ಬಿಸಿಲಿನಿಂದ ನಿಮ್ಮ ಕೋಮಲ ಪಾದಗಳು ಟ್ಯಾನ್ ಆಗಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ
ಬಿಸಿಲಿನಿಂದಾಗಿ ಪಾದದ ಮೇಲಾದ ಚಪ್ಪಲಿನ ಟ್ಯಾನ್‌ಗಳನ್ನು ಹೋಗಲಾಡಿಸಲು ಸಿಂಪಲ್ ಆಗಿ ಈ ಮನೆ ಮದ್ದುಗಳನ್ನು ಟ್ರೈ ಮಾಡಿ..
Foot Tanning Remedies: ಈ ವರ್ಷ ದೇಶಾದ್ಯಂತ ಬಿಸಿಲಿನ ಬೇಗೆ ಮಿತಿಮೀರಿದೆ. ಉಷ್ಣಗಾಳಿ, ತಾಪಮಾನದ ಹೆಚ್ಚಳದಿಂದ ಜನರು ಹೈರಾಣರಾಗಿದ್ದಾರೆ. ಮನೆಯಿಂದ ಹೊರಗೆ ಕಾಲಿಡಲು ಯೋಚಿಸುವಂತಹ ಪರಿಸ್ಥಿತಿ ತಲೆದೂರಿದೆ. ಆದರೂ ಕೆಲವು ಅನಿವಾರ್ಯ ಕೆಲಸಗಳಿಗೆ, ಫೀಲ್ಡ್ ವರ್ಕ್‌ನವರು ಬಿಸಿಲಿಗೆ ಹೋಗಲೇಬೇಕಾದ ಅನಿವಾರ್ಯವಿದೆ. ಆದರೆ ಅಂತಹ ತೀವ್ರ ಬಿಸಿಲಿಗೆ ಹೋದಾಗ ಕೇವಲ ಮುಖ ಮತ್ತು ಕೈಗಳು ಟ್ಯಾನ್ ಆಗುವುದಿಲ್ಲ. ನಿಮ್ಮ ಕೋಮಲ ಪಾದಗಳ ಮೇಲೂ ಸಹ ವಿಶೇಷವಾಗಿ ಪರಿಣಾಮ ಬೀರುತ್ತದೆ. ತೆರೆದ ಸ್ಯಾಂಡಲ್ ಮತ್ತು ಚಪ್ಪಲಿಗಳನ್ನು ಧರಿಸುವುದರಿಂದ ಪಾದಗಳ ಕೆಲವು ಭಾಗಗಳು ಸೂರ್ಯನ ನೇರ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತವೆ. ಅದರ ಪರಿಣಾಮವಾಗಿ ಪಾದಗಳು ಅಲ್ಲಲ್ಲಿ ಟ್ಯಾನ್ ಆಗುತ್ತದೆ. ಅಸಮ ಚರ್ಮದ ಟೋನ್ ಮತ್ತು ಸ್ಪಷ್ಟವಾದ ಟ್ಯಾನಿಂಗ್ ಗೆರೆಗಳು ಮೂಡುತ್ತವೆ. ಕ್ರಮೇಣ, ಪಾದಗಳ ಮೇಲಿನ ಭಾಗಗಳು ಕಪ್ಪಾಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಒಟ್ಟಾರೆ ಚರ್ಮದ ಟೋನ್ ಬಣ್ಣ ಕಳೆದುಕೊಳ್ಳುತ್ತದೆ. ಟ್ಯಾನಿಂಗ್ ಚರ್ಮದ ಅಂದನ್ನು ಕೆಡಿಸುವುದರ ಜೊತೆಗೆ ಚರ್ಮವನ್ನು ಒಣಗಿಸಿ ಮಂದವಾಗಿಸುತ್ತದೆ. ಕಾಲುಗಳ ಸೌಂದರ್ಯವನ್ನು ಕುಗ್ಗಿಸುತ್ತದೆ ಮತ್ತು ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ದುಬಾರಿ ಕ್ರೀಮ್‌ಗಳ ಮೊರೆ ಹೋಗಬೇಕೆಂದಿಲ್ಲ. ಬದಲಿಗೆ ಮನೆಯಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಟ್ಯಾನಿಂಗ್ ದೂರ ಮಾಡಬಹುದಾದ ಸುಲಭದ ಮನೆ ಮದ್ದುಗಳು ಯಾವುವು ಎಂದು ನೋಡೋಣ.
