ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಹುಷಾರ್.! ಯಾಮಾರಿದ್ರೆ ಖಾಲಿ ಆಗುತ್ತೆ ನಿಮ್ಮ ಬ್ಯಾಂಕ್ ಖಾತೆ
Railway ticket booking scam : ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೇ ಗುರಿಯಾಗಿಸಿಕೊಂಡು ಸೈಬರ್ ಚೋರರು ಹೊಸ ಜಾಲ ಬೀಸಿದ್ದಾರೆ. ಐಆರ್‌ಸಿಟಿಸಿ (IRCTC) ಹೆಸರಿನಲ್ಲಿ ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

Railway ticket booking scam : ಬೆಂಗಳೂರು: ನೀವು ಸಮ್ಮರ್ ವೆಕೇಶನ್ ಅಥವಾ ಪ್ರವಾಸಕ್ಕೆಂದು ರೈಲ್ವೆ ಟಿಕೆಟ್ ಬುಕ್ ಮಾಡಲು ಪ್ಲಾನ್ ಮಾಡುತ್ತಿದ್ದೀರಾ ? ಹಾಗಿದ್ದರೆ ಸ್ವಲ್ಪ ತಡೆಯಿರಿ. ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೇ ಗುರಿಯಾಗಿಸಿಕೊಂಡು ಸೈಬರ್ ಚೋರರು ಹೊಸ ಜಾಲ ಬೀಸಿದ್ದಾರೆ. ಐಆರ್‌ಸಿಟಿಸಿ (IRCTC) ಹೆಸರಿನಲ್ಲಿ ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ಸೀಟು ಕನ್ಫರ್ಮ್ ಮಾಡುವ ಆಸೆಯೇ ವಂಚಕರಿಗೆ ಬಂಡವಾಳ !
ಸಾಮಾನ್ಯವಾಗಿ ರೈಲ್ವೆ ಟಿಕೆಟ್‌ಗಳು ಸಿಗುವುದು ಕಷ್ಟ. ಅದರಲ್ಲೂ ತತ್ಕಾಲ್ ಟಿಕೆಟ್ ಪಡೆಯಲು ಜನರು ಹರಸಾಹಸ ಪಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಗ್ಯಾಂಗ್, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗಳಲ್ಲಿ ‘IRCTC Connect’ ಅಥವಾ ‘IRCTC Rail’ ಎಂಬ ಹೆಸರಿನ ನಕಲಿ ಆ್ಯಪ್‌ಗಳ ಲಿಂಕ್ ಕಳುಹಿಸುತ್ತಿದೆ. “ಈ ಆ್ಯಪ್ ಮೂಲಕ ಬುಕ್ ಮಾಡಿದರೆ ಶೇ. 100ರಷ್ಟು ಕನ್ಫರ್ಮ್ ಸೀಟು ಸಿಗುತ್ತದೆ” ಎಂಬ ಆಸೆ ತೋರಿಸಿ ಜನರನ್ನು ಸೆಳೆಯಲಾಗುತ್ತಿದೆ.
ಒಮ್ಮೆ ನೀವು ಈ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದರೆ, ಅದು ನಿಮ್ಮ ಫೋನ್‌ನಲ್ಲಿರುವ ಯುಪಿಐ (UPI), ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಮತ್ತು ಓಟಿಪಿ (OTP)ಗಳನ್ನು ಕದ್ದು ವಂಚಕರಿಗೆ ರವಾನಿಸುತ್ತದೆ. ನೋಡನೋಡುತ್ತಲೇ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಬಹುದು.
Also Read : ಉದ್ಯೋಗಿಗಳ ಗಮನಕ್ಕೆ: 5 ವರ್ಷಕ್ಕಿಂತ ಮೊದಲು 5 ಲಕ್ಷ ರೂ PF ಹಿಂಪಡೆದರೆ 1.5 ಲಕ್ಷ ರೂ. ನಷ್ಟ ಸಂಭವ!
