ಯೂಟ್ಯೂಬ್‌ನಿಂದ ಭರ್ಜರಿ ಕೊಡುಗೆ: ಇನ್ಮುಂದೆ ‘ಫ್ರೀ’ ಬಳಕೆದಾರರಿಗೂ ಸಿಗಲಿದೆ ಪಿಕ್ಚರ್-ಇನ್-ಪಿಕ್ಚರ್ ಫೀಚರ್ 

ದೀರ್ಘಾವಧಿಯ ಪಾಡ್‌ಕಾಸ್ಟ್ ಅಥವಾ ಟಾಕ್ ಶೋ ನೋಡುವವರಿಗೆ ಇದು ವರದಾನ. ಕಮೆಂಟ್ ಮತ್ತು ಶಿಫಾರಸುಗಳ ಕಿರಿಕಿರಿ ಇಲ್ಲದೆ, ಸರಳ ಇಂಟರ್‌ಫೇಸ್ ಮೂಲಕ ಹ್ಯಾಂಡ್ಸ್-ಫ್ರೀ ಅನುಭವ ನೀಡುತ್ತದೆ.

ಯೂಟ್ಯೂಬ್ (YouTube) ಕೋಟ್ಯಾಂತರ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನ ಕೇವಲ ‘ಪ್ರೀಮಿಯಂ’ ಚಂದಾದಾರರಿಗೆ ಮಾತ್ರ ಸೀಮಿತವಾಗಿದ್ದ ಪಿಕ್ಚರ್-ಇನ್-ಪಿಕ್ಚರ್ (PiP) ವೈಶಿಷ್ಟ್ಯವನ್ನು ಈಗ ಜಗತ್ತಿನಾದ್ಯಂತ ಇರುವ ಉಚಿತ ಬಳಕೆದಾರರಿಗೂ ವಿಸ್ತರಿಸಲು ಕಂಪನಿ ಮುಂದಾಗಿದೆ.

ಏನಿದು ಪಿಕ್ಚರ್-ಇನ್-ಪಿಕ್ಚರ್ (PiP) ?

  • ನೀವು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುತ್ತಲೇ ಮೊಬೈಲ್‌ನಲ್ಲಿ ವಾಟ್ಸಾಪ್ ಮೆಸೇಜ್ ಮಾಡಬೇಕೆ? ಅಥವಾ ಬ್ರೌಸಿಂಗ್ ಮಾಡಬೇಕೆ? ಇನ್ಮುಂದೆ ಇದು ಸುಲಭ.
  • ನೀವು ವಿಡಿಯೋ ಪ್ಲೇ ಆಗುತ್ತಿರುವಾಗ ಆಪ್‌ನಿಂದ ಹೊರಬಂದರೂ, ವಿಡಿಯೋ ಸಣ್ಣ ವಿಂಡೋ ರೂಪದಲ್ಲಿ ಸ್ಕ್ರೀನ್ ಮೇಲೆ ಪ್ಲೇ ಆಗುತ್ತಲೇ ಇರುತ್ತದೆ.
  • ಈ ಸಣ್ಣ ಪ್ಲೇಯರ್ ಅನ್ನು ನೀವು ಸ್ಕ್ರೀನ್‌ನ ಎಲ್ಲಿ ಬೇಕಾದರೂ ಸರಿಸಬಹುದು ಮತ್ತು ಅದರ ಗಾತ್ರವನ್ನು ಬದಲಾಯಿಸಬಹುದು.

ಉಚಿತವಾಗಿದ್ರೂ ಕಂಡಿಷನ್‌ ಅಪ್ಲೇ

ಉಚಿತ ಬಳಕೆದಾರರಿಗೆ ಈ ಸೌಲಭ್ಯ ಸಿಕ್ಕರೂ ಒಂದು ಕಂಡೀಷನ್ ಇದೆ. ಸಂಗೀತ (Music Videos) ವಿಡಿಯೋಗಳಿಗೆ ಇದು ಅನ್ವಯಿಸುವುದಿಲ್ಲ. ಕೇವಲ ಸಾಮಾನ್ಯ ವಿಡಿಯೋಗಳಿಗೆ ಮಾತ್ರ PiP ಮೋಡ್ ಲಭ್ಯವಿರುತ್ತದೆ. ಮ್ಯೂಸಿಕ್ ವಿಡಿಯೋಗಳನ್ನು ಬ್ಯಾಕ್‌ಗ್ರೌಂಡ್‌ನಲ್ಲಿ ಕೇಳಲು ಇಂದಿಗೂ ಪ್ರೀಮಿಯಂ ಚಂದಾದಾರಿಕೆ ಅನಿವಾರ್ಯ.