ಟ್ಯಾನಿಂಗ್ ದೂರ ಮಾಡಲು ಮನೆ ಮದ್ದು
ಆಲೂಗಡ್ಡೆ ರಸ
ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ, ಹಠಮಾರಿ ಟ್ಯಾನಿಂಗ್ ಅನ್ನು ದೂರಮಾಡಲು ತುಂಬಾ ಉಪಯುಕ್ತವಾಗಿದೆ. ಬಹಳ ಹಿಂದಿನಿಂದಲೂ ಆಲೂಗಡ್ಡೆ ರಸವನ್ನು ಚರ್ಮದ ಶುದ್ಧೀಕರಣ ಮತ್ತು ಟ್ಯಾನ್ ತೆಗೆಯಲು ಬಳಸಲಾಗುತ್ತಿದೆ. ಆಲೂಗಡ್ಡೆ ರಸದಲ್ಲಿರುವ ನೈಸರ್ಗಿಕ ಕಿಣ್ವಗಳು ಮತ್ತು ಪಿಷ್ಟವು ಚರ್ಮವನ್ನು ಉರಿಯೂತದಿಂದ ಶಮನಗೊಳಿಸುತ್ತದೆ ಮತ್ತು ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಯಮಿತ ಬಳಕೆಯಿಂದ, ಕಪ್ಪು ಕಲೆಗಳು ಕ್ರಮೇಣ ದೂರವಾಗುತ್ತವೆ.
ಪರಿಣಾಮಕಾರಿ ಮಾಸ್ಕ್
ಈ ಸರಳ ಮಾಸ್ಕ್ ತಯಾರಿಸಲು, ಆಲೂಗಡ್ಡೆಯ ರಸ ತೆಗೆಯಿರಿ. ಅದಕ್ಕೆ 1 ಟೀ ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿ. ಅದನ್ನು ಟ್ಯಾನ್ ಆದ ಭಾಗಕ್ಕೆ ಹಚ್ಚಿ. ಟ್ಯಾನ್ ದೂರಮಾಡಲು ಮತ್ತೊಂದು ಪರಿಣಾಮಕಾರಿ ಮಾಸ್ಕ್ ಎಂದರೆ 1 ಟೀ ಚಮಚ ಕಡಲೆ ಹಿಟ್ಟಿಗೆ, 1 ಟೀ ಚಮಚ ನಿಂಬೆ ರಸ ಮತ್ತು 1/2 ಟೀ ಚಮಚ ಜೇನುತುಪ್ಪವನ್ನು ಬೆರೆಸಿ ನಯವಾದ ಪೇಸ್ಟ್ ಮಾಡಿ. ಅದನ್ನು ಟ್ಯಾನ್ ಆದ ಭಾಗಕ್ಕೆ ನಯವಾಗಿ ಹಚ್ಚಿ. ಸ್ವಲ್ಪ ಸಮಯದ ಬಳಿಕ ತೊಳೆಯಿರಿ. ಚರ್ಮದ ಮೇಲೆ ಇನ್ನೂ ಉತ್ತಮ ಪರಿಣಾಮ ಬೀರುವ ಮತ್ತೊಂದು ಮಾಸ್ಕ್ ಎಂದರೆ ಸ್ವಲ್ಪ ಕಾಫಿ ಪುಡಿಗೆ ಅರಿಶಿನ ಸೇರಿಸಿ. ಅದನ್ನು ಮೊಸರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿ. ಇದೂ ಚರ್ಮಕ್ಕೆ ಕಾಂತಿಯನ್ನು ತಂದುಕೊಡಲು ಬಹಳ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ರಾತ್ರಿ ಪಾದಕ್ಕೆ ತುಪ್ಪ ಹಚ್ಚಿದರೆ ಏನಾಗುತ್ತೆ ಗೊತ್ತಾ? ಬೆಳಿಗ್ಗೆ ಎದ್ದಾಗ ನೀವೇ ಆಶ್ಚರ್ಯ ಪಡ್ತೀರಾ
ಮಾಸ್ಕ್ ಹಾಕುವ ಮೊದಲು ಇದನ್ನು ತಪ್ಪದೇ ಮಾಡಿ
ಮೊದಲಿಗೆ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿ ಒಣಗಿಸಿ. ನಂತರ ಮಾಸ್ಕ್ ಅನ್ನು ಕಂದುಬಣ್ಣದ ಪ್ರದೇಶಗಳಿಗೆ ಸಮವಾಗಿ ಅನ್ವಯಿಸಿ. 15–20 ನಿಮಿಷಗಳ ಕಾಲ ಬಿಡಿ. ಸ್ವಲ್ಪ ಒಣಗಿದ ನಂತರ, ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಉಜ್ಜಿ. ಅಂತಿಮವಾಗಿ, ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಹಚ್ಚಿ. ಇದನ್ನು ವಾರಕ್ಕೆ 2–3 ಬಾರಿ ಬಳಸಬಹುದು.
ಶೀಘ್ರ ಪರಿಣಾಮಕ್ಕಾಗಿ ಹೀಗೆ ಮಾಡಿ
ಕಲೆಗಳು ಶೀಘ್ರವಾಗಿ ದೂರವಾಗಲು, ಮಾಸ್ಕ್ ಹಚ್ಚುವ ಮೊದಲು ನಿಮ್ಮ ಪಾದಗಳನ್ನು ಐದು ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಮಲಗುವ ಮುನ್ನ ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಹಚ್ಚಿ. ಅದು ನಿಮ್ಮ ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.



