ಹೀರೋ ಫ್ಲೆಕ್ಸ್ ಫ್ಯೂಯಲ್ ಬೈಕ್ ಖರೀದಿಯಲ್ಲಿ ಭರ್ಜರಿ ರಿಯಾಯಿತಿ ! ಈ ಅವಕಾಶ ಮಿಸ್ ಮಾಡ್ಕೋಬೇಡಿ
ಹೀರೋ ಮೋಟೋಕಾರ್ಪ್ ದೇಶದ ಮೊದಲ ಫ್ಲೆಕ್ಸ್ ಫ್ಯೂಯಲ್ ಮೋಟಾರ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ ಅವುಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಹೀರೋ ಮೋಟೋಕಾರ್ಪ್ ದೇಶದ ಮೊದಲ ಫ್ಲೆಕ್ಸ್ ಫ್ಯೂಯಲ್ ಮೋಟಾರ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಸ್ಪ್ಲೆಂಡರ್ + ಮತ್ತು HF ಡೀಲಕ್ಸ್ ಎಂಬ ಎಥೆನಾಲ್ ಇಂಧನದಿಂದ ಓಡುವ ಎರಡು 100 cc ಬೈಕ್ ಅದಾಗಿತ್ತು. ವರದಿಗಳ ಪ್ರಕಾರ ಕಂಪನಿಯು ತನ್ನ ಮೋಟಾರ್ ಸೈಕಲ್ಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಅವುಗಳಲ್ಲಿ ಬಿಡುಗಡೆಯಾಗಿರುವ ಎರಡು ಫ್ಲೆಕ್ಸ್ ಫ್ಯೂಯಲ್ ಬೈಕ್ಗಳು ಸೇರಿವೆ. ಫ್ಲೆಕ್ಸ್ ಇಂಧನದ ಬೈಕ್ ಖರೀದಿಸುವ ಯೋಜನೆ ನಿಮಗಿದ್ದರೆ ಈ ಆಫರ್ಗಳ ಲಾಭ ಪಡೆದುಕೊಳ್ಳಿ. ಹಾಗಾದರೆ ಯಾವ ಬೈಕ್ ಖರೀದಿಯಿಂದ ನಿಮಗೆಷ್ಟು ಲಾಭವಾಗುತ್ತದೆ ಎಂದು ನೋಡೋಣ.
ಯಾವುದಕ್ಕೆ ಆಫರ್?
ಹೀರೋ ತನ್ನ ಬೈಕ್ಗಳಿಗೆ ಜೂನ್ ತಿಂಗಳ ಆಫರ್ ಘೋಷಿಸಿದೆ. ಅವುಗಳಲ್ಲಿ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಿರುವ ಫ್ಲೆಕ್ಸ್ ತಂತ್ರಜ್ಞಾನದ ಹೀರೋ ಸ್ಪ್ಲೆಂಡರ್+ ಮತ್ತು HF ಡಿಲಕ್ಸ್ ಸೇರಿವೆ.
ಎಂಜಿನ್ ಎಷ್ಟು ಶಕ್ತಿಶಾಲಿಯಾಗಿದೆ?
ಈ ಎರಡೂ ಫ್ಲೆಕ್ಸ್-ಫ್ಯೂಯಲ್ ತಂತ್ರಜ್ಞಾನದ ಮೋಟಾರ್ಸೈಕಲ್ಗಳು 97.2 ಸಿಸಿ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತವೆ. ಇವೆರಡೂ ಬೈಕ್ಗಳು E85 ಪೆಟ್ರೋಲ್ನಿಂದ ಚಲಿಸುವುದರ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ E20 ಪೆಟ್ರೋಲ್ನಿಂದ ಕೂಡ ಚಲಿಸಬಲ್ಲದು.
ಇದನ್ನೂ ಓದಿ: ವಾಹನ ಸವಾರರಿಗೆ ಸಿಹಿ ಸುದ್ದಿ! ಪೆಟ್ರೋಲ್, ಡೀಸೆಲ್ ದರ ಭಾರೀ ಇಳಿಕೆಯಾಗುವ ಸಾಧ್ಯತೆ
ಉಳಿತಾಯ ಎಷ್ಟು?
ಮಾಹಿತಿಯ ಪ್ರಕಾರ, ಬೈಕ್ ತಯಾರಕರು ಎರಡೂ ಫ್ಲೆಕ್ಸ್-ಇಂಧನ ಮೋಟಾರ್ಸೈಕಲ್ಗಳಲ್ಲಿ ₹4,000 ವರೆಗೆ ಉಳಿತಾಯವನ್ನು ನೀಡುತ್ತಿದ್ದಾರೆ. ಎರಡೂ ಬೈಕ್ಗಳ ವಿತರಣೆಯು ಜುಲೈನಿಂದ ಪ್ರಾರಂಭವಾಗುವುದರಿಂದ ಈ ಕೊಡುಗೆ ಜುಲೈ 2026 ರವರೆಗೆ ಮಾನ್ಯವಾಗಿರುತ್ತದೆ ಎನ್ನಲಾಗಿದೆ. ಎರಡೂ ಮೋಟಾರ್ ಸೈಕಲ್ಗಳ ಮೇಲೆ ನೀಡಲಾಗುವ ರಿಯಾಯಿತಿಗಳ ನಂತರ, ಸ್ಪ್ಲೆಂಡರ್ ಪ್ಲಸ್ನ ಎಕ್ಸ್-ಶೋರೂಂ ಬೆಲೆಯು ₹78,710 ಹಾಗೂ HF ಡಿಲಕ್ಸ್ ಮೋಟಾರ್ಸೈಕಲ್ನ ಎಕ್ಸ್-ಶೋರೂಂ ಬೆಲೆಯನ್ನು ₹68,792 ಕ್ಕೆ ಇಳಿಸಲಾಗಿದೆ. ರಿಯಾಯಿತಿಯ ನಂತರ, ಸ್ಪ್ಲೆಂಡರ್ ಪ್ಲಸ್ E20-ಕಾಂಪ್ಲೈಂಟ್ ಸ್ಪ್ಲೆಂಡರ್ ಪ್ಲಸ್ಗಿಂತ ₹1,153 ಹೆಚ್ಚು ಬೆಲೆಯನ್ನು ಹೊಂದಿದೆ. HF ಡಿಲಕ್ಸ್ ಫ್ಲೆಕ್ಸ್ ಫ್ಯೂಯಲ್ ಬೆಲೆ E20-ಕಾಂಪ್ಲೈಂಟ್ ಮೋಟಾರ್ಸೈಕಲ್ಗಿಂತ ₹1,650 ಅಗ್ಗವಾಗಿದೆ.



