ಕುಕ್ಕರ್‌ನಲ್ಲಿ ಅನ್ನ ಬೇಯಿಸಲು ಎಷ್ಟು ನೀರು? ಎಷ್ಟು ವಿಜಿಲ್? ಬೇಕಾಗುತ್ತೆ
ಪ್ರೆಶರ್ ಕುಕ್ಕರ್‌ನಲ್ಲಿ ಅನ್ನ ಮೃದುವಾಗಿ ಮತ್ತು ಚೆನ್ನಾಗಿ ಬೇಯಬೇಕಾದರೆ ನೀರಿನ ಪ್ರಮಾಣ ಹಾಗೂ ವಿಜಿಲ್‌ಗಳ ಸಂಖ್ಯೆಯ ಬಗ್ಗೆ ಸರಿಯಾದ ಮಾಹಿತಿ ಅಗತ್ಯ. ಸಣ್ಣ ತಪ್ಪೂ ಅನ್ನದ ಗುಣಮಟ್ಟವನ್ನು ಹಾಳುಮಾಡಬಹುದು.

ಭಾರತೀಯರ ಊಟದಲ್ಲಿ ಅನ್ನಕ್ಕೆ ವಿಶೇಷ ಸ್ಥಾನವಿದೆ. ಊಟದ ಸಮಯಕ್ಕೆ ಬಿಸಿ ಬಿಸಿ ಅನ್ನ ಸಿದ್ಧವಾಗಿರಬೇಕು ಎನ್ನುವುದು ಬಹುತೇಕರ ಅಭ್ಯಾಸ. ಸಮಯ ಉಳಿಸುವ ಉದ್ದೇಶದಿಂದ ಅನೇಕರು ಪ್ರೆಶರ್ ಕುಕ್ಕರ್‌ನಲ್ಲಿ ಅನ್ನ ಬೇಯಿಸುತ್ತಾರೆ. ಆದರೆ ಸರಿಯಾದ ವಿಧಾನ ತಿಳಿದಿರದಿದ್ದರೆ ಅನ್ನ ಮುದ್ದೆಯಾಗುವುದು ಅಥವಾ ಗಟ್ಟಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.
ಅನ್ನ ಚೆನ್ನಾಗಿ ಬೇಯಲು ಮುಖ್ಯವಾಗಿ ನೀರಿನ ಪ್ರಮಾಣ ಸರಿಯಾಗಿರಬೇಕು. ನೀರು ಕಡಿಮೆಯಾದರೆ ಅಕ್ಕಿ ಸಂಪೂರ್ಣವಾಗಿ ಬೇಯುವುದಿಲ್ಲ. ಹೆಚ್ಚು ನೀರು ಹಾಕಿದರೆ ಅನ್ನ ಅಂಟಿಕೊಂಡು ಮೃದುವಾಗಿ ಮುದ್ದೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಕ್ಕಿ ಮತ್ತು ನೀರಿನ ಪ್ರಮಾಣವನ್ನು ಸರಿಯಾಗಿ ಅಳೆಯುವುದು ಮುಖ್ಯ.
ಸಾಮಾನ್ಯವಾಗಿ ಒಂದು ಗ್ಲಾಸ್ ಅಕ್ಕಿಗೆ ಒಂದೂವರೆ ಗ್ಲಾಸ್ ನೀರು ಹಾಕಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಎರಡು ಗ್ಲಾಸ್ ಅಕ್ಕಿಗೆ ಮೂರು ಗ್ಲಾಸ್ ನೀರು ಹಾಕಬಹುದು. ಈ ಪ್ರಮಾಣದಲ್ಲಿ ಬೇಯಿಸಿದರೆ ಅನ್ನ ಸಮತೋಲನವಾಗಿ ಬೇಯುತ್ತದೆ ಮತ್ತು ಬೇರೆ ಬೇರೆ ಕಾಳುಗಳು ಚೆನ್ನಾಗಿ ಕಾಣಿಸುತ್ತವೆ.
ಬಹುತೇಕರು ಹೆಚ್ಚು ವಿಜಿಲ್ ಬಂದರೆ ಅನ್ನ ಚೆನ್ನಾಗಿ ಬೇಯುತ್ತದೆ ಎಂದು ಭಾವಿಸುತ್ತಾರೆ. ಆದರೆ ಅಕ್ಕಿ ಬೇಯಲು ಹೆಚ್ಚಿನ ಸಮಯ ಅಗತ್ಯವಿಲ್ಲ. ಒಂದು ಅಥವಾ ಎರಡು ಗ್ಲಾಸ್ ಅಕ್ಕಿ ಬೇಯಿಸುವಾಗ ಮಧ್ಯಮ ಉರಿಯಲ್ಲಿ ಒಂದು ವಿಜಿಲ್ ಬಂದ ಬಳಿಕ ಗ್ಯಾಸ್ ಆರಿಸಿದರೆ ಸಾಕು.
ಮೂರು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ಅಕ್ಕಿ ಬೇಯಿಸುವ ಸಂದರ್ಭದಲ್ಲಿ ಉರಿಯನ್ನು ಸ್ವಲ್ಪ ಹೆಚ್ಚು ಇಟ್ಟು ಒಂದು ವಿಜಿಲ್ ಬಂದ ನಂತರ ಸ್ಟೌವ್ ಆಫ್ ಮಾಡಬಹುದು. ನಂತರ ಕುಕ್ಕರ್‌ನೊಳಗಿನ ಒತ್ತಡ ಸಂಪೂರ್ಣವಾಗಿ ಹೊರಬಂದ ಬಳಿಕವೇ ಮುಚ್ಚಳ ತೆಗೆಯಬೇಕು. ಇದರಿಂದ ಅನ್ನ ಮೃದುವಾಗಿ ಮತ್ತು ಸರಿಯಾಗಿ ಬೇಯುತ್ತದೆ.
ಅಕ್ಕಿಯನ್ನು ಬೇಯಿಸುವ ಮೊದಲು ಎರಡು ಬಾರಿ ಮಾತ್ರ ನೀರಿನಲ್ಲಿ ತೊಳೆಯುವುದು ಉತ್ತಮ. ಅತಿಯಾಗಿ ತೊಳೆಯುವುದರಿಂದ ಅಕ್ಕಿಯ ಮೇಲಿನ ಪದರ ದುರ್ಬಲವಾಗಿ, ಬೇಯಿಸಿದ ಬಳಿಕ ಅನ್ನ ಮುದ್ದೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಅಡುಗೆ ಪರಿಣಿತರ ಪ್ರಕಾರ, ನೀರಿನ ಪ್ರಮಾಣ, ಉರಿಯ ತೀವ್ರತೆ ಮತ್ತು ವಿಜಿಲ್‌ಗಳ ಸಂಖ್ಯೆಯನ್ನು ಸರಿಯಾಗಿ ಪಾಲಿಸಿದರೆ ಪ್ರತಿಸಾರಿ ಕುಕ್ಕರ್‌ನಲ್ಲಿ ರುಚಿಕರ ಹಾಗೂ ಮೃದುವಾದ ಅನ್ನವನ್ನು ಸುಲಭವಾಗಿ ತಯಾರಿಸಬಹುದು.



