“ಮಗುವನ್ನು ಭೇಟಿ ಮಾಡುವುದು ತಾಯಿಯ ಜನ್ಮಸಿದ್ಧ ಹಕ್ಕು: ಮಗುವಿನ ವಿರೋಧವಿದ್ದರೂ ತಾಯಿಯ ಮಮತೆಗೆ ಕಾನೂನಿನ ರಕ್ಷಣೆ!”

ತಂದೆಯ ಮರಣದ ನಂತರ ತಾಯಿಯೇ ಮೊದಲ ನೈಸರ್ಗಿಕ ಪಾಲಕಿ ಎಂದು ಹೇಳಿದ ರಾಜ್ಯ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಮಗುವನ್ನು ಭೇಟಿ ಮಾಡಲು ಅವಕಾಶ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ರಾಜ್ಯ ಹೈಕೋರ್ಟ್​ ಮಗುವನ್ನು ಭೇಟಿ ಮಾಡುವುದು ಆಕೆಯ ನೈಸರ್ಗಿಕ ಹಕ್ಕು ಎಂದು ವಾಖ್ಯಾನಿಸಿದೆ. ಮಗುವಿಗೆ ತಾಯಿಯಿಂದ ಗಂಭೀರ ಅಪಾಯವಿದೆ ಎಂದು ಕೋರ್ಟ್ ಎದುರು ಸಾಬೀತುಪಡಿಸಿದ ಹೊರತು, ಇನ್ಯಾವುದೇ ಕಾರಣಗಳಿಂದ ತಾಯಿ ಹಾಗೂ ಮಗುವಿನ ಭೇಟಿಯನ್ನು ನಿರಾಕರಿಸುವ ಹಕ್ಕು ನ್ಯಾಯಾಂಗಕ್ಕಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಅರ್ಜಿದಾರ ಮಹಿಳೆಯು 2025ರಲ್ಲಿ ಪತಿಯನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಪತಿಯ ಮನೆಯ ಆಸ್ತಿ ವಿಚಾರವಾಗಿ ಅತ್ತೆ ಸೊಸೆ ನಡುವೆ ಶುರುವಾದ ಕಲಹ ಕೋರ್ಟ್ ಮೆಟ್ಟಿಲೇರಿತ್ತು. ಇದಾದ ಬಳಿಕ ಮಹಿಳೆಯ ಅತ್ತೆ ಹಾಗೂ ನಾದಿನಿ ಅರ್ಜಿದಾರ ಮಹಿಳೆಯ 11 ವರ್ಷದ ಮಗುವಿನ ಪಾಲನೆಯ ಹಕ್ಕು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈ ವೇಳೆ ತಾಯಿ ಮಗುವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು ಮಗು ಹಾಗೂ ತಾಯಿಯ ಭೇಟಿಯನ್ನು ನಿರ್ಬಂಧಿಸಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಮಹಿಳೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಮೈಸೂರು ಪಾಲಿಕೆಯ ‘ಕನ್ನಡಿ’ ತಂತ್ರ: ಬಹಿರಂಗ ಮೂತ್ರ ವಿಸರ್ಜಿಸುವವರಿಗೆ ಇನ್ನು ‘ಮುಖದರ್ಶನ’ ಭಾಗ್ಯ!

ಮಗು ಹಾಗೂ ತಾಯಿಯ ಪರಸ್ಪರ ಭೇಟಿಯಾಗುವುದು ತಾಯಿಗಿರುವ ನೈಸರ್ಗಿಕ ಹಕ್ಕು. ಒಂದು ವೇಳೆ ಮಗುವೇ ನನಗೆ ತಾಯಿ ಬೇಡ ಎಂದರೂ ಅದನ್ನು ಕೋರ್ಟ್ ಪರಿಗಣಿಸಲು ಸಾಧ್ಯವಿಲ್ಲ. ಅಜ್ಜಿಯ ವಶದಲ್ಲಿರುವ ಮಗು, ತಾಯಿಯ ಮೇಲೆ ಅಜ್ಜಿಯ ಪ್ರಭಾವದಿಂದಾಗಿ ದ್ವೇಷ ಬೆಳೆಸಿಕೊಂಡಿರಬಹುದು. ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್‌ಶಿಪ್ ಕಾಯ್ದೆಯ ಪ್ರಕಾರ, ತಂದೆಯ ಮರಣದ ನಂತರ ತಾಯಿಯೇ ಮೊದಲ ನೈಸರ್ಗಿಕ ಪಾಲಕಿ ಎಂದು ಹೇಳಿದ ರಾಜ್ಯ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories