ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ? ಇಬ್ಬರು ಕೇಂದ್ರ ಸಚಿವರಲ್ಲಿ ಯಾರಿಗೆ ಲಕ್!
ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲೇ ಕರ್ನಾಟಕಕ್ಕೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಲಿದೆ ಎನ್ನುವ ಮಾಹಿತಿ ಲಭ್ಯವಾಗ್ತಾಇದೇ .
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಿಗ್ ಬ್ರೇಕಿಂಗ್ ಸುದ್ದಿ ಹೊರಬಿದ್ದಿದ್ದು, ರಾಜ್ಯ ಕಮಲ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕರ್ನಾಟಕ ಬಿಜೆಪಿಯಲ್ಲಿ ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ “ಮುಂದಿನ ಬಾಸ್ ಯಾರು?” ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವ ಕಾಲ ಹತ್ತಿರ ಬಂದಂತಿದೆ. ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲೇ ಕರ್ನಾಟಕಕ್ಕೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಲಿದೆ ಎನ್ನುವ ಮಾಹಿತಿ ಲಭ್ಯವಾಗ್ತಾಇದೇ .
ಇತ್ತೀಚೆಗಷ್ಟೇ ಬಿಜೆಪಿಯ ರಾಷ್ಟ್ರೀಯ ನಾಯಕರಾದ ನಿತಿನ್ ನಬಿನ್ ಅವರು ರಾಜ್ಯಕ್ಕೆ ಭೇಟಿ ನೀಡಿ ಹೋದ ಬೆನ್ನಲ್ಲೇ ಈ ಚರ್ಚೆಗಳು ತೀವ್ರಗೊಂಡಿದ್ದು, ಜೂನ್ ಮಧ್ಯಭಾಗದಲ್ಲಿ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮೇಜರ್ ಸರ್ಜರಿ ವೇಳೆ ಈ ಬದಲಾವಣೆ ಆಗುವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.
ಜೂನ್ 15 – 18ರ ಮಧ್ಯೆ ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ!
ವಿವಿಧ ರಾಜ್ಯಗಳಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಜೂನ್ 15 ರಿಂದ 18ರ ಮಧ್ಯೆ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಸುಮಾರು 10 ರಿಂದ 12 ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಹಿರಿಯ ಸಚಿವರ ಖಾತೆಗಳು ಕೂಡ ಬದಲಾಗಲಿವೆ. ಇದೇ ಹೊತ್ತಿನಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷರ ಹುದ್ದೆಗೂ ಹೊಸ ಹೆಸರನ್ನು ವರಿಷ್ಠರು ಘೋಷಿಸಲಿದ್ದಾರೆ.
ಮೂವರಲ್ಲಿ ಒಬ್ಬರಿಗೆ ಕೊಕ್: ರಾಜ್ಯಕ್ಕೆ ಬರಲಿದ್ದಾರೆ ಕೇಂದ್ರ ಸಚಿವರು!
ದೆಹಲಿ ವಲಯದ ಇನ್ಸೈಡ್ ಮಾಹಿತಿಯ ಪ್ರಕಾರ, ಕ್ಯಾಬಿನೆಟ್ನಿಂದ ಹೊರನಡೆಯುವ ಸಚಿವರಿಗೆ ರಾಜ್ಯ ರಾಜಕಾರಣದ ದೊಡ್ಡ ಜವಾಬ್ದಾರಿ ನೀಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಕರ್ನಾಟಕವನ್ನು ಪ್ರತಿನಿಧಿಸುವ ಮೂವರು ಬಿಜೆಪಿ ಸಚಿವರ ಪೈಕಿ ಒಬ್ಬರನ್ನು ಕೇಂದ್ರದಿಂದ ರಾಜ್ಯಕ್ಕೆ ವಾಪಸ್ ಕಳುಹಿಸಿ, ಸಂಘಟನೆಯ ಜವಾಬ್ದಾರಿ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೈತ್ರಿ ಪಾಲುದಾರರಿಗೆ ಹೆಚ್ಚಿನ ಆದ್ಯತೆ? ಮುಂಬರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈತ್ರಿಕೂಟದ ಪಾಲುದಾರ ಪಾರ್ಟಿಗಳಿಗೆ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶಕ್ಕೆ ಪಂಕಜ್ ಚೌಧುರಿ ಮತ್ತು ದೆಹಲಿಗೆ ಹರ್ಷ ಮಲ್ಹೋತ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಮುಂದಿನ ಸರದಿ ಕರ್ನಾಟಕದ್ದು ಎನ್ನಲಾಗುತ್ತಿದೆ.
ಪ್ರಲ್ಹಾದ್ ಜೋಶಿ ಮತ್ತು ವಿ. ಸೋಮಣ್ಣ ಹೆಸರು ಮುಂಚೂಣಿಯಲ್ಲಿ!
ಪ್ರಸ್ತುತ ಮೋದಿ ಕ್ಯಾಬಿನೆಟ್ನಲ್ಲಿ ಕರ್ನಾಟಕದಿಂದ ನಾಲ್ವರು ಸಂಸದರಿದ್ದಾರೆ. ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ, ಬಿಜೆಪಿಯಿಂದ ಮೂವರು ಸಚಿವರಿದ್ದಾರೆ:
- ಪ್ರಲ್ಹಾದ್ ಜೋಶಿ (ಕೇಂದ್ರ ಕ್ಯಾಬಿನೆಟ್ ಸಚಿವ)
- ವಿ. ಸೋಮಣ್ಣ (ಕೇಂದ್ರ ರಾಜ್ಯ ಸಚಿವ)
- ಶೋಭಾ ಕರಂದ್ಲಾಜೆ (ಕೇಂದ್ರ ರಾಜ್ಯ ಸಚಿವೆ)
ಈ ಮೂವರ ಪೈಕಿ ಒಬ್ಬರನ್ನು ದೆಹಲಿಯಿಂದ ಬಿಡುಗಡೆಗೊಳಿಸಿ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಲಾಗುವುದು ಎನ್ನಲಾಗುತ್ತಿದ್ದು, ಸದ್ಯ ರೇಸ್ನಲ್ಲಿ ಪ್ರಲ್ಹಾದ್ ಜೋಶಿ ಮತ್ತು ವಿ. ಸೋಮಣ್ಣ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಹಿರಿಯ ನಾಯಕತ್ವದ ಅನುಭವ ಹೊಂದಿರುವ ಜೋಶಿ ಅವರಿಗೆ ಮಣೆ ಹಾಕಲಾಗುತ್ತದೆಯೇ ಅಥವಾ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವಿ. ಸೋಮಣ್ಣ ಅವರಿಗೆ ಲಕ್ ಒಲಿಯಲಿದೆಯೇ ಎಂಬುದು ಸದ್ಯದ ಬಿಗ್ ಸಸ್ಪೆನ್ಸ್!



