ನಿಮ್ಮ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ತಪ್ಪು ದಿಕ್ಕಿನಲ್ಲಿದೆಯಾ ? ವ್ಯಾಪಾರದಲ್ಲಿ ಲಾಭ ಗಳಿಸಲು ಈ ವಾಸ್ತು ಸಲಹೆ ಪಾಲಿಸಿ
ನಿಮಗೆ ವ್ಯಾಪಾರದಲ್ಲಿ ಸಿಕ್ಕಾಪಟ್ಟೆ ಲಾಸ್ ಆಗ್ತಾ ಇದೆಯಾ? ಅದಕ್ಕೆ ನೀವು ಕ್ಯಾಶ್ ಕೌಂಟರ್ ಇಟ್ಟ ದಿಕ್ಕು ಕೂಡಾ ಕಾರಣವಾಗಿರಬಹುದು. ಸಂಪತ್ತಿನ ಒಡೆಯ ಕುಬೇರನ ಕೃಪೆಗಾಗಿ ಈ ವಾಸ್ತು ಸಲಹೆ ಪಾಲಿಸಿ.
ಭಾರತೀಯರು ಜ್ಯೋತಿಷ್ಯ ಶಾಸ್ತ್ರದಷ್ಟೆ ನಂಬಿಕೆಯನ್ನು ವಾಸ್ತು ಶಾಸ್ತ್ರದಲ್ಲಿಯು ಇಟ್ಟಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಹೇಳಲಾದ ಸಲಹೆಗಳು ಜನಸಾಮಾನ್ಯರ ನಿತ್ಯದ ಬದುಕಿನ ಬವಣೆಗಳಿಗೆ ಸರಳ ಉಪಾಯಗಳಾಗಿವೆ. ಅದು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದಲ್ಲಿ ಎಲ್ಲಾ ದಿಕ್ಕುಗಳಿಗೂ ವಿಶೇಷ ಮಹತ್ವ ನೀಡಲಾಗಿದೆ. ವಾಸ್ತು ಪ್ರಕಾರ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ಅಥವಾ ದುಡ್ಡಿನ ಪೆಟ್ಟಿಗೆಯನ್ನು ತಪ್ಪು ದಿಕ್ಕಿನಲ್ಲಿ ಇಡುವುದುರಿಂದ ವ್ಯಾಪಾರದಲ್ಲಿ ನಷ್ಟವುಂಟಾಗಬಹುದು. ಜೀವನ ಕಷ್ಟದಲ್ಲಿ ಸಾಗಬಹುದು ಎನ್ನಲಾಗಿದೆ. ಅದಕ್ಕಾಗಿ ಶಾಸ್ತ್ರದಲ್ಲಿ ಕ್ಯಾಶ್ ಕೌಂಟರ್ ಇಡಲು ಸರಿಯಾದ ದಿಕ್ಕನ್ನು ಹೇಳಲಾಗಿದೆ. ಅದನ್ನು ಪಾಲಿಸುವುದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗಿ ಸಂಪತ್ತಿನ ಒಡೆಯ ಕುಬೇರನು ಕೃಪೆ ತೋರುತ್ತಾನೆ. ಹಾಗಾದರೆ ಕ್ಯಾಶ್ ಕೌಂಟರ್ ಇಡಲು ಶುಭ ದಿಕ್ಕು ಯಾವುದು ಎಂದು ನೋಡೋಣ ಬನ್ನಿ.
ಕ್ಯಾಶ್ ಕೌಂಟರ್ ಅನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಪ್ರಕಾರ ಕ್ಯಾಶ್ ಕೌಂಟರ್ ಅನ್ನು ಅಂಗಡಿಯ ಉತ್ತರ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ದಿಕ್ಕು ಸಂಪತ್ತಿನ ಅಧಿದೇವತೆ ಕುಬೇರನ ವಾಸಸ್ಥಾನವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಕ್ಯಾಶ್ ಕೌಂಟರ್ ಇಡುವುದರಿಂದ ಕುಬೇರನ ಆಶೀರ್ವಾದ ಸುಲಭದಲ್ಲಿ ಸಿಗುತ್ತದೆ. ಒಂದು ವೇಳೆ ಉತ್ತರ ದಿಕ್ಕಿನಲ್ಲಿ ಕ್ಯಾಶ್ ಕೌಂಟರ್ ಇಡಲು ಸಾಧ್ಯವಾಗದಿದ್ದರೆ ಅದನ್ನು ಪಶ್ಚಿಮದಲ್ಲಿಯೂ ಇಡಬಹುದು. ಈ ದಿಕ್ಕು ಸೂರ್ಯ ದೇವನಿಗೆ ಸಂಬಂಧಪಟ್ಟಿದೆ ಹಾಗೂ ಇದು ವ್ಯವಹಾರಕ್ಕೆ ಶಕ್ತಿ, ಖ್ಯಾತಿ ಮತ್ತು ಹೊಸ ಬೆಳವಣಿಗೆಯನ್ನು ತರುತ್ತದೆ.
ಇದನ್ನೂ ಓದಿ : ಶುಕ್ರ–ಗುರು ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ : ಈ 3 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು
ಯಾವ ದಿಕ್ಕಿಗೆ ಕ್ಯಾಶ್ ಕೌಂಟರ್ ಇರಲೇಬಾರದು?
ದಕ್ಷಿಣ ದಿಕ್ಕಿನಲ್ಲಿ ಕ್ಯಾಶ್ ಕೌಂಟರ್ ಇರುವುದು ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಈ ದಿಕ್ಕು ಯಮನಿಗೆ ಸಂಬಂಧಿಸಿದ ದಿಕ್ಕು. ಈ ದಿಕ್ಕಿನಲ್ಲಿ ಕ್ಯಾಶ್ ಕೌಂಟರ್ ಇದ್ದರೆ ಆರ್ಥಿಕ ನಷ್ಟ, ವ್ಯಾಪಾರದಲ್ಲಿ ನಷ್ಟಕ್ಕೆ ಕಾರಣವಾಗಬಹುದು.ಇದಲ್ಲದೇ ಆಗ್ನೇಯ ದಿಕ್ಕಿನಲ್ಲಿ ಇಡುವುದು ಕೂಡಾ ತಪ್ಪ ಎಂದು ಹೇಳಲಾಗಿದೆ. ಆ ದಿಕ್ಕಿನಲ್ಲಿಟ್ಟರೆ ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ. ಹಣದ ಕೊರತೆ ಉಂಟಾಗುತ್ತದೆ. ಇದಿಷ್ಟೇ ಅಲ್ಲದೇ ವಾಯುವ್ಯ ದಿಕ್ಕು ಕೂಡಾ ಕ್ಯಾಶ್ ಕೌಂಟರ್‌ಗೆ ಅಶುಭವೆನ್ನಲಾಗಿದೆ. ಈ ದಿಕ್ಕು ಆರ್ಥಿಕ ಅಸ್ಥಿರತೆಗೆ ಕಾರಣವಾಗಬಹುದು ಎಂದು ಶಾಸ್ತ್ರ ಹೇಳುತ್ತದೆ.
ಕ್ಯಾಶ್ ಕೌಂಟರ್ ಹೇಗಿರಬೇಕು?
ಮೊದಲನೆಯದಾಗಿ ಕ್ಯಾಶ್‌ಕೌಂಟರ್ ಅನ್ನು ಎಂದಿಗೂ ಖಾಲಿ ಬಿಡಬೇಡಿ. ಅದರಲ್ಲಿ ಸ್ವಲ್ಪ ಹಣ ಅಥವಾ ಬೆಳ್ಳಿ ನಾಣ್ಯವನ್ನು ಇರಿಸಿ. ಕ್ಯಾಶ್ ಬಾಕ್ಸ್ ಒಳಗೆ ಕೆಂಪು ಬಟ್ಟೆಯನ್ನು ಇಡಬೇಕು. ಅದು ಸಂಪತ್ತನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಬಟ್ಟೆಯ ಮೇಲೆ ಶ್ರೀಯಂತ್ರ, ಕುಬೇರ ಯಂತ್ರ ಅಥವಾ ಗೋಮತಿ ಚಕ್ರವನ್ನು ಸಹ ಇಡಬಹುದು. ಕ್ಯಾಶ್ ಕೌಂಟರ್ ಅನ್ನು ಸದಾ ಸ್ವಚ್ಛವಾಗಿಡಿ.