Also Read : ಒಪ್ಪೋ ಫೈಂಡ್ X10 : 8000mAh ಬ್ಯಾಟರಿ , 200MP ಕ್ಯಾಮೆರಾ – ಬೆಲೆ ಎಷ್ಟು ಗೊತ್ತಾ ?

ಪ್ರೀಮಿಯಂ ಬಳಕೆದಾರರಿಗಾಗಿ ಬರಲಿವೆ ಹೊಸ AI ಫೀಚರ್‌ಗಳು

ಉಚಿತ ಬಳಕೆದಾರರಿಗೆ PiP ನೀಡುತ್ತಿರುವ ಬೆನ್ನಲ್ಲೇ, ಪ್ರೀಮಿಯಂ ಸದಸ್ಯರಿಗಾಗಿ ಯೂಟ್ಯೂಬ್ ಕೆಲವು ಅದ್ಬುತ ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ:

ಆಟೋ ಸ್ಪೀಡ್ (Auto Speed): ಇದು ಕೃತಕ ಬುದ್ಧಿಮತ್ತೆ (AI) ಬಳಸಿ ವಿಡಿಯೋದ ವೇಗವನ್ನು ತಾನಾಗಿಯೇ ನಿರ್ಧರಿಸುತ್ತದೆ. ವಿಡಿಯೋದಲ್ಲಿ ಅನಗತ್ಯ ವಿರಾಮ ಅಥವಾ ಪುನರಾವರ್ತನೆಗಳಿದ್ದಾಗ ವೇಗ ಹೆಚ್ಚಿಸುತ್ತದೆ ಮತ್ತು ಪ್ರಮುಖ ಭಾಗಗಳಲ್ಲಿ ವೇಗ ತಗ್ಗಿಸಿ ಸ್ಪಷ್ಟತೆ ನೀಡುತ್ತದೆ.

Also Read : Google I/O 2026 : ಆಂಡ್ರಾಯ್ಡ್ 17 ಮತ್ತು ಜೆಮಿನಿ AI ಕ್ರಾಂತಿ ! ಪಿಕ್ಸೆಲ್ 11 ಏನಿದು ಹೊಸ ಫೀಚರ್ಸ್‌

ಆನ್ ದಿ ಗೋ ಕಂಟ್ರೋಲ್ (On-the-go Control)

ದೀರ್ಘಾವಧಿಯ ಪಾಡ್‌ಕಾಸ್ಟ್ ಅಥವಾ ಟಾಕ್ ಶೋ ನೋಡುವವರಿಗೆ ಇದು ವರದಾನ. ಕಮೆಂಟ್ ಮತ್ತು ಶಿಫಾರಸುಗಳ ಕಿರಿಕಿರಿ ಇಲ್ಲದೆ, ಸರಳ ಇಂಟರ್‌ಫೇಸ್ ಮೂಲಕ ಹ್ಯಾಂಡ್ಸ್-ಫ್ರೀ ಅನುಭವ ನೀಡುತ್ತದೆ.

ಮೇಲ್ದರ್ಜೆಗೇರಿದ ಯೂಟ್ಯೂಬ್‌ ತಂತ್ರಜ್ಞಾನ

ಇಂದಿನ ಕಾಲದಲ್ಲಿ ಜನರು ಮಲ್ಟಿಟಾಸ್ಕಿಂಗ್ (ಒಂದೇ ಸಮಯದಲ್ಲಿ ಹಲವು ಕೆಲಸ) ಇಷ್ಟಪಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಯೂಟ್ಯೂಬ್ ತನ್ನ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುತ್ತಿದೆ. ಈ ಹೊಸ ಅಪ್‌ಡೇಟ್ ಹಂತಹಂತವಾಗಿ ಎಲ್ಲಾ ದೇಶಗಳ ಮತ್ತು ಎಲ್ಲಾ ಡಿವೈಸ್‌ಗಳ ಬಳಕೆದಾರರಿಗೆ ತಲುಪಲಿದೆ.

YouTube Opens Picture in Picture Feature to Free Users Worldwide

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories