ದಿನದ ಭವಿಷ್ಯ ಜೂನ್ 20 2026: ಈ ರಾಶಿಗಳಿಗೆ ಹಣದ ಮಳೆ, ಹೇಗಿದೆ ನಿಮ್ಮ ರಾಶಿಫಲ
ಮೃಗಶಿರಾ ನಕ್ಷತ್ರ ಹಾಗೂ ಗೃಹಗಳ ಸಂಯೋಜನೆಯಿಂದಾಗಿ ಕೆಲವು ರಾಶಿಗಳಿಗೆ ಅನಿರೀಕ್ಷಿತ ರಾಜಯೋಗದ ಜೊತೆಗೆ ಆಕಸ್ಮಿಕ ಧನಲಾಭವಾಗಲಿದೆ. ಮೇಷರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ರಾಶಿಗಳ ರಾಶಿಫಲ ಹೇಗಿದೆ ಎಂದು ತಿಳಿಯೋಣಾ.

Kannada Horoscope : ದಿನಭವಿಷ್ಯ ಜೂನ್ 20 2026 ಶನಿವಾರ. ಆಂಜನೇಯ ಹಾಗೂ ಶನಿದೇವರ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನ. ಮೃಗಶಿರಾ ನಕ್ಷತ್ರ ಹಾಗೂ ಗೃಹಗಳ ಸಂಯೋಜನೆಯಿಂದಾಗಿ ಕೆಲವು ರಾಶಿಗಳಿಗೆ ಅನಿರೀಕ್ಷಿತ ರಾಜಯೋಗದ ಜೊತೆಗೆ ಆಕಸ್ಮಿಕ ಧನಲಾಭವಾಗಲಿದೆ. ಮೇಷರಾಶಿಯಿಂದ ಮೀನರಾಶಿಯವರೆಗೆ ಒಟ್ಟು 12 ರಾಶಿಗಳ ರಾಶಿಫಲ ಹೇಗಿದೆ ಎಂದು ತಿಳಿಯೋಣಾ.
ಮೇಷ ರಾಶಿ (Aries)
ನಿಮ್ಮ ಪಾಲಿಗೆ ಇಂದು ಅತ್ಯಂತ ಸಕಾರಾತ್ಮಕವಾದ ದಿನ. ಉದ್ಯೋಗಿಗಳಿಗೆ ಉನ್ನತ ಸ್ಥಾನ ದೊರೆಯಲಿದೆ.ಪ್ರಶಂಸೆ ಮತ್ತು ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಭದ್ರವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ದೂರಾಗಲಿವೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಳೆಯ ಹೂಡಿಕೆಗಳಿಂದ ಇಂದು ಉತ್ತಮ ಆದಾಯ ಬರಲಿದ್ದು, ಹೊಸ ಕಾರ್ಯಗಳಿಗೆ ಕೈಹಾಕಲು ಸೂಕ್ತ ದಿನವಾಗಿದೆ.
ವೃಷಭ ರಾಶಿ (Taurus)
ವೃಷಭರಾಶಿಯವರು ಇಂದು ಮಾತಿನ ಮೇಲೆ ನಿಗಾ ಇಡುವುದು ಅತ್ಯಂತ ಅಗತ್ಯ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಿನಾಕಾರಣ ವಾದವಿವಾದಗಳು ಉಂಟಾಗಬಹುದು, ತಾಳ್ಮೆಯಿಂದಿರಿ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾಗುವುದರಿಂದ ಬಜೆಟ್ ಕಡೆ ಗಮನಹರಿಸಿ. ಹೊಸ ಉದ್ಯಮ ಆರಂಭಿಸುವ ಆಲೋಚನೆ ಇದ್ದರೆ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. ಪ್ರಯಾಣದ ಸಂದರ್ಭದಲ್ಲಿ ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕಣ್ಣು ಅಥವಾ ಉದರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.
ಮಿಥುನ ರಾಶಿ (Gemini)
ಅದೃಷ್ಟದ ದಿನವಾಗಿದ್ದು, ಕೈಗೆತ್ತಿಕೊಂಡ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕಲಾತ್ಮಕ ಮತ್ತು ಮಾಧ್ಯಮ ರಂಗದಲ್ಲಿರುವವರಿಗೆ ದೊಡ್ಡ ಮಟ್ಟದ ಅವಕಾಶಗಳು ಸಿಗಲಿವೆ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗಳಿಂದ ದೊಡ್ಡ ಪ್ರಮಾಣದ ಧನಲಾಭವಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗದ ಆಫರ್ ಬರಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸು ಪ್ರಫುಲ್ಲವಾಗಲಿದೆ.
