ಜಾಗತಿಕ ಪವನ ಶಕ್ತಿಯಲ್ಲಿ ಭಾರತಕ್ಕೆ 4ನೇ ಸ್ಥಾನ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಹರ್ಷ
Mann Ki Baat | PM Modi | Wind Energy: ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಭಾರತದ ದಾಪುಗಾಲನ್ನು ಉಲ್ಲೇಖಿಸಿದ ಪ್ರಧಾನಿ, "ಇಂದು ಪವನ ಶಕ್ತಿಯು ಭಾರತದ ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯುತ್ತಿದೆ. ಭಾರತದ ಪವನ ಇಂಧನ ಉತ್ಪಾದನಾ ಸಾಮರ್ಥ್ಯವು ಈಗ 56 ಗಿಗಾವ್ಯಾಟ್ ದಾಟಿದೆ. ಈ ಸಾಧನೆಯೊಂದಿಗೆ ಭಾರತವು ವಿಶ್ವದಲ್ಲೇ ಪವನ ಶಕ್ತಿ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ" ಎಂದು ಘೋಷಿಸಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 133ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತವು ನವೀಕರಿಸಬಹುದಾದ ಇಂಧನ, ಅದರಲ್ಲೂ ವಿಶೇಷವಾಗಿ ಪವನ ಶಕ್ತಿಯಲ್ಲಿ (Wind Energy) ಸಾಧಿಸಿರುವ ಐತಿಹಾಸಿಕ ಮೈಲಿಗಲ್ಲನ್ನು ಅವರು ಶ್ಲಾಘಿಸಿದರು.
ಪವನ ಶಕ್ತಿಯಲ್ಲಿ ಹೊಸ ದಾಖಲೆ:
ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಭಾರತದ ದಾಪುಗಾಲನ್ನು ಉಲ್ಲೇಖಿಸಿದ ಪ್ರಧಾನಿ, “ಇಂದು ಪವನ ಶಕ್ತಿಯು ಭಾರತದ ಅಭಿವೃದ್ಧಿಯ ಹೊಸ ಕಥೆಯನ್ನು ಬರೆಯುತ್ತಿದೆ. ಭಾರತದ ಪವನ ಇಂಧನ ಉತ್ಪಾದನಾ ಸಾಮರ್ಥ್ಯವು ಈಗ 56 ಗಿಗಾವ್ಯಾಟ್ ದಾಟಿದೆ. ಈ ಸಾಧನೆಯೊಂದಿಗೆ ಭಾರತವು ವಿಶ್ವದಲ್ಲೇ ಪವನ ಶಕ್ತಿ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ” ಎಂದು ಘೋಷಿಸಿದರು.
ಕಲ್ಪಾಕ್ಕಂ ಫಾಸ್ಟ್ ಬ್ರೀಡರ್ ರಿಯಾಕ್ಟರ್: ಪರಮಾಣು ರಂಗದಲ್ಲಿ ಮೈಲಿಗಲ್ಲು:
ಭಾರತದ ಪರಮಾಣು ಕಾರ್ಯಕ್ರಮದ ಮಹತ್ವದ ಬೆಳವಣಿಗೆಯನ್ನು ಹಂಚಿಕೊಂಡ ಪ್ರಧಾನಿ, ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ (Fast Breeder Reactor) ‘ಕ್ರಿಟಿಕಾಲಿಟಿ’ (ಕಾರ್ಯಾಚರಣೆಯ ಆರಂಭಿಕ ಹಂತ) ಸಾಧಿಸಿದೆ ಎಂದು ತಿಳಿಸಿದರು. ಇದು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲ್ಪಟ್ಟಿದ್ದು, ಭಾರತದ ಇಂಧನ ಭದ್ರತೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ ಎಂದು ವಿಜ್ಞಾನಿಗಳನ್ನು ಅಭಿನಂದಿಸಿದರು.
ಬುದ್ಧ ಪೂರ್ಣಿಮೆಯ ಸಂದೇಶ:
ಮುಂಬರುವ ಬುದ್ಧ ಪೂರ್ಣಿಮೆಯ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ, ಗೌತಮ ಬುದ್ಧನ ವಿಚಾರಗಳು ಇಂದಿನ ಜಾಗತಿಕ ಉದ್ವಿಗ್ನತೆಯ ಸಮಯದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದರು. “ಶಾಂತಿ ಎಂಬುದು ನಮ್ಮ ಒಳಗಿನಿಂದಲೇ ಆರಂಭವಾಗುತ್ತದೆ. ತನ್ನನ್ನು ತಾನು ಗೆಲ್ಲುವುದೇ ಶ್ರೇಷ್ಠ ವಿಜಯ ಎಂದು ಬುದ್ಧ ನಮಗೆ ಬೋಧಿಸಿದ್ದಾರೆ” ಎಂದು ನೆನಪಿಸಿದರು.
ಕೆನರಾ ಬ್ಯಾಂಕ್ ಕಟ್ಟಡ ಕುಸಿತ: ಅವಶೇಷಗಳಡಿ ಸಿಲುಕಿದ ಕೋಟ್ಯಂತರ ರೂಪಾಯಿ ನಗದು, ಚಿನ್ನ!
ವಿಜ್ಞಾನ ಮತ್ತು ಪ್ರಗತಿ:
ವಿಜ್ಞಾನವು ರಾಷ್ಟ್ರದ ಪ್ರಗತಿಯೊಂದಿಗೆ ಬೆಸೆದುಕೊಂಡಿದೆ ಎಂದು ಅಭಿಪ್ರಾಯಪಟ್ಟ ಅವರು, ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಮುನ್ನಡೆಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು. ಪ್ರಸ್ತುತ ನಡೆಯುತ್ತಿರುವ ಚುನಾವಣಾ ಹಂಗಾಮಿನ ನಡುವೆಯೂ ನಾಗರಿಕರ ಇಂತಹ ಸಾಧನೆಗಳು ದೇಶಕ್ಕೆ ಹೆಮ್ಮೆ ತಂದಿವೆ ಎಂದು ಅವರು ತಿಳಿಸಿದರು.



