ಐಟಿಐ ಆದವರಿಗೆ ದೇಶಸೇವೆ ಮಾಡುವ ಸೌಭಾಗ್ಯ : ಬಿಡಿಎಲ್ನಲ್ಲಿ ಅಪ್ರೆಂಟಿಸ್ಶಿಪ್ ಹುದ್ದೆಗೆ ಇಂದೇ ಅರ್ಜಿ ಹಾಕಿ
ಬಿಡಿಎಲ್ ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಕೊನೆ ದಿನ ಸಮೀಪಿಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಇನ್ನೆರೆಡು ದಿನಗಳ ಒಳಗೆ ಅರ್ಜಿ ಸಲ್ಲಿಸಿ.
ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಯುದ್ಧ ಸಾಮಗ್ರಿ ಮತ್ತು ಕ್ಷಿಪಣಿ ತಯಾರಕರಲ್ಲಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಒಂದಾಗಿದೆ. ಬಿಡಿಎಲ್ ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಕೊನೆಯದಿನ ಸಮೀಪವಾಗುತ್ತಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 1 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಹತೆಗಳಿದ್ದರೆ ಈಗಲೇ ಅರ್ಜಿ ಹಾಕಿ.
ಹುದ್ದೆಯ ವಿವರ
ಬಿಡಿಎಲ್ ನಲ್ಲಿ ಒಟ್ಟು 33 ಅಪ್ರೆಂಟಿಸ್ಶಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದರಲ್ಲಿ 03 ಹುದ್ದೆಗಳು ಫಿಟ್ಟರ್, ಒಟ್ಟು 8 ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, 7 ಮೆಷಿನಿಸ್ಟ್, 2 ಮೆಷಿನಿಸ್ಟ್ ಗ್ರೈಂಡರ್, 1 ಮೆಕ್ಯಾನಿಕಲ್ ಡೀಸೆಲ್, 4 ಮೆಕ್ಯಾನಿಕ್ ಆರ್ & ಸಿ, 6 ಟರ್ನರ್ ಮತ್ತು 2 ವೆಲ್ಡರ್ ಹುದ್ದೆಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಹತೆ
ಈ ಬಿಡಿಎಲ್ ಅಪ್ರೆಂಟಿಸ್ಶಿಪ್ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ಸಂಸ್ಥೆಯಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಹೆಚ್ಚುವರಿಯಾಗಿ, ಅವರು ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳ ಕನಿಷ್ಠ ವಯಸ್ಸು 14 ವರ್ಷಗಳನ್ನು ಮೀರಿರಬಾರದು ಮತ್ತು ಗರಿಷ್ಠ ವಯಸ್ಸು 30 ವರ್ಷಗಳನ್ನು ಮೀರಿರಬಾರದು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ಇದನ್ನೂ ಓದಿ : BSNL ಜೂನಿಯರ್ ಟೆಲಿಕಾಂ ಆಫೀಸರ್ ನೇಮಕಾತಿ ಘೋಷಣೆ : ಎಂಜಿನಿಯರಿಂಗ್ ಡಿಗ್ರಿ ಇದ್ರೆ ಅರ್ಜಿ ಹಾಕಿ
ಅರ್ಜಿ ಸಲ್ಲಿಕೆ ಹೇಗೆ?
ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಮೊದಲಿಗೆ ಬಿಡಿಎಲ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಮುಖಪುಟದಲ್ಲಿರುವ ಎಸ್ಟಾಬ್ಲಿಷ್ಮೆಂಟ್ ಸರ್ಚ್ ಮೇಲೆ ಕ್ಲಿಕ್ಕಿಸಿ.
ಅಲ್ಲಿ ಕೇಳಿರುವ ಡೀಟೆಲ್ಸ್ಗಳನ್ನು ಎಚ್ಚರಿಕೆಯಿಂದ ತುಂಬಿ.
ನಂತರ ಎಸ್ಎಸ್ಎಲ್ಸಿ ಅಂಕಪಟ್ಟಿ ಮತ್ತು ಐಟಿಐ ಸರ್ಟಿಫಿಕೇಟ್ ಕಾಪಿಗಳನ್ನು ಅಪ್ಲೋಡ್ ಮಾಡಿ.
ಬಳಿಕ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅದರ ಪ್ರಿಂಟ್ಔಟ್ ತೆಗೆದುಕೊಳ್ಳಿ.



