ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಎಫೆಕ್ಟ್: ಲೆದರ್ ಶೂ, ಬೆಲ್ಟ್-ಬ್ಯಾಗ್ ದರ ಏರಿಕೆ – ಮಧ್ಯಮ ವರ್ಗಕ್ಕೆ ಮತ್ತೊಂದು ಬೆಲೆಬಾಧೆ
ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ಎಲ್ಲಾ ಉತ್ಪನ್ನಗಳ ಸಾಗಣಿಕೆ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಶ್ರೀ ಸಾಮಾನ್ಯರು ದಿನಕ್ಕೊಂದು ವಸ್ತುಗಳ ದರ ಏರಿಕೆ ಸುದ್ದಿ ಕೇಳುತ್ತಲೇ ಇದ್ದಾರೆ
ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ಎಲ್ಲಾ ಉತ್ಪನ್ನಗಳ ಸಾಗಣಿಕೆ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಶ್ರೀ ಸಾಮಾನ್ಯರು ದಿನಕ್ಕೊಂದು ವಸ್ತುಗಳ ದರ ಏರಿಕೆ ಸುದ್ದಿ ಕೇಳುತ್ತಲೇ ಇದ್ದಾರೆ.
ಇದೀಗ ಈ ಸಾಲಿಗೆ ಲೆದರ್ ಶೂ, ಬೆಲ್ಟ್ ಹಾಗೂ ಬ್ಯಾಗ್ಗಳೂ ಸೇರ್ಪಡೆಯಾಗಿದೆ. ಸಾಗಣಿಕೆಯ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ದರದಲ್ಲಿ ಲೆದರ್ ಉತ್ಪನ್ನಗಳು ಮಾರಲು ಸಾಧ್ಯವಿಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯ ಹೊರಹಾಕುತ್ತಿದ್ದು , ಮಧ್ಯಮ ವರ್ಗದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗಿದೆ.
ಶಾಲೆಗಳು ಆರಂಭವಾಗುವ ಈ ಸಂದರ್ಭದಲ್ಲಿ ಶೂ, ಬೆಲ್ಟ್ ಹಾಗೂ ಶಾಲಾ ಬ್ಯಾಗ್ಗಳ ಖರೀದಿ ಪ್ರಕ್ರಿಯೆ ಕೂಡ ಹೆಚ್ಚಿರುತ್ತದೆ. ಈ ಸಮಯದಲ್ಲಿ ಲೆದರ್ ಉತ್ಪನ್ನಗಳ ಬೆಲೆ ಏರಿಕೆ ಕಂಡಿದ್ದು ಪೋಷಕರಿಗೆ ಶಾಕ್ ಆಗಿದೆ. ಲೆದರ್ ಉತ್ಪನ್ನಗಳು ಬಹುತೇಕ ಹೊರ ರಾಜ್ಯದ ಕಾರ್ಖಾನೆಗಳಲ್ಲಿಯೇ ತಯಾರಾಗುತ್ತಿರುವುದರಿಂದ ಸಾಗಣೆ ವೆಚ್ಚ ಮಿತಿಮೀರಿದ್ದು ಲೆದರ್ ಉತ್ಪನ್ನಗಳ ಬೆಲೆ ಮೇಲೆ ಶೇಕಡಾ 16ರಷ್ಟು ಏರಿಕೆ ನಿರೀಕ್ಷಿಸಬಹುದಾಗಿದೆ.
ಹೀಗೆ ದಿನಕ್ಕೊಂದು ವಸ್ತುಗಳ ಬೆಲೆ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಇದೇ ರೀತಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಹೋದರೆ,ಜೀವನ ನಡೆಸುವುದು ಹೇಗೆ ? ಎಂದು ಸಾರ್ವಜನಿಕರು ತಲೆಕೆಡಿಸಿಕೊಳ್ಳುವಂತೆ ಆಗಿದೆ. ಮೊದಲೇ ಮುಟ್ಟಿದ್ದೆಲ್ಲ ದುಬಾರಿ ಎನ್ನುವಂತಹ ಈ ಕಾಲದಲ್ಲಿ ಇದೀಗ ಚಿಕ್ಕ ಪುಟ್ಟ ವಸ್ತುಗಳು ಬೆಲೆ ಏರಿಕೆಯ ಶಾಕ್ ನೀಡುತ್ತಿರುವುದು ಜನಸಾಮಾನ್ಯರ ತಲೆನೋವಿಗೆ ಕಾರಣವಾಗಿದೆ.
Effect of petrol-diesel price hike Leather shoes belts-bags prices rise – another price hit for the middle class