ಕರ್ಕಾಟಕರಾಶಿ (Cancer)
ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಮಾನಸಿಕ ನೆಮ್ಮದಿ ಕೊಂಚ ಕಡಿಮೆಯಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ, ಯಾವುದೇ ಮಹತ್ವದ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಯೋಗ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ಸಿಗಲಿದೆ. ಹಣಕಾಸಿನ ವಹಿವಾಟಿನಲ್ಲಿ ಯಾರನ್ನೂ ಸುಲಭವಾಗಿ ನಂಬಬೇಡಿ.
ಸಿಂಹ ರಾಶಿ (Leo)
ಆರ್ಥಿಕವಾಗಿ ಸುಧಾರಣೆ ಕಂಡು ಬರಲಿದೆ. ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರಲಿದ್ದು, ಹೊಸ ಹೂಡಿಕೆಗಳಿಗೆ ಇದು ಸುವರ್ಣ ಕಾಲ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರ ಸಂಪರ್ಕ ಸಿಗಲಿದ್ದು, ಲಾಭ ದುಪ್ಪಟ್ಟಾಗಲಿದೆ. ಪ್ರೇಮಿಗಳಿಗೆ ಮನೆಯಲ್ಲಿ ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ. ಆರೋಗ್ಯ ಉತ್ತಮವಾಗಿರಲಿದ್ದು, ಹೊಸ ಉತ್ಸಾಹದಿಂದ ಕೆಲಸ ಮಾಡುವಿರಿ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕನ್ಯಾ ರಾಶಿ (Virgo)
ಕೆಲಸದ ಸ್ಥಳದಲ್ಲಿ ಶತ್ರುಗಳ ಉಪಟಳ ಹೆಚ್ಚಾಗಬಹುದು, ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಹೊರಗಿನ ಆಹಾರ ಸೇವನೆಯನ್ನು ಆದಷ್ಟು ತಪ್ಪಿಸಿ. ಆರ್ಥಿಕವಾಗಿ ಆದಾಯಕ್ಕಿಂತ ಖರ್ಚು ಅಧಿಕವಾಗುವ ಸಾಧ್ಯತೆಯಿದೆ. ಉದ್ಯಮಿಗಳು ಸಾಲ ಕೊಡುವುದನ್ನು ಅಥವಾ ತೆಗೆದುಕೊಳ್ಳುವುದನ್ನು ಮಾಡಬೇಡಿ. ಕೌಟುಂಬಿಕವಾಗಿ ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಿ ನಿಲ್ಲಲಿದೆ.
ತುಲಾ ರಾಶಿ (Libra)
ಮನಸ್ಸು ಪ್ರಶಾಂತವಾಗಿರುತ್ತದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮದುವೆ ಮಾತುಕತೆಗಳು ಇಂದು ಯಶಸ್ವಿಯಾಗಲಿವೆ. ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ತಲುಪುವಿರಿ, ಹೊಸ ಪ್ರೊಜೆಕ್ಟ್‌ಗಳು ನಿಮಗೆ ಸಿಗಲಿವೆ. ವಿದೇಶಿ ವ್ಯಾಪಾರ ಮಾಡುವವರಿಗೆ ಭರಪೂರ ಲಾಭ ಸಿಗಲಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಆರ್ಥಿಕವಾಗಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಸಣ್ಣ ಪ್ರವಾಸಗಳು ಮನಸ್ಸಿಗೆ ಮುದ ನೀಡಲಿವೆ. ತಂದೆಯ ಕಡೆಯಿಂದ ಆಸ್ತಿ ಸಿಗುವ ಯೋಗವಿದೆ.
ವೃಶ್ಚಿಕ ರಾಶಿ (Scorpio)
ಕೆಲಸ ಕಾರ್ಯಗಳಲ್ಲಿ ಜಾಗರೂಕತೆ ಇರಬೇಕು. ಅವಸರದ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಂಭವವಿದ್ದು, ಸಿದ್ಧರಾಗಿರಿ. ವಾಹನ ಚಾಲನೆ ಮಾಡುವಾಗ ಅತಿ ವೇಗ ಬೇಡ, ಸಂಚಾರ ನಿಯಮಗಳನ್ನು ಪಾಲಿಸಿ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸಿನ ಕೊರತೆ ಎದುರಾಗದಿದ್ದರೂ ಅತಿಯಾದ ವೆಚ್ಚಗಳಿಗೆ ಬ್ರೇಕ್ ಹಾಕಿ. ಸಂಗಾತಿಯೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಿ, ವಾದಗಳನ್ನು ಬೆಳೆಸಬೇಡಿ. ಶನಿ ದೇವರ ಪ್ರಾರ್ಥನೆ ಒಳಿತನ್ನು ಮಾಡಲಿದೆ.
