SSLC Result 2026 : ಮುದ್ದೂರು ವಿಎಸ್‌ಎಸ್‌ನ ಕಲ್ಯಾಣಿಗೆ ರಾಜ್ಯದಲ್ಲಿ 5ನೇ ರಾಂಕ್‌, ಸತತ 100 % ರಿಸಲ್ಟ್‌

ಉಡುಪಿ ಜಿಲ್ಲೆಯ ಮುದ್ದೂರಿನ ವಿಎಸ್‌ಎಸ್‌ ಆಂಗ್ಲಮಾಧ್ಯಮ ಶಾಲೆ ರಾಜ್ಯದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದೆ. ವಿಎಸ್‌ಎಸ್‌ ಶಾಲೆಯ ವಿದ್ಯಾರ್ಥಿನಿ ಕಲ್ಯಾಣಿ 625ಕ್ಕೆ 621 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ 5ನೇ ರಾಂಕ್‌ ಪಡೆದು ವಿಶಿಷ್ಠ ಸಾಧನೆ ಮರೆದಿದ್ದಾಳೆ.

ಉಡುಪಿ : ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC  Result 2026) ಯಲ್ಲಿ ಉಡುಪಿ ಜಿಲ್ಲೆಯ ಮುದ್ದೂರಿನ ವಿಎಸ್‌ಎಸ್‌ (VSS EMS Muddur) ಆಂಗ್ಲಮಾಧ್ಯಮ ಶಾಲೆ ರಾಜ್ಯದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದೆ. ವಿಎಸ್‌ಎಸ್‌ ಶಾಲೆಯ ವಿದ್ಯಾರ್ಥಿನಿ ಕಲ್ಯಾಣಿ (Kalyani) 625ಕ್ಕೆ 621 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ 5ನೇ ರಾಂಕ್‌ ಪಡೆದು ವಿಶಿಷ್ಠ ಸಾಧನೆ ಮರೆದಿದ್ದಾಳೆ.

ವಿಎಸ್‌ಎಸ್‌ ಆಂಗ್ಲ ಮಾಧ್ಯಮ ಶಾಲೆಯಿಂದ ಪರೀಕ್ಷೆ ಬರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತ ಎರಡನೇ ಬಾರಿಯೂ ಶೇಕಡಾ 100 ಫಲಿತಾಂಶ ದಾಖಲಿಸಿದ ಸಾಧನೆ ಮಾಡಿದೆ. ಈ ಬಾರಿ ಪರೀಕ್ಷೆಗೆ ಹಾಜರಾಗಿರುವ ಶೇಕಡಾ 50ಕ್ಕೂ ಅಧಿಕ ವಿದ್ಯಾರ್ಥಿಗಳು ಶೇಕಡಾ 90ಕ್ಕೂ ಅಧಿಕ ಹಾಗೂ ಶೇಕಡಾ 98 ರಷ್ಟು ವಿದ್ಯಾರ್ಥಿಗಳು ಶೇಕಡಾ 80ಕ್ಕೂ ಅಧಿಕ ಅಂಕ ಪಡೆಯುವ ಮೂಲಕ ವಿಶಿಷ್ಠ ಸಾಧನೆ ಮಾಡಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮರೆಯುತ್ತಿರುವ ವಿಎಸ್‌ಎಸ್‌ ಶಾಲೆಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಶೇಕಡಾ 80 ರಷ್ಟು ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳಲ್ಲಿ ಶೇಕಡಾ 100 ರಷ್ಟು ಅಂಕ ಪಡೆದಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ.

Also Read : Karnataka SSLC Result 2026: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಎಸ್‌ಎಸ್‌ಎಲ್‌ಸಿ ಕೊನೆಯ ಫಲಿತಾಂಶ

ವಿಎಸ್‌ಎಸ್‌ ಆಂಗ್ಲಮಾಧ್ಯಮ ಶಾಲೆ ಮುಂದಿನ ವರ್ಷದಿಂದ ಸಂಪೂರ್ಣವಾಗಿ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯನ್ನು ಎದುರಿಸಲಿದ್ದು, ಈ ಬಾರಿಯ ಫಲಿತಾಂಶ ಕೊನೆಯ ರಾಜ್ಯ ಪಠ್ಯಕ್ರಮ ಫಲಿತಾಂಶವಾಗಿರಲಿದೆ.

Also Read : SSLC Result 2026 : ಇಂಟರ್‌ನೆಟ್‌ ಇಲ್ವಾ? ಚಿಂತೆ ಬೇಡ ! ಮೊಬೈಲ್‌ನಲ್ಲಿ ಕೇವಲ ಒಂದು SMS ಮೂಲಕ SSLC ರಿಸಲ್ಟ್ ಚೆಕ್‌ ಮಾಡಿ

ವಿದ್ಯಾರ್ಥಿಗಳ ಸಾಧನೆಗೆ ವರವಾದ ಗುರುಪರಂಪರೆಯ ಶಿಕ್ಷಣ

ಉಡುಪಿ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಮುದ್ದೂರಿನ ವಿಎಸ್‌ಎಸ್‌ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ವಿದ್ಯೆಯನ್ನಷ್ಟೇ ಅಲ್ಲಾ ಗುರುಪರಂಪರೆಯ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ಜೊತೆಗೆ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಫೌಂಡೇಶನ್‌ ಕೋರ್ಸ್‌ ಒದಗಿಸುತ್ತಿದ್ದು, ಫೌಂಡೇಶನ್‌ ಕೋರ್ಸ್‌ ವಿದ್ಯಾರ್ಥಿಗಳಿಗೆ ವಿಷಯಗಳ ಮೇಲೆ ಗಮನ ಹರಿಸೋದಕ್ಕೆ ಸಾಧ್ಯವಾಗಿದೆ.  ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶಾಲೆಯಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

VSS CBSE School Muddur Kalyani 5th Rank SSLC RESULT 2026

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories