ಕಾಳಿ-ಶರಾವತಿ ಪ್ರವಾಹ, ಸಮುದ್ರದಲ್ಲಿ ಭಾರೀ ಅಲೆಗಳು : ಉತ್ತರ ಕನ್ನಡದಲ್ಲಿ ಹೈ ಅಲರ್ಟ್
ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 1 ರಿಂದ ಆಗಸ್ಟ್ 31 ರವರೆಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲ್ಲಾ ರೀತಿಯ ವಾಣಿಜ್ಯ ಜಲ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಅಧಿಕೃತ ಆದೇಶ ಪ್ರಕಟಿಸಿದ್ದಾರೆ.

ಕರಾವಳಿ ಭಾಗದಲ್ಲಿ ಮುಂಬರುವ ಮೂರು ತಿಂಗಳುಗಳ ಕಾಲ ಕಡಲು ಹಾಗೂ ನದಿಗಳಲ್ಲಿ ನೀರಿನ ಪ್ರವಾಹ ಮತ್ತು ಅಲೆಗಳ ಅಬ್ಬರ ತೀವ್ರವಾಗಿರಲಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ದಾಂಡೇಲಿಯ ವೈಟ್ವಾಟರ್ ರ್ಯಾಫ್ಟಿಂಗ್, ನೇತ್ರಾಣಿ ಮತ್ತು ಕಾರವಾರ ಭಾಗದ ಸ್ಕೂಬಾ ಡೈವಿಂಗ್, ಪ್ರವಾಸಿ ಬೋಟಿಂಗ್ ಹಾಗೂ ಸ್ಪೀಡ್ ಬೋಟ್ ಸವಾರಿ ಹಾಗೂ ಇತರ ಎಲ್ಲಾ ರೀತಿಯ ವಾಣಿಜ್ಯ ಜಲಸಾಹಸಗಳು ಜಿಲ್ಲಾಡಳಿತದ ಆದೇಶದಂತೆ ಮುಂದಿನ ಮೂರು ತಿಂಗಳು ಬಂದ್ ಇರಲಿದೆ.ಅರಬ್ಬಿ ಸಮುದ್ರದ ಕರಾವಳಿ ತೀರಗಳು ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ ಮತ್ತು ಶರಾವತಿ ನದಿ ಪಾತ್ರಗಳಲ್ಲಿಯೂ ಈ ನಿಯಮ ಅನ್ವಯವಾಗಲಿದೆ. ಮಳೆಗಾಲದಲ್ಲಿ ನದಿಗಳಲ್ಲಿ ನೀರಿನ ಒಳಹರಿವು ದಿಢೀರನೆ ಹೆಚ್ಚಾಗುವುದರಿಂದ ಸಾಹಸ ಕ್ರೀಡೆಗಳು ಅತ್ಯಂತ ಅಪಾಯಕಾರಿಯಾಗುತ್ತವೆ ಎಂದು ಜಿಲ್ಲಾಡಳಿತ ತಿಳಿಸಿದೆ.
Also Read: ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡಿದ್ರೆ ಬಂತು ಬೀಫ್ : ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರಿಬ್ಬರು ಅರೆಸ್ಟ್
ಜಿಲ್ಲಾಡಳಿತದ ಈ ಆದೇಶವನ್ನು ಮೀರಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವ ರೆಸಾರ್ಟ್ ಮಾಲೀಕರು, ಹೋಂ ಸ್ಟೇಗಳು ಅಥವಾ ಖಾಸಗಿ ಏಜೆನ್ಸಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ತಾತ್ಕಾಲಿಕ ನಿಷೇಧದಿಂದ ಸ್ಥಳೀಯ ಪ್ರವಾಸೋದ್ಯಮದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದ್ದರೂ, ಸಾರ್ವಜನಿಕರ ಜೀವ ರಕ್ಷಣೆ ಮಾಡುವುದು ಅತ್ಯಂತ ಆದ್ಯತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kali-Sharavati floods heavy waves in the sea High alert in Uttara Kannada