ಧನಸ್ಸು ರಾಶಿ (Sagittarius)
ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಲಿವೆ. ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಯೋಗವಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಸೂಕ್ತ ಮನ್ನಣೆ ಸಿಗಲಿದ್ದು, ಸಂಬಳ ಹೆಚ್ಚಳದ ಸುದ್ದಿ ಸಿಗಬಹುದು. ಉದ್ಯಮಿಗಳಿಗೆ ನಷ್ಟದಲ್ಲಿದ್ದ ವ್ಯವಹಾರಗಳು ಲಾಭದ ಹಳಿಗೆ ಮರಳಲಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಸೋದರರಿಂದ ಆರ್ಥಿಕ ಸಹಾಯ ಸಿಗಲಿದೆ. ಹಳೆಯ ಹೂಡಿಕೆಗಳು ಈಗ ಕೈ ಹಿಡಿಯಲಿವೆ. ಸಮಾಜಮುಖಿ ಕೆಲಸಗಳಿಂದ ಕೀರ್ತಿ ಹೆಚ್ಚಾಗಲಿದೆ.
ಮಕರ ರಾಶಿ (Capricorn)
ದೈನಂದಿನ ದಿನಚರಿಯಲ್ಲಿ ಬದಲಾವಣೆ ಕಂಡುಬರಲಿದೆ. ಹೊಸ ಬಿಜಿನೆಸ್ ಪ್ಲಾನ್ ಮಾಡಲು ಇದು ಯೋಗ್ಯ ಸಮಯವಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಕಚೇರಿಯ ಕಠಿಣ ಕೆಲಸಗಳು ಸುಲಭವಾಗಲಿವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ದೈಹಿಕವಾಗಿ ಎನರ್ಜಿ ಹೆಚ್ಚಾಗಿದ್ದು, ದಿನವಿಡೀ ಚುರುಕಾಗಿರುವಿರಿ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚರ್ಚೆಗಳು ನಡೆಯಲಿವೆ. ಸಾಲದ ಹೊರೆಗಳಿಂದ ಮುಕ್ತಿ ಸಿಗುವ ಹಾದಿ ಸುಲಭವಾಗಲಿದೆ.
ಕುಂಭ ರಾಶಿ (Aquarius)
ಯಾವುದೇ ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಕೆಲಸದ ಒತ್ತಡ ಹೆಚ್ಚಾಗಬಹುದು. ಅನಗತ್ಯ ಯೋಚನೆಗಳಿಂದ ಮಾನಸಿಕ ಕಿರಿಕಿರಿ ಉಂಟಾಗಬಹುದು, ಸಕಾರಾತ್ಮಕವಾಗಿರಿ. ವ್ಯಾಪಾರದಲ್ಲಿ ಸ್ಪರ್ಧಿಗಳಿಂದ ಕಠಿಣ ಸವಾಲು ಎದುರಾಗಲಿದೆ. ನಿಶ್ಚಿತ ಆದಾಯ ಇರಲಿದ್ದರೂ, ಅನಿರೀಕ್ಷಿತ ವೈದ್ಯಕೀಯ ಖರ್ಚುಗಳು ಬರಬಹುದು. ಪ್ರೇಮ ಜೀವನದಲ್ಲಿ ತಪ್ಪು ತಿಳುವಳಿಕೆಗಳು ಬರದಂತೆ ನೋಡಿಕೊಳ್ಳಿ. ಹಠಮಾರಿ ಸ್ವಭಾವವನ್ನು ಬಿಡುವುದು ಒಳಿತು.
ಮೀನ ರಾಶಿ (Pisces)
ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ. ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲೂ ಜಯ ನಿಮ್ಮದಾಗಲಿದೆ. ಕೌಟುಂಬಿಕವಾಗಿ ಸಂತೋಷ, ನೆಮ್ಮದಿ ನೆಲೆಸಲಿದ್ದು, ಮಕ್ಕಳಿಂದ ಹೆಮ್ಮೆ ಪಡುವಂತಹ ಸುದ್ದಿ ಬರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇಂದು ಪ್ರಶಸ್ತ ದಿನ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಸಿಗಲಿದೆ.



