ಉಡುಪಿ: ಹಳೆ ಮನೆ ರಿಪೇರಿ ವೇಳೆ ಗೋಡೆ ಕುಸಿತ : ಕಲ್ಲು ಬಿದ್ದು ವ್ಯಕ್ತಿ ದುರ್ಮರಣ
ಉಡುಪಿ: ಹಳೆಯ ಮನೆಯ ರಿಪೇರಿ ಕಾಮಗಾರಿ ನಡೆಸುತ್ತಿದ್ದ ವೇಳೆ ಗೋಡೆ ಕುಸಿದು ಕಲ್ಲು ಎದೆಗೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಉಡುಪಿ ನಿವಾಸಿ ಉಮೇಶ ನಾಯ್ಕ (54) ಎಂದು ಗುರುತಿಸಲಾಗಿದೆ.

ಇವರು 80 ಬಡಗುಬೆಟ್ಟು ಗ್ರಾಮದ ಆದರ್ಶ ನಗರದಲ್ಲಿ ವಾಸವಾಗಿದ್ದರು. ಭಾನುವಾರ ಸಂಜೆ ಸುಮಾರು 5.30ರ ವೇಳೆಗೆ ತಮ್ಮ ಹಳೆಯ ಮನೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಗೋಡೆ ಕುಸಿಯುವ ಲಕ್ಷಣ ಕಂಡು ತಕ್ಷಣ ಪಕ್ಕಕ್ಕೆ ಸರಿಯಲು ಯತ್ನಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಗೋಡೆಯ ಕೆಳಭಾಗದಲ್ಲಿದ್ದ ಕಲ್ಲೊಂದು ಎದೆ ಭಾಗಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
Also Read: ಮನೆಯಿಂದ ಲೈಸೆನ್ಸ್ ಬಂದೂಕು ಕಳವು : ಗಂಗೊಳ್ಳಿಯಲ್ಲಿ ಪ್ರಕರಣ ದಾಖಲು
ಗಾಯದ ತೀವ್ರತೆಗೆ ಬಾಯಿಯಿಂದ ಹಾಗೂ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದು, ಅವರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 7.45ರ ಸುಮಾರಿಗೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Udupi Wall collapses during renovation of old house Man dies after falling stone