ನಕಲಿ ಆ್ಯಪ್ ಗುರುತಿಸುವುದು ಹೇಗೆ? (How to identify Fake Apps)
ವಂಚನೆಗೆ ಒಳಗಾಗದಿರಲು ಈ ಕೆಳಗಿನ ಅಂಶಗಳನ್ನು ಗಮನಿಸಿ:
APK ಫೈಲ್ ಲಿಂಕ್: ಅಧಿಕೃತ ಆ್ಯಪ್‌ಗಳು ಯಾವಾಗಲೂ ಪ್ಲೇ ಸ್ಟೋರ್‌ನಲ್ಲಿರುತ್ತವೆ. ಯಾರಾದರೂ ವಾಟ್ಸಾಪ್‌ನಲ್ಲಿ ಅಪ್ಲಿಕೇಶನ್ ಫೈಲ್ (.apk) ಕಳುಹಿಸಿದರೆ ಅದನ್ನು ಎಂದಿಗೂ ಇನ್‌ಸ್ಟಾಲ್ ಮಾಡಬೇಡಿ.
ಹೆಸರಿನ ವ್ಯತ್ಯಾಸ: ಅಧಿಕೃತ ಆ್ಯಪ್ ಹೆಸರು ‘IRCTC Rail Connect’ ಎಂದಿರುತ್ತದೆ. ವಂಚಕರು ‘IRCTC Connect’ ಅಥವಾ ‘Railway Ticket Booking’ ಎಂಬ ಆಕರ್ಷಕ ಹೆಸರುಗಳನ್ನು ಬಳಸಿರುತ್ತಾರೆ.
ಅನಗತ್ಯ ಅನುಮತಿಗಳು: ನಕಲಿ ಆ್ಯಪ್ ಇನ್‌ಸ್ಟಾಲ್ ಮಾಡುವಾಗ ನಿಮ್ಮ ಕಾಂಟ್ಯಾಕ್ಟ್ಸ್, ಕ್ಯಾಮೆರಾ ಮತ್ತು ಮೆಸೇಜ್‌ಗಳನ್ನು ನೋಡಲು ಅನುಮತಿ ಕೇಳುತ್ತದೆ. ಟಿಕೆಟ್ ಬುಕ್ ಮಾಡಲು ಇವುಗಳ ಅಗತ್ಯವಿರುವುದಿಲ್ಲ.
ವೆಬ್‌ಸೈಟ್ ಪರೀಕ್ಷಿಸಿ: ಇತ್ತೀಚೆಗೆ ‘irctc.creditmobile.site’ ನಂತಹ ಫಿಶಿಂಗ್ ಲಿಂಕ್‌ಗಳು ಹರಿದಾಡುತ್ತಿವೆ. ಅಧಿಕೃತ ವೆಬ್‌ಸೈಟ್ ಕೇವಲ irctc.co.in ಮಾತ್ರ.
ರೈಲ್ವೆ ಇಲಾಖೆಯಿಂದ ಎಚ್ಚರಿಕೆ
ಈಗಾಗಲೇ ಭಾರತೀಯ ರೈಲ್ವೆ ಸುಮಾರು 3 ಕೋಟಿಗೂ ಹೆಚ್ಚು ನಕಲಿ ಯೂಸರ್ ಐಡಿಗಳನ್ನು ಬ್ಲಾಕ್ ಮಾಡಿದೆ. “ಐಆರ್‌ಸಿಟಿಸಿ ಎಂದಿಗೂ ನಿಮ್ಮ ಪಿನ್ (PIN), ಓಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ಫೋನ್ ಮೂಲಕ ಕೇಳುವುದಿಲ್ಲ. ಟಿಕೆಟ್ ಬುಕ್ ಮಾಡಲು ಕೇವಲ ಅಧಿಕೃತ ಪ್ಲೇ ಸ್ಟೋರ್‌ನಿಂದ ಮಾತ್ರ ಆ್ಯಪ್ ಡೌನ್‌ಲೋಡ್ ಮಾಡಿ” ಎಂದು ರೈಲ್ವೆ ಸಚಿವಾಲಯ ಎಚ್ಚರಿಸಿದೆ.
Also Read : ಉದ್ಯೋಗಿಗಳ ಗಮನಕ್ಕೆ: 5 ವರ್ಷಕ್ಕಿಂತ ಮೊದಲು 5 ಲಕ್ಷ ರೂ PF ಹಿಂಪಡೆದರೆ 1.5 ಲಕ್ಷ ರೂ. ನಷ್ಟ ಸಂಭವ!
ಒಂದು ವೇಳೆ ನೀವು ಇಂತಹ ವಂಚನೆಗೆ ಒಳಗಾದರೆ ತಕ್ಷಣವೇ 1930 ಸೈಬರ್ ಕ್ರೈಮ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.
railway ticket booking scam alert cyber fraud warning



