ನಿಮಗೂ ಈ ರೀತಿ ಚಹಾ ಕುಡಿಯುವ ಅಭ್ಯಾಸವಿದೆಯಾ : ಹಾಗಾದ್ರೆ ಅದನ್ನ ಇಂದೇ ಬದಲಾಯಿಸಿಕೊಳ್ಳಿ, ಇಲ್ಲವಾದ್ರೆ ಆರೋಗ್ಯ ಹಾನಿ ಗ್ಯಾರಂಟಿ
ಬೆಳಗ್ಗಿನ ಆಹ್ಲಾದಕರ ವಾತಾವರಣದಿಂದ ಹಿಡಿದು ಸಂಜೆಯ ವಾಕಿಂಗ್‌ವರೆಗೆ ಚಹಾ ಎಲ್ಲಡೆ ತನ್ನ ಅಸ್ತಿತ್ವ ಪಡೆದುಕೊಂಡಿದೆ. ಆದರೆ ಚಹಾ ಕುಡಿಯುವ ವೇಳೆ ಅದರೊಟ್ಟಿಗೆ ಕೆಲವು ಆಹಾರಗಳನ್ನು ತಿನ್ನಲಾಗುತ್ತದೆ. ನೀವೂ ಹಾಗೆ ಮಾಡ್ತಾ ಇದ್ರೆ ಇಂದೇ ಬದಲಾಯಿಸಿಕೊಳ್ಳಿ.
ಚಹಾ ಲಕ್ಷಾಂತರ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗ. ಬೆಳಗ್ಗಿನ ಬೆಡ್ ಟೀಯೊಂದಿಗೆ ಪ್ರಾರಂಭವಾಗುವ ಚಹಾದ ಕತೆ ಸಂಜೆಯ ಟೀ ಟೈಮ್‌ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಒಂದು ಕಪ್ ಚಹಾ ಜನರ ಮೂಡ್ ಅನ್ನೇ ಬದಲಾಯಿಸುತ್ತದೆ ಎಂದು ಹೇಳುವುದನ್ನ ಬೇಕಾದಷ್ಟು ಬಾರಿ ಕೇಳಿರುತ್ತೇವೆ. ಭಾರತದಲ್ಲಿ ಚಹಾ ಕೇವಲ ಒಂದು ಪಾನೀಯವಲ್ಲ, ಸಾಮಾಜಿಕ ಜೀವನದ ಅವಿಭಾಜ್ಯ ಅಂಗವೂ ಹೌದು. ಮನೆಗೆ ಬಂದ ಅತಿಥಿಗಳ ಸತ್ಕಾರದಿಂದ ಹಿಡಿದು, ಅಪರೂಪಕ್ಕೆ ದಾರಿಯಲ್ಲಿ ಸಿಕ್ಕ ಗೆಳಯರನ್ನು ಚಹಾದೊಂದಿಗೆ ಆತ್ಮೀಯವಾಗಿ ಬೀಳ್ಕೊಡುವವರೆಗೆ ಅದು ನಮ್ಮನ್ನು ಆವರಿಸಿದೆ. ಆದರೆ ಚಹಾವನ್ನು ಸರಿಯಾದ ಕ್ರಮದಲ್ಲಿ ಕುಡಿದರೆ ತೊಂದರೆಯೇನಿಲ್ಲ. ಆದರೆ ನಮ್ಮಲ್ಲಿ ಬಹಳಷ್ಟು ಜನರು ತಿಳಿದೊ ತಿಳಿಯದೆಯೋ ಚಹಾದೊಂದಿಗೆ ಏನೇನೋ ಆಹಾರಗಳನ್ನು ಸೇವಿಸಿಸುತ್ತಾರೆ. ಆಗ ಮಾತ್ರ ಅದು ಆರೋಗ್ಯದ ಮೇಲೆ ಹಾನಿ ಮಾಡಲು ಪ್ರಾರಂಭಿಸುತ್ತದೆ. ಹಾಗಾದರೆ ನೀವು ಚಹಾ ಪ್ರಿಯರಾಗಿದ್ದು, ಪ್ರತಿದಿನ ಹಲವು ಬಾರಿ ಚಹಾ ಕುಡಿಯುವವರಾಗಿದ್ದರೆ ಈ ವಿಷಯಗಳನ್ನು ಖಂಡಿತ ತಿಳಿದುಕೊಳ್ಳಿ. ಚಹಾದೊಂದಿಗೆ ಯಾವ ಯಾವ ಆಹಾರಗಳನ್ನು ಸೇವಿಸುವುದನ್ನು ಬಿಡಬೇಕು ಎಂದು ನೋಡೋಣ.
