ನಿಮ್ಮ ಮನೆಯ ಎಸಿಯಲ್ಲಿ ಹಲ್ಲಿ ಸೇರಿದರೆ ಏನು ಮಾಡುವುದು? ಈ ಸಿಂಪಲ್ ಟಿಪ್ಸ್ ನಿಮ್ಮ ಸಮಸ್ಯೆ ದೂರ ಮಾಡುತ್ತದೆ
ಹಲ್ಲಿ ಎಸಿ ಒಳಗೆ ಹೋದರೆ ಒಳಗಿರುವ ಯಂತ್ರದ ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೊತೆಗೆ ಅದು ಅಲ್ಲಿಯೇ ಸತ್ತು ಹೋದರೆ ಕೆಟ್ಟ ವಾಸನೆಯಿಂದ ಆರೋಗ್ಯ ಹಾಳಾಗುತ್ತದೆ.
ಬೇಸಿಗೆಯ ದಿನಗಳಲ್ಲಿ ಎಸಿ (Air Conditioner) ಒಂದು ವರದಾನವಾಗಿದೆ. ಸೂರ್ಯನ ಸುಡು ಬಿಸಿಲಿನ ತಾಪದಿಂದ ಬಸವಳಿದವರಿಗೆ ತಕ್ಷಣ ಪರಿಹಾರ ನೀಡುತ್ತದೆ. ಬಿಸಿಲಿನ ದಿನಗಳಲ್ಲಿ ಮನೆಯನ್ನು ತಂಪಾಗಿರಿಸಿ, ಜನರಿಗೆ ಆರಾಮವನ್ನು ನೀಡುತ್ತದೆ. ಈಗ ಎಲ್ಲರ ಮನೆಯಲ್ಲೂ ಎಸಿ ಸಾಮಾನ್ಯ. ಆದರೆ ಎಸಿ ಎಷ್ಟು ಪ್ರಯೋಜನಕಾರಿಯೋ, ಅದರ ಕಾಳಜಿ ಮಾಡುವುದು ಅಷ್ಟೆ ಮುಖ್ಯವಾಗಿದೆ. ಕೆಲವೊಮ್ಮೆ ಬೇಡದ ಜೀವಿಗಳು ಎಸಿಯಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಸಾಮಾನ್ಯವಾಗಿ ಗೋಡೆಗಳ ಮೇಲೆ ಅತ್ತಿಂದಿತ್ತ ತೆವಳುತ್ತಾ ನಡೆಯುವ ಜೀವಿಯೇ ಹಲ್ಲಿ. ಅದು ನಾವೂ ಊಹಿಸಲು ಅಸಾಧ್ಯವಾದ ಸ್ಥಳಗಳನ್ನು ತಲುಪುತ್ತದೆ. ಹಾಗಾದರೆ ಹಲ್ಲಿ ಎಸಿ ಒಳಗೆ ಹೋದರೆ ಏನಾಗುತ್ತದೆ? ಹೌದು, ಹಲ್ಲಿ ಎಸಿ ಒಳಗೆ ಹೋದರೆ ಒಳಗಿರುವ ಯಂತ್ರದ ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜೊತೆಗೆ ಅದು ಅಲ್ಲಿಯೇ ಸತ್ತು ಹೋದರೆ ಕೆಟ್ಟ ವಾಸನೆಯಿಂದ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಎಸಿಯೊಳಗೆ ಹಲ್ಲಿ ಸೇರದಂತೆ ತಡೆಯುವುದು ಹೇಗೆ? ಇಲ್ಲಿದೆ ಓದಿ.
ಶಾರ್ಟ್ ಸಕ್ಯೂರ್ಟ್‌ನ ಅಪಾಯ
ಒಂದು ವೇಳೆ ಹಲ್ಲಿ ಎಸಿ ಒಳಗೆ ಹೋಗಿ PCB ಅಂದರೆ ಸರ್ಕ್ಯೂಟ್ ಬೋರ್ಡ್ ಬಳಿ ಕುಳಿತರೆ, ಅದು ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಎಸಿ ಹಠಾತ್ತನೆ ಸ್ಥಗಿತಗೊಳ್ಳಲು ಮತ್ತು ದುಬಾರಿ ಭಾಗಗಳನ್ನು ಹಾನಿಗೊಳಿಸಲು ಕಾರಣವಾಗಬಹುದು. ಆಗ ಅದರ ದುರಸ್ತಿ ವೆಚ್ಚಗಳು ಹೆಚ್ಚಾಗಬಹುದು.
ವಾಸನೆ ಮತ್ತು ಆರೋಗ್ಯದ ಅಪಾಯಗಳು
ಕೆಲವೊಮ್ಮೆ ಹಲ್ಲಿಗಳು ಎಸಿ ಒಳಗೆ ಸಾಯುತ್ತವೆ. ಅಂತಹ ಸಂದರ್ಭಗಳಲ್ಲಿ, ಅದು ಕೊಳೆತು ಸಹಿಸಲು ಅಸಾಧ್ಯವಾದ ವಾಸನೆಯನ್ನು ಉಂಟುಮಾಡುತ್ತದೆ. ಅದು ಎಸಿ ಗಾಳಿಯೊಂದಿಗೆ ಬೆರೆತು ಕೋಣೆಯಾದ್ಯಂತ ಹರಡಬಹುದು. ಆ ಗಾಳಿಯು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ಬಿಸಿಲಿನಿಂದ ನಿಮ್ಮ ಕೋಮಲ ಪಾದಗಳು ಟ್ಯಾನ್ ಆಗಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ
ಶಬ್ದ ಮತ್ತು ಯಂತ್ರ ಹಾನಿಯ ಅಪಾಯ
ಸತ್ತ ಹಲ್ಲಿ ಎಸಿಯ ಬ್ಲೋವರ್ ಫ್ಯಾನ್‌ನಲ್ಲಿ ಸಿಲುಕಿಕೊಂಡರೆ, ಅದು ವಿಚಿತ್ರ ಶಬ್ದಗಳನ್ನು ಉಂಟುಮಾಡಬಹುದು. ಆಗ ಕಿರಿಕಿರಿಯ ಅನುಭವವಾಗುತ್ತದೆ. ಜೊತೆಗೆ ಇದು ಯಂತ್ರದ ಭಾಗಗಳ ಮೇಲೆ ಒತ್ತಡವನ್ನುಂಟು ಮಾಡಿ, ಎಸಿ ಕೆಲಸಮಾಡದಂತಾಗಬಹುದು.
ಮುನ್ನೆಚ್ಚರಿಕೆಗಳೇನು?
ನಿಮ್ಮ ಎಸಿಯಲ್ಲಿ ಹಲ್ಲಿ ಸಿಲುಕಿಕೊಂಡಿದೆ ಎಂದು ನಿಮಗೆ ಅನುಮಾನವುಂಟಾಗಿದ್ದರೆ, ತಕ್ಷಣ ಅದನ್ನು ಆಫ್ ಮಾಡಿ. ನಂತರ, ಕೂಲಂಕುಷವಾಗಿ ಪರಿಶೀಲಿಸಿ ಅಥವಾ ತಂತ್ರಜ್ಞರು ಸಂಪರ್ಕಿಸಿ.
ಎಸಿ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ ಮತ್ತು ಹಲ್ಲಿಗಳು ಒಳಗೆ ಹೋಗದಂತೆ ಮೆಷ್ ಹಾಕಿಸಿ. ಸ್ವಲ್ಪ ಎಚ್ಚರಿಕೆ ವಹಿಸಿದರೆ ದೊಡ್ಡ ಹಾನಿಯಿಂದ ರಕ್ಷಿಸಿಕೊಳ್ಳಬಹುದು.



