್ಲಿ ಮಹಿಳೆಯು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ – 2005’ರ ಅಡಿಯಲ್ಲಿ ತನಗೆ ಹಾಗೂ ತನ್ನ ಮಗಳಿಗೆ ಮಧ್ಯಂತರ ಜೀವನಾಂಶ ನೀಡುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು.
ವಿಚಾರಣೆಯ ವೇಳೆ ತಂದೆಯು, ಆ ಮಗುವಿನ ಜೈವಿಕ ತಂದೆ ನಾನಲ್ಲ ಎಂದು ಹೇಳಿದ್ದು, ಪತಿಯು ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ಡಿಎನ್ಎ ಪರೀಕ್ಷೆಗೆ ವಿನಂತಿಸಿದ್ದರು. ಈ ಸಂಬಂಧ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಎನ್.ಕೋಟೆಶ್ವರ ಸಿಂಗ್ ನೇತೃತ್ವದ ಪೀಠವು ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ದಂಪತಿ ದುರಂತ ಅಂತ್ಯ..! ರಾಜ್ಯ ರಾಜಧಾನಿಯಲ್ಲಿ ದಂಪತಿ ನಿಗೂಢ ಸಾವು
ವ್ಯಕ್ತಿಯೊಬ್ಬ ತನ್ನ ಜೈವಿಕ ಮಗು ಅಲ್ಲದ ಮಗುವಿಗೆ ಜೀವನಾಂಶ ಪಾವತಿಸಬೇಕೆಂದೇನಿಲ್ಲ. ಮಗು ವಿವಾಹದ ಬಳಿಕ ಜನಿಸಿದ್ದರೂ ಸಹ ಈ ನಿಯಮ ಅನ್ವಯಿಸಲಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅಡಿಯಲ್ಲಿ ದಂಪತಿ ಒಟ್ಟಾಗಿ ಇರುವಾಗ ಜನಿಸಿದ ಮಗು ತಂದೆಯಿಂದಲೇ ಜನಿಸಿರಬೇಕು. ಆದರೆ ಡಿಎನ್ಎ ವರದಿಯು ತಂದೆಯು ಜೈವಿಕ ತಂದೆ ಎಂದು ಸಾಬೀತುಪಡಿಸಲು ವಿಫಲವಾದಲ್ಲಿ ಆಗ ಜೀವನಾಂಶ ಕೊಡಬೇಕು ಎಂದಿಲ್ಲ ಎಂದು ಕೋರ್ಟ್ ಹೇಳಿದೆ.



