ಚಿನ್ನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಪಾತಾಳಕ್ಕೆ ಕುಸಿದ ಚಿನ್ನದ ದರ, ಇಂದಿನ ಲೇಟೆಸ್ಟ್ ದರ ಎಷ್ಟು ಗೊತ್ತಾ?
ಜಾಗತಿಕ ಮಾರುಕಟ್ಟೆಯ ತಲ್ಲಣ, ಅಂತಾರಾಷ್ಟ್ರೀಯ ಹೂಡಿಕೆ ವೈಪರೀತ್ಯದಿಂದಾಗಿ ಚಿನ್ನದ ದರದಲ್ಲಿ ಬಾರೀ ಇಳಿಕೆ ಕಂಡಿದೆ.

Gold Rate Today Bangalore Update: ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಜಾಗತಿಕ ಮಾರುಕಟ್ಟೆಯ ತಲ್ಲಣ, ಅಂತಾರಾಷ್ಟ್ರೀಯ ಹೂಡಿಕೆ ವೈಪರೀತ್ಯದಿಂದಾಗಿ ಚಿನ್ನದ ದರದಲ್ಲಿ ಬಾರೀ ಇಳಿಕೆ ಕಂಡಿದೆ. ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಮುನ್ನುಗ್ಗುತ್ತಿದ್ದ ಚಿನ್ನದ ದರ ಒಂದೇ ದಿನ 4 ಸಾವಿರ ರೂಪಾಯಿಗೂ ಅಧಿಕ ಇಳಿಕೆ ಕಂಡಿದೆ.
ಬೆಂಗಳೂರಲ್ಲಿ ಒಂದೇ ದಿನ ₹3,000 ಕ್ಕೂ ಹೆಚ್ಚು ಇಳಿಕೆ
ಮಾರುಕಟ್ಟೆಯ ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.
22 ಕ್ಯಾರೆಟ್ ಆಭರಣ ಚಿನ್ನ: ಬುಧವಾರದ ವಹಿವಾಟಿನಲ್ಲಿ ಪ್ರತಿ ಗ್ರಾಮ್ಗೆ ಭಾರಿ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ₹13,755 ತಲುಪಿದೆ. ಇದರೊಂದಿಗೆ 10 ಗ್ರಾಂ ಆಭರಣ ಚಿನ್ನದ ಬೆಲೆ ₹1,37,550 ಕ್ಕೆ ಇಳಿಕೆಯಾದಂತಾಗಿದೆ. ನಿನ್ನೆಗೆ ಹೋಲಿಸಿದರೆ ಪ್ರತಿ 10 ಗ್ರಾಂಗೆ ಸುಮಾರು ₹2,950 ರಷ್ಟು ಭಾರಿ ರಿಯಾಯಿತಿ ಸಿಕ್ಕಂತಾಗಿದೆ.
24 ಕ್ಯಾರೆಟ್ ಅಪರಂಜಿ ಚಿನ್ನ: ಇನ್ನು ಅತ್ಯಂತ ಶುದ್ಧವಾದ 24 ಕ್ಯಾರೆಟ್ ಡಿಜಿಟಲ್ ಹಾಗೂ ಬಿಸ್ಕೆಟ್ ಚಿನ್ನದ ದರ ಪ್ರತಿ ಗ್ರಾಮ್ಗೆ ₹14,443 ಕ್ಕೆ ಇಳಿಕೆಯಾಗಿದೆ. ಅಂದರೆ 10 ಗ್ರಾಂ ಅಪರಂಜಿ ಚಿನ್ನದ ಇಂದಿನ ದರ ₹1,44,430 ಆಗಿದೆ. ಇದು ಹೂಡಿಕೆ ಮಾಡಲು ಸಕ್ಕತ್ ಸೂಕ್ತ ಸಮಯ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ಗೆ ₹300 ಸಬ್ಸಿಡಿ: ಬೆಲೆ ಏರಿಕೆಯಿಂದ ಜನರಿಗೆ ಬಿಗ್ ರಿಲೀಫ್!
ಬೆಳ್ಳಿ ದರದಲ್ಲೂ ಭಾರಿ ಇಳಿಕೆ
ಬಂಗಾರದ ಬೆಲೆಯ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ದರ ಕೂಡ ಗ್ರಾಹಕರಿಗೆ ನಿರಾಳ ತಂದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ ಸುಮಾರು ₹9,000 ಕ್ಕೂ ಹೆಚ್ಚು ಭಾರಿ ಇಳಿಕೆ ಕಂಡುಬಂದಿದ್ದು, ಸದ್ಯ ಪ್ರತಿ ಕೆಜಿ ಬೆಳ್ಳಿ ಬೆಲೆ ₹2,36,190 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನ ಮತ್ತು ಬೆಳ್ಳಿ ಎರಡೂ ಒಟ್ಟಿಗೇ ಇಳಿಕೆಯ ಹಾದಿ ಹಿಡಿದಿರುವುದು ಮಧ್ಯಮ ವರ್ಗದ ಗ್ರಾಹಕರಿಗೆ ಆಭರಣ ಖರೀದಿಸಲು ಸುವರ್ಣಾವಕಾಶ ಕಲ್ಪಿಸಿದೆ.
ಚಿನ್ನ, ಬೆಳ್ಳಿ ದರ ಇಳಿಕೆಗೆ ಅಸಲಿ ಕಾರಣವೇನು ?
ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಸೂಚ್ಯಂಕ ಬಲಗೊಳ್ಳುತ್ತಿರುವುದು ಮತ್ತು ಜಾಗತಿಕ ಕೇಂದ್ರೀಯ ಬ್ಯಾಂಕ್ಗಳು ಚಿನ್ನದ ಹೂಡಿಕೆಯಿಂದ ಲಾಭಾಂಶವನ್ನು ಹಿಂಪಡೆಯುತ್ತಿರುವುದು ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜೊತೆಗೆ ದೇಶೀಯವಾಗಿ ಮದುವೆ ಸೀಸನ್ ಮುಕ್ತಾಯದ ಹಂತಕ್ಕೆ ತಲುಪುತ್ತಿರುವುದರಿಂದ ಬೇಡಿಕೆಯಲ್ಲೂ ಕೊಂಚ ಇಳಿಕೆಯಾಗಿದೆ. ಆದರೆ, ಜೂನ್ ತಿಂಗಳ ಆರಂಭದ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ದಾಖಲಾಗಿರುವ ದರವೇ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.



