ಅತಿಯಾದ ವಿದ್ಯಾರ್ಹತೆ ಇದ್ದವರಿಗೆ ಸುಪ್ರೀಂ ಶಾಕ್ : ಕಡಿಮೆ ದರ್ಜೆಯ ಹುದ್ದೆಗೆ ಹೆಚ್ಚಿನ ಶಿಕ್ಷಣ ಮಾನದಂಡವಲ್ಲ

ಸರ್ಕಾರಿ ಹಾಗೂ ಖಾಸಗಿ ವಲಯದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ದೀರ್ಘಕಾಲದಿಂದಲೂ ಚರ್ಚೆಯಲ್ಲಿದ್ದ ಅತಿಯಾದ ವಿದ್ಯಾರ್ಹತೆವಿವಾದಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಮೂಲಕ ತೆರೆ ಎಳೆದಿದೆ. ಯಾವುದೇ ಕಿರಿಯ ಶ್ರೇಣಿಯ ಅಥವಾ ಕಡಿಮೆ ವಿದ್ಯಾರ್ಹತೆಯ ಹುದ್ದೆಗಳಿಗೆ ಉನ್ನತ ಪದವಿ ಪಡೆದ ಅಭ್ಯರ್ಥಿಗಳು ಕೇವಲ ತಾವು ಹೆಚ್ಚು ಓದಿದ್ದೇವೆ ಎಂಬ ಕಾರಣಕ್ಕೆ ಉದ್ಯೋಗದ ಮೇಲೆ ಕಾನೂನಾತ್ಮಕ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಯಾವುದೇ ಒಂದು ನಿರ್ದಿಷ್ಟ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವಾಗ ಆ ಕೆಲಸದ ಜವಾಬ್ದಾರಿಗೆ ತಕ್ಕಂತೆ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನೇ ಮುಖ್ಯ ಮಾನದಂಡವಾಗಿ ಪರಿಗಣಿಸಬೇಕು. ಉನ್ನತ ಅರ್ಹತೆ ಹೊಂದಿರುವ ಅಭ್ಯರ್ಥಿಯು ತಮ್ಮ ಸಂಸ್ಥೆಯ ಹುದ್ದೆಗೆ ಸೂಕ್ತವಲ್ಲ ಎಂದು ಉದ್ಯೋಗದಾತರು ನಿರ್ಧರಿಸಿದರೆ, ಅದನ್ನು ಪ್ರಶ್ನಿಸುವ ಹಕ್ಕು ಅಭ್ಯರ್ಥಿಗಳಿಗೆ ಇರುವುದಿಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಯಾರಿಗೆ ಆದ್ಯತೆ ನೀಡಬೇಕು ಎಂಬುದು ಸಂಪೂರ್ಣವಾಗಿ ಉದ್ಯೋಗ ನೀಡುವ ಸಂಸ್ಥೆಯ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Also Read: ಕೇರಳಕ್ಕೆ ಮುಂಗಾರು ಅಧಿಕೃತ ಪ್ರವೇಶ : ಕರ್ನಾಟಕದಲ್ಲಿ ಇಂದಿನಿಂದ ವ್ಯಾಪಕ ಮಳೆ ಮುನ್ಸೂಚನೆ

ಕಡಿಮೆ ವಿದ್ಯಾರ್ಹತೆಯ ಹುದ್ದೆಗೆ ಅತಿಯಾದ ವಿದ್ಯಾರ್ಹತೆ ಇರುವವರು ನೇಮಕಗೊಂಡರೆ ಅವರಿಗೆ ಎಂದಿಗೂ ತಮ್ಮ ಹುದ್ದೆಯ ಮೇಲೆ ಅಸಮಾಧಾನ ಇರುತ್ತದೆ. ಅಲ್ಲದೇ ಅವರು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಒದಗಿ ಬಂದಾಗ ಇಲ್ಲಿ ಕೆಲಸ ಬಿಡಬಹುದು ಎಂಬ ಭಯ ಉದ್ಯೋಗದಾತರಿಗೆ ಇರುವುದು ಸಹಜ. ಹೀಗಾಗಿ ಆಯಾ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆ ಇರುವವರಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Supreme Court shocks over-qualified people – Higher education is not a criterion for low-level posts

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories