ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 24 ಕೋಟಿ ವಂಚನೆ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೇಸ್

ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸೈಬರ್​ ವಂಚನೆ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮನಿ ಲಾಂಡರಿಂಗ್​ ಹೆಸರಿನಲ್ಲಿ ವೃದ್ಧೆಯನ್ನು ಟ್ರ್ಯಾಪ್​ ಮಾಡಿದ ಸೈಬರ್​ ವಂಚಕರು ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ವಂಚಿಸಿ ಎಸ್ಕೇಪ್​ ಆಗಿದ್ದಾರೆ.

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸೈಬರ್​ ವಂಚನೆ ಪ್ರಕರಣವೊಂದು ರಾಜ್ಯ ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮನಿ ಲಾಂಡರಿಂಗ್​ ಹೆಸರಿನಲ್ಲಿ ವೃದ್ಧೆಯನ್ನು ಟ್ರ್ಯಾಪ್​ ಮಾಡಿದ ಸೈಬರ್​ ವಂಚಕರು ಬರೋಬ್ಬರಿ 24 ಕೋಟಿ ರೂಪಾಯಿಗಳನ್ನು ವಂಚಿಸಿ ಎಸ್ಕೇಪ್​ ಆಗಿದ್ದಾರೆ. ವಂಚನೆಗೊಳಗಾದ ವೃದ್ಧೆಯನ್ನು ಲಕ್ಷ್ಮೀರಾಮಮೂರ್ತಿ ಎಂದು ಗುರುತಿಸಲಾಗಿದೆ.

ಲಕ್ಷ್ಮೀ ರಾಮಮೂರ್ತಿ ಎಂಬವರು ತಮ್ಮ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾರಾಟ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅವರ ಬ್ಯಾಂಕ್​ ಖಾತೆಯಲ್ಲಿ ಕೋಟಿಗಟ್ಟಲೇ ಹಣ ಜಮೆಯಾಗಿತ್ತು.ಅವರ ಬ್ಯಾಂಕ್​ ವ್ಯವಹಾರದ ಮೂಲಕ ಈ ವಿಚಾರ ಅರಿತ ಸೈಬರ್​ ವಂಚಕರು ಜನವರಿಯಿಂದ ಮೇ ತಿಂಗಳವರೆಗೆ ಅವರನ್ನು ಸೈಬರ್ ವಂಚನೆಯಲ್ಲಿ ಇರಿಸಿದ್ದರು ಎನ್ನಲಾಗಿದೆ.

ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ವೃದ್ಧೆಯನ್ನು ನಂಬಿಸಿದ್ದ ಸೈಬರ್​ ವಂಚಕರು, ನಿಮ್ಮ ಖಾತೆಯಲ್ಲಿರುವುದು ಅಕ್ರಮ ಹಣ ಎಂದು ವೃದ್ಧೆಯನ್ನು ಭಯಬೀಳಿಸಿದ್ದರು. ಈ ವಿಚಾರ ಸಾರ್ವಜನಿಕವಾಗಿ ಹೇಳಿಕೊಂಡರೆ ನಿಮ್ಮನ್ನು ಅರೆಸ್ಟ್​ ಮಾಡುತ್ತೇವೆ ಎಂದಿದ್ದ ವಂಚಕರು 5 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ವೃದ್ಧೆಯ ಖಾತೆಯಿಂದ ಹಣ ಪಡೆದುಕೊಂಡಿದ್ದಾರೆ. ಸೈಬರ್​ ಕಳ್ಳರ ಖಾತೆಗೆ ವೃದ್ಧೆ ಕಳೆದ ಐದು ತಿಂಗಳಲ್ಲಿ 24 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.

Also Read: ನೀಟ್ ಪರೀಕ್ಷೆ ಭೀತಿ ಅಲ್ಲವೇ?: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಇಷ್ಟಾದರೂ ಇನ್ನೂ ಸೈಬರ್​ ವಂಚಕರು ಹಣಕ್ಕೆ ಬೇಡಿಕೆಯಿಡುತ್ತಲೇ ಬಂದಿದ್ದರು ಎನ್ನಲಾಗಿದೆ. ದುಡ್ಡೆಲ್ಲ ಖಾಲಿಯಾದ ಕಾರಣ ವೃದ್ಧೆ ತಮ್ಮ ಬಳಿ ಇದ್ದ 1.3 ಕೆಜಿ ತೂಕದ ಚಿನ್ನವನ್ನು ಅಡವಿಟ್ಟು ಹಣ ಪಡೆಯಲು ಕಂಟೋನ್ಮೆಂಟ್ ಶಾಖೆಯ ಐಸಿಐಸಿಐ ಬ್ಯಾಂಕ್ಗೆ ಬಂದಿದ್ದರು. ಇದರಿಂದ ಅನುಮಾನಗೊಂಡ ಬ್ಯಾಂಕ್​ ಮ್ಯಾನೇಜರ್​ ಸಿಸಿಬಿ ಸೈಬರ್​ ಠಾಣೆಗೆ ಮಾಹಿತಿ ನೀಡಿದ್ದಾರೆ .

ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ವೃದ್ಧೆ ತಾವು ಕಳೆದ 5 ತಿಂಗಳಿನಿಂದ ಡಿಜಿಟಲ್​ ಅರೆಸ್ಟ್​ನಲ್ಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ವೃದ್ಧೆ 22 ವಿವಿಧ ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಅಲಹಬಾದ್ ಹಾಗೂ ದೆಹಲಿ ಮೂಲದ ಗೌರವ್ ಕುಮಾರ್, ಓಂ ಪ್ರಕಾಶ್ ರಾಜಪೂತ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಸದ್ಯ 60 ಲಕ್ಷ ರೂಪಾಯಿ ಹೊಂದಿರುವ ಒಂದು ಖಾತೆಯನ್ನು ಪೊಲೀಸರು ಸೀಝ್​ ಮಾಡಿದ್ದಾರೆ ಎನ್ನಲಾಗಿದೆ.

24 crore fraud in the name of Digital Arrest Shocking case in Bengaluru

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories