SSB ಕಾನ್ಸ್‌ಟೇಬಲ್ GD ಹುದ್ದೆ ನೇಮಕಾತಿ ಅಧಿಸೂಚನೆ ಪ್ರಕಟ : ಈ ಅರ್ಹತೆಗಳಿದ್ದರೆ ನೀವೂ ಅರ್ಜಿ ಸಲ್ಲಿಸಿ

ಸಶಸ್ತ್ರ ಸೀಮಾ ಬಲ (SSB) ಖಾಲಿ ಇರುವ ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಘೋಷಿಸಿದೆ. ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತಾ ಮಾನದಂಡಗಳೇನು? ಇಲ್ಲಿದೆ ಓದಿ.

ಸಶಸ್ತ್ರ ಸೀಮಾ ಬಲ (SSB) ಖಾಲಿ ಇರುವ ಜಿಡಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಘೋಷಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ 3 ವರ್ಷಗಳ ನಿಯಮಿತ ಸೇವೆ ಸಲ್ಲಿಸಿದ ಎಸ್‌ಎಸ್‌ಬಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಜೂನ್‌ 20 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತಾ ಮಾನದಂಡಗಳೇನು? ಇಲ್ಲಿದೆ ಓದಿ.

ನೇಮಕಾತಿ ಅರ್ಹತಾ ಮಾನದಂಡಗಳು

* ಈ ನೇಮಕಾತಿಯಲ್ಲಿ ಭಾಗವಹಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್/10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

* ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷಗಳನ್ನು ಮೀರಬಾರದು. ಮೀಸಲಾತಿ ವರ್ಗಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

* ಈ ಕೆಳಗಿನ ಅರ್ಹತೆಗಳಿದ್ದರೆ ಮರು ನೇಮಕಾತಿ ಮೂಲಕ ಕಾನ್ಸ್‌ಟೇಬಲ್ (ಜಿಡಿ) ಹುದ್ದೆಗೆ ಅರ್ಹರಾಗಿರುತ್ತಾರೆ

1. ಜನವರಿ 01, 2026 ಕ್ಕೆ SSB ಯಲ್ಲಿ ಕನಿಷ್ಠ 3 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿರಬೇಕು.

2. ಸೇನಾ ಪಡೆಯಲ್ಲಿ ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಮತ್ತು ಕಾನ್ಸ್‌ಟೇಬಲ್ (ಆರ್ಡರ್ಲಿ) ಆಗಿ 3 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿರಬೇಕು.

3. ಇತ್ತೀಚಿನ ವೈದ್ಯಕೀಯ ಪರೀಕ್ಷೆಯಲ್ಲಿ SHAPE-I ಪ್ರಮಾಣಪತ್ರ ಹೊಂದಿರಬೇಕು.

4. 2026 ರ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಕಳೆದ 3 ವರ್ಷಗಳ ಸೇವಾ ದಾಖಲೆಯನ್ನು ಹೊಂದಿರಬೇಕು.

5. ಕಳೆದ 3 ವರ್ಷಗಳ (ಅಂದರೆ 2022-23, 2023-24 ಮತ್ತು 2024-25) APAR ಶ್ರೇಣೀಕರಣವು “ಉತ್ತಮ” ಮಾನದಂಡಕ್ಕಿಂತ ಕಡಿಮೆಯಿರಬಾರದು (APAR ನಲ್ಲಿ 04 ಅಂಕಗಳಿಗಿಂತ ಕಡಿಮೆಯಿರಬಾರದು).

ಇದನ್ನೂ ಓದಿ: ಎಸ್‌ಎಸ್‌ಸಿ ಸಿಜಿಎಲ್‌ 12,256 ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಾರಂಭ : ಪದವೀಧರರು ಇದರ ಲಾಭ ಪಡೆದುಕೊಳ್ಳಿ

ಆಯ್ಕೆ ಪ್ರಕ್ರಿಯೆ ಹೇಗೆ?

  • ದೈಹಿಕ ಪ್ರಮಾಣೀಕರಣ ಪರೀಕ್ಷೆ (PST)
  • ದೈಹಿಕ ಸಹಿಷ್ಣುತೆ ಪರೀಕ್ಷೆ (ಪಿಇಟಿ)
  • ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ, ವಿವರವಾದ ವೈದ್ಯಕೀಯ ಪರೀಕ್ಷೆ (DME)
  • ವೈದ್ಯಕೀಯ ಪರೀಕ್ಷೆಯ ವಿಮರ್ಶೆ (RME)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories