ಡೆಬಿಟ್, ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಬ್ಯಾಂಕ್ಗೆ ಹೋಗುವ ಅಗತ್ಯವಿಲ್ಲ! ಹೀಗೆ ಬ್ಲಾಕ್ ಮಾಡಿ
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಕಳೆದುಹೋದರೆ ಹಣಕಾಸಿನ ಅಪಾಯ ತಪ್ಪಿಸಲು ಮೊಬೈಲ್ ಆ್ಯಪ್, ಎಸ್ಎಂಎಸ್ ಅಥವಾ ಗ್ರಾಹಕ ಸೇವೆಯ ನೆರವಿನಿಂದ ಕೆಲವೇ ನಿಮಿಷಗಳಲ್ಲಿ ಕಾರ್ಡ್ ಬ್ಲಾಕ್ ಮಾಡಬಹುದು.

ನಗದುರಹಿತ ವಹಿವಾಟುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳು ಜನರ ದೈನಂದಿನ ಬದುಕಿನ ಭಾಗವಾಗಿವೆ. ಆದರೆ ಕಾರ್ಡ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಹಲವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.
ಹಣಕಾಸು ತಜ್ಞರು ಹೇಳುವಂತೆ, ಕಾರ್ಡ್ ನಷ್ಟವಾದ ಕೂಡಲೇ ಅದನ್ನು ಬ್ಲಾಕ್ ಮಾಡಿಸುವುದು ಅತ್ಯಂತ ಮುಖ್ಯ. ಒಂದು ವೇಳೆ ಕಾರ್ಡ್ ವಿವರಗಳು ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅನಧಿಕೃತ ಖರೀದಿ, ಹಣ ವರ್ಗಾವಣೆ ಅಥವಾ ಎಟಿಎಂ ವಿತ್ಡ್ರಾ ಸಂಭವಿಸಬಹುದು. ಇದರಿಂದ ಖಾತೆದಾರರಿಗೆ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚು.
ಮೊಬೈಲ್ ಬ್ಯಾಂಕಿಂಗ್ ಬಳಸುವವರು ತಮ್ಮ ಬ್ಯಾಂಕ್ನ ಅಧಿಕೃತ ಆ್ಯಪ್ನಲ್ಲಿ ಲಾಗಿನ್ ಆಗಿ ಕಾರ್ಡ್ ನಿರ್ವಹಣಾ ವಿಭಾಗಕ್ಕೆ ತೆರಳಬಹುದು. ಅಲ್ಲಿ ಕಾಣುವ ‘Block Card’ ಅಥವಾ ‘Permanent Disable’ ಆಯ್ಕೆಯನ್ನು ಬಳಸುವ ಮೂಲಕ ಕೆಲವೇ ಕ್ಷಣಗಳಲ್ಲಿ ಕಾರ್ಡ್ ಸ್ಥಗಿತಗೊಳಿಸಬಹುದು.
ಇದಾದ ಬಳಿಕ ಹೊಸ ಕಾರ್ಡ್ ಪಡೆಯಲು ಬ್ಯಾಂಕ್ಗೆ ಮನವಿ ಸಲ್ಲಿಸಬಹುದು. ಬ್ಯಾಂಕ್ ಸಾಮಾನ್ಯವಾಗಿ ಎಸ್ಎಂಎಸ್ ಅಥವಾ ಇಮೇಲ್ ಮೂಲಕ ಕಾರ್ಡ್ ಯಶಸ್ವಿಯಾಗಿ ಬ್ಲಾಕ್ ಆಗಿರುವುದನ್ನು ದೃಢೀಕರಿಸುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಸಂದರ್ಭಗಳಲ್ಲಿ ಎಸ್ಎಂಎಸ್ ಸೇವೆ ಬಹಳ ಉಪಯುಕ್ತವಾಗುತ್ತದೆ. ಬ್ಯಾಂಕ್ ಸೂಚಿಸಿರುವ ಮಾದರಿಯಲ್ಲಿ ಸಂದೇಶ ಕಳುಹಿಸಿದರೆ ಕಾರ್ಡ್ನ್ನು ಸುರಕ್ಷಿತವಾಗಿ ಬ್ಲಾಕ್ ಮಾಡಬಹುದು.
ಸೈಬರ್ ವಂಚನೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಡ್ ಬಳಕೆದಾರರೂ ತಮ್ಮ ಬ್ಯಾಂಕ್ನ ತುರ್ತು ಸಹಾಯವಾಣಿ ಸಂಖ್ಯೆ ಮತ್ತು ಕಾರ್ಡ್ ಬ್ಲಾಕ್ ಮಾಡುವ ವಿಧಾನವನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.



