ಮಂಗಳೂರಲ್ಲಿ ಐಟಿ ಹಬ್ : ‘ದೇರೆಬೈಲ್’ ಪ್ಲಾನ್ ಸಿದ್ದಪಡಿಸಿದ ರಾಜ್ಯ ಸರಕಾರ

ಮಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಉದ್ಯೋಗಾವಕಾಶ ಸೃಷ್ಟಿಸಿ ಕರ್ನಾಟಕ ಸರಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಬಂದರು ನಗರಿ, ಕರಾವಳಿಯ ಹೆಬ್ಬಾಗಿಲು ಮಂಗಳೂರನ್ನು ರಾಜ್ಯದ ಮುಂದಿನ ಪ್ರಮುಖ 'ಐಟಿ ಹಬ್' (IT Hub) ಆಗಿ ಪರಿವರ್ತಿಸಲು ಬೃಹತ್‌ ಯೋಜನೆಯನ್ನು ಸಿದ್ದಪಡಿಸಿದೆ.

ಮಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಉದ್ಯೋಗಾವಕಾಶ ಸೃಷ್ಟಿಸಿ ಕರ್ನಾಟಕ ಸರಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಬಂದರು ನಗರಿ, ಕರಾವಳಿಯ ಹೆಬ್ಬಾಗಿಲು ಮಂಗಳೂರನ್ನು ರಾಜ್ಯದ ಮುಂದಿನ ಪ್ರಮುಖ ‘ಐಟಿ ಹಬ್’ (IT Hub) ಆಗಿ ಪರಿವರ್ತಿಸಲು ಬೃಹತ್‌ ಯೋಜನೆಯನ್ನು ಸಿದ್ದಪಡಿಸಿದೆ. ಈ ಮೂಲಕ ಕರಾವಳಿ ಭಾಗದಲ್ಲಿ ಸಾವಿರಾರು ಯುವ ಉದ್ಯೋಕಾಂಕ್ಷಿಗಳಿಗೆ ಹೊಸ ಭರವಸೆ ಸಿಕ್ಕಂತಾಗಿದೆ.

ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಮಂಗಳೂರಿನ ಡೆರೆಬೈಲ್ ಐಟಿ ಕೇಂದ್ರವಾಗಲಿದೆ. ದೆರೆಬೈಲಿನಲ್ಲಿ ಬರೋಬ್ಬರಿ 1.5 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್ ಐಟಿ ಪಾರ್ಕ್ (IT Park) ಮತ್ತು ಅತ್ಯಾಧುನಿಕ ಫಿನ್‌ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ (FinTech Center of Excellence) ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಪ್ರತಿ ವರ್ಷ ಸಾವಿರಾರು ಇಂಜಿನಿಯರಿಂಗ್ ಹಾಗೂ ಐಟಿ ಪದವೀಧರರು ಉದ್ಯೋಗ ಹುಡುಕಿಕೊಂಡು ಬೆಂಗಳೂರು, ಮುಂಬೈ ಅಥವಾ ವಿದೇಶಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಸರ್ಕಾರದ ಈ ‘ದೆರೆಬೈಲ್ ಪ್ಲಾನ್’ ಕರಾವಳಿಯ ಪ್ರತಿಭೆಗಳಿಗೆ ತಾಯ್ನಾಡಿನಲ್ಲೇ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶವನ್ನು ತಂದುಕೊಡಲಿದೆ. ಈ ಐಟಿ ಪಾರ್ಕ್ ಆರಂಭವಾದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಐಟಿ ಪ್ರೊಫೆಷನಲ್ಸ್‌ಗಳಿಗೆ ಉದ್ಯೋಗ ಸಿಗಲಿದೆ.

Also Read: ರಾಜ್ಯ ಸರ್ಕಾರಿ ನೌಕರರಿಗೆ ಕಚೇರಿಗೆ ಹಾಜರಾಗುವ ಸಮಯದ ಬಗ್ಗೆ ಸರ್ಕಾರದ ಮಹತ್ವದ ಆದೇಶ

ಬಹಳ ಮುಖ್ಯವಾಗಿ ಈ ಪಾರ್ಕ್‌ನಲ್ಲಿ ಸ್ಥಾಪನೆಯಾಗುತ್ತಿರುವ ಫಿನ್‌ಟೆಕ್, ಸೆಂಟರ್ ಆಫ್ ಎಕ್ಸಲೆನ್ಸ್, Startupsಗಳಿಗೆ ಮತ್ತು ಹೊಸ ಆವಿಷ್ಕಾರಗಳಿಗೆ ದೊಡ್ಡ ವೇದಿಕೆಯಾಗಲಿದೆ. ಡಿಜಿಟಲ್ ಬ್ಯಾಂಕಿಂಗ್, ಸೈಬರ್ ಸೆಕ್ಯೂರಿಟಿ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಆಧಾರದ ಮೇಲೆ ಕರಾವಳಿಯಲ್ಲಿ ಹೊಸ ಉದ್ಯಮ ಕ್ರಾಂತಿ ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಂಗಳೂರಿನಲ್ಲಿ ಈಗಾಗಲೇ ಉತ್ತಮ ರಸ್ತೆ, ಬಂದರು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೌಕರ್ಯ ಇರುವುದರಿಂದ ಜಾಗತಿಕ ಐಟಿ ದೈತ್ಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿವೆ. ಬೆಂಗಳೂರಿನ ಹೊರಗೆ ಐಟಿ ಉದ್ಯಮವನ್ನು ವಿಸ್ತರಿಸುವ ಸರ್ಕಾರದ ‘ಬಿಯಾಂಡ್ ಬೆಂಗಳೂರು’ (Beyond Bengaluru) ನೀತಿಗೆ ಈ ಯೋಜನೆ ದೊಡ್ಡ ಮೈಲಿಗಲ್ಲಾಗಲಿದ್ದು, ಕರಾವಳಿಯ ಆರ್ಥಿಕ ಚಿತ್ರಣವನ್ನೇ ಬದಲಾಯಿಸಲಿದೆ.

IT hub in Mangaluru State government prepares Derebail plan

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories