ಬೈಂದೂರು : ವಾಟ್ಸಾಪ್ ಸ್ಟೇಟಸ್ ಬರೆದಿಟ್ಟು ನದಿಗೆ ಹಾರಿ ಹೋಟೆಲ್ ಉದ್ಯಮಿ ಆತ್ಮಹತ್ಯೆ
ಮೃತ ಸುಧಾಕರ ಶೆಟ್ಟಿ ಅವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದ ಅವರು, ಹೆಂಡತಿ ಗುಣರತ್ನಾ ಅವರ ತವರೂರಾದ ವಂಡ್ಸೆಯಲ್ಲೇ ವಾಸವಾಗಿದ್ದರು.

ಕೊಲ್ಲೂರು: ಹೆಂಡತಿ ಹಾಗೂ ಬಾವನ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವಾಟ್ಸಾಪ್‌ನಲ್ಲಿ ಭಾವನಾತ್ಮಕ ಸ್ಟೇಟಸ್ ಹಾಕಿ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ವಂಡ್ಸೆ ಸೇತುವೆ ಬಳಿ ಸಂಭವಿಸಿದೆ. ಮೃತರನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡ ಗ್ರಾಮದ ನಿವಾಸಿ ಸುಧಾಕರ ಶೆಟ್ಟಿ ಎಂದು ಗುರುತಿಸಲಾಗಿದೆ.
ಮುಂಬೈ ಉದ್ಯಮಿ ದಾಂಪತ್ಯದಲ್ಲಿ ಬಿರುಕು ?
ಮೃತ ಸುಧಾಕರ ಶೆಟ್ಟಿ ಅವರು ಈ ಹಿಂದೆ ಮುಂಬೈನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದ ಅವರು, ಹೆಂಡತಿ ಗುಣರತ್ನಾ ಅವರ ತವರೂರಾದ ವಂಡ್ಸೆಯಲ್ಲೇ ವಾಸವಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ಕೌಟುಂಬಿಕ ಕಲಹಗಳು ಮತ್ತು ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
Also Read : Udupi: ಉಡುಪಿಯ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯನಿಗೆ ಗೂಂಡಾ ಕಾಯ್ದೆ
ಈ ಮಧ್ಯೆ, ಸುಧಾಕರ ಶೆಟ್ಟಿ ಅವರ ಪತ್ನಿ ಗುಣರತ್ನಾ ಅವರು ಮಾವನ ಮನೆಗೆ ದೂರವಾಣಿ ಕರೆ ಮಾಡಿ, ನನ್ನ ಅಣ್ಣ ನಾಗರಾಜನು ಹೈದರಾಬಾದಿನಿಂದ ಬಂದ ನಂತರ ನಿಮ್ಮ ಮಗ ಸುಧಾಕರ ಶೆಟ್ಟಿಯ ಕಾಲು ಮುರಿಯಲು ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದು ಸುಧಾಕರ ಶೆಟ್ಟಿ ಅವರ ಮನಸ್ಸಿನ ಮೇಲೆ ತೀವ್ರ ಆಘಾತ ಉಂಟುಮಾಡಿತ್ತು.
ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಳಲು: ಮಕ್ಕಳನ್ನು ನೋಡಿಕೊಳ್ಳುವಂತೆ ಮನವಿ
ಮೇ 14 ರಂದು ಸಂಜೆ 05:30ರ ಸುಮಾರಿಗೆ ಸುಧಾಕರ ಶೆಟ್ಟಿ ಅವರು ತಮ್ಮ ಮೊಬೈಲ್ ವಾಟ್ಸಾಪ್ ಸ್ಟೇಟಸ್‌ನಲ್ಲಿ ಕೊನೆಯ ಸಂದೇಶವೊಂದನ್ನು ಹಂಚಿಕೊಂಡಿದ್ದರು. “ನನ್ನ ಬಾವ ನಾಗರಾಜ ಹಾಗೂ ಹೆಂಡತಿ ಗುಣರತ್ನಾ ಅವರು ನನಗೆ ತೀವ್ರ ತೊಂದರೆ ನೀಡುತ್ತಿದ್ದಾರೆ. ನನ್ನ ಸಾವಿನ ನಂತರ ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಬರೆದುಕೊಂಡಿದ್ದರು.
Also Read : ಕುಂಭಾಶಿ ದೇವಸ್ಥಾನದ ಮುಂದೆ ಹೈಡ್ರಾಮಾ: ಕಾರಿಗಾಗಿ ರಸ್ತೆಯಲ್ಲೇ ಕುಳಿತು ದಂಪತಿ ಕಿತ್ತಾಟ
ಈ ಸ್ಟೇಟಸ್ ಹಾಕಿದ ಕೇವಲ ಒಂದು ಗಂಟೆಯಲ್ಲೇ, ಸುಧಾಕರ ಶೆಟ್ಟಿ ಅವರು ವಂಡ್ಸೆ ಸೇತುವೆ ಬಳಿ ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ, ಸೇತುವೆಯ ಮೇಲಿನಿಂದ ಸೌಪರ್ಣಿಕಾ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹತ್ತಿರದ ಪರಿಚಯಸ್ಥರು ಇದನ್ನು ಗಮನಿಸಿ ತಕ್ಷಣವೇ ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಮಗನ ಸಾವಿಗೆ ಹೆಂಡತಿ ಗುಣರತ್ನಾ ಹಾಗೂ ಬಾವ ನಾಗರಾಜ ಶೆಟ್ಟಿ ನೀಡಿದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ನೇರ ಕಾರಣ ಎಂದು ಸುಧಾಕರ ಶೆಟ್ಟಿ ಅವರ ತಂದೆ ಸೂಲ್ಯಣ್ಣ ಶೆಟ್ಟಿ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಕೊಲ್ಲೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Mumbai Hotel Owner Sudhakar Shetty Suicde case Vandse Kollur Police station