ಮಸಾಲೆಯುಕ್ತ ತಿಂಡಿ
ನೀವೂ ಕೂಡಾ ಚಹಾದೊಂದಿಗೆ ಅತಿ ಮಸಾಲೆಯುಕ್ತ ತಿಂಡಿಗಳನ್ನು ತಿನ್ನುತ್ತಿದ್ದರೆ ಎಚ್ಚರ. ಬೆಳ್ಳುಳ್ಳಿ, ಈರುಳ್ಳಿ, ಖಾರ ಚಟ್ನಿ, ಮಾಸಾಲ ಮಿರ್ಚಿಯಂತಹ ಆಹಾರಗಳನ್ನು ಸೇವಿಸುತ್ತಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅದರಿಂದ ಎಸಿಡಿಟಿ, ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಲಿಂಬು ಬೆರೆಸಿ ಕುಡಿಯುವ ಮೊದಲು ಇದನ್ನು ತಿಳಿಯಿರಿ
ಲೆಮನ್ ಟೀ ದೇಹಕ್ಕೆ ಉತ್ತಮ. ಆದರೆ ಎಲ್ಲರಿಗೂ ಲಿಂಬು ಸೇರಿಸಿದ ಚಹಾ ಪ್ರಯೋಜನಾಕಾರಿಯಲ್ಲ. ತಜ್ಞರ ಪ್ರಕಾರ ಕೆಲವು ಜನರಲ್ಲಿ ಆಮ್ಲೀಯತೆ ಮತ್ತು ಹೊಟ್ಟೆ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಈಗಾಗಲೇ ಎಸಿಡಿಟಿಯಿಂದ ಬಳಲುತ್ತಿರುವವರು ಲಿಂಬು ಬೆರೆಸಿದ ಚಹಾ ಕುಡಿಯುವುದನ್ನು ತಪ್ಪಿಸಿ.
ಇದನ್ನೂ ಓದಿ: ತೂಕ ಇಳಿಕೆಗೆ ಮೊಟ್ಟೆ ಬೆಸ್ಟ್ ಹೇಗೆ? ಆಹಾರ ತಜ್ಞರು ಹೇಳುವ ಈ ಕ್ರಮ ಪಾಲಿಸಿ ನೋಡಿ
ಬಿಸ್ಕತ್ತು ಮತ್ತು ಟೋಸ್ಟ್
ಕೆಲವರಿಗೆ ಚಹಾವನ್ನು ಬಿಸ್ಕತ್ತು ಮತ್ತು ಟೋಸ್ಟ್‌ನೊಟ್ಟಿಗೆ ಸೇವಿಸುವುದೆಂದರೆ ಬಹಳ ಪ್ರೀತಿ. ಆದರೆ ಅವೆರಡೂ ಮೈದಾದಿಂದ ತಯಾರಿಸಿರುತ್ತಾರೆ. ಹಾಗಾಗಿ ಪ್ರತಿದಿನ ಚಹಾದೊಂದಿಗೆ ಬಿಸ್ಕತ್ತು, ಟೋಸ್ಟ್ ಸೇವಿಸುವುದರಿಂದ ಅಜೀರ್ಣ, ಮಲಬದ್ಧತೆಯಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅರಿಶಿನದೊಂದಿಗೆ ಕುಡಿಯಬೇಡಿ
ಅರಿಶಿನದ ಹಾಲು ಅಥವಾ ಅರಿಶಿನ ಸೇರಿಸಿದ ಆಹಾರ ಪದಾರ್ಥಗಳನ್ನು ಸೇವಿಸಿದ ತಕ್ಷಣ ಚಹಾ ಕುಡಿಯುವುದು ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಎರೆಡರಲ್ಲೂ ಇರುವ ಅಂಶಗಳು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಹೊಟ್ಟೆ ಭಾರ ಅಥವಾ ಎದೆಯುಬ್ಬರ ಸಮಸ್ಯೆ ಕಾಣಿಸಿಕೊಳ್ಳಬಹುದು.
ಚಹಾ ಕುಡಿದ ತಕ್ಷಣ ತಂಪು ಪಾನೀಯ ಕುಡಿಯಬೇಡಿ
ಬಿಸಿ ಬಿಸಿ ಚಹಾ ಹೀರಿದ ತಕ್ಷಣ ತಂಪು ಪಾನೀಯ ಕುಡಿಯಬೇಡಿ. ಏಕೆಂದರೆ ಬಿಸಿ ಚಹಾದ ನಂತರ ತಣ್ಣನೆಯ ಪಾನೀಯ ಸೇವಿಸುವುದರಿಂದ ಹಲ್ಲಿನ ಸೂಕ್ಷ್ಮತೆ ಹೆಚ್ಚಾಗಬಹುದು. ಗ್ಯಾಸ್ಟ್ರಿಕ್, ಎಸಿಡಿಟಿ ಅಥವಾ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಚಹಾ ಕುಡಿಯುವ ಮೊದಲು ಇರಲಿ ಸ್ವಲ್ಪ ಎಚ್ಚರಿಕೆ
ಚಹಾದಿಂದ ನಮ್ಮ ಮೂಡ್ ಸರಿಯಾಗುತ್ತದೆ ಎಂದು ಮಿತಿಮೀರಿ ಕುಡಿಯಬೇಡಿ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಚಹಾದ ಅತಿಯಾದ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ದಾರಿ. ಹಾಗಾಗಿ ಮಿತವಾಗಿ ಚಹಾ ಕುಡಿಯಿರಿ.



