Qatar Massive explosion: ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ; 54 ಜನರಿಗೆ ಗಾಯ, 18 ಮಂದಿ ನಾಪತ್ತೆ

ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಕತಾರ್‌ನ ಬರ್ಜಾನ್ ಅನಿಲ ಸ್ಥಾವರದಲ್ಲಿ ಪ್ರಬಲ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಕನಿಷ್ಠ 54 ಜನರು ಗಾಯಗೊಂಡಿದ್ದಾರೆ ಮತ್ತು 18 ಜನರು ಕಾಣೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ: ಕತಾರ್‌ (Qatar) ನಲ್ಲಿ ಬಾರೀ ಅನಿಲ ಸ್ಪೋಟ ಸಂಭವಿಸಿದೆ. ಇಲ್ಲಿನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದ ಬರ್ಜಾನ್ ಅನಿಲ ಸ್ಥಾವರದಲ್ಲಿ ಸ್ಪೋಟ ಸಂಭವಿಸಿದ್ದು, ಕನಿಷ್ಠ 54 ಮಂದಿ ಗಾಯಗೊಂಡಿದ್ದು, ಸುಮಾರು 18 ಮಂದಿ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಕತಾರ್‌ ದೇಶಕ್ಕೆ ಅನಿಲ ಪೂರೈಕೆ ಮಾಡುವ ಪ್ರಮುಖ ಬರ್ಜಾನ್‌ ಸ್ಥಾವರದಲ್ಲಿ ಸ್ಪೋಟ ಸಂಭವಿಸಿದ ಸಂದರ್ಭದಲ್ಲಿ 54 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ತದನಂತರದಲ್ಲಿ 18 ಮಂದಿ ನಾಪತ್ತೆ ಆಗಿರುವ ಕುರಿತು ಕತಾರ್‌ ಎನರ್ಜಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಯಾವ ಕಾರಣದಿಂದ ಈ ಸ್ಪೋಟ ಸಂಭವಿಸಿದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ನಾಪತ್ತೆ ಆಗಿರುವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಬರ್ಜಾನ್ ಅನಿಲ ಸ್ಥಾವರವು ಕತಾರ್‌ನ ಇಂಧನ ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ಮಾಡುತ್ತಿತ್ತು. ಸದ್ಯ ಈ ಸ್ಪೋಟ ಕತಾರ್‌ ನಲ್ಲಿ ಆತಂಕವನ್ನು ಹುಟ್ಟು ಹಾಕಿದೆ. ಸದ್ಯ “ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

Also Read : ಕುಟುಂಬ ಕಲಹಕ್ಕೆ 7 ಜೀವ ಬಲಿ! ಅಮೆರಿಕದಲ್ಲಿ ನಡೆಯಿತು ಭೀಕರ ಶೂಟೌಟ್

ಕತಾರ್‌ ಅನಿಲ ಸ್ಥಾವರ ಸ್ಪೋಟದಿಂದ ಜಾಗತಿಕ ಇಂಧನ ಮಾರುಕಟ್ಟೆಗೆ ನಡುಕ ?

ಅಮೇರಿಕಾ -ಇರಾನ್‌ ಯುದ್ದದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಹಡಗುಗಳ ಮೂಲಕ ತೈಲ ಸಾಗಾಣಿಕೆಗೆ ಸಮಸ್ಯೆ ಎದುರಾಗಿತ್ತು. ಇದರ ಬೆನ್ನಲ್ಲೇ ಕತಾರ್‌ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿತ್ತು.

ರಾಜತಾಂತ್ರಿಕ ಪ್ರಯತ್ನಗಳು ಮುಂದುವರೆದಂತೆ ಮತ್ತು ಕಾರ್ಯತಂತ್ರದ ಜಲಮಾರ್ಗದ ಮೇಲಿನ ಒತ್ತಡ ಕಡಿಮೆಯಾದಾಗ ಮತ್ತೆ ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದರು. ಸದ್ಯ ಸ್ಪೋಟದಿಂದ ಯಾವ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

Also Read : ಅಮೆರಿಕದಲ್ಲಿ ಭಾರತೀಯರಿಗೆ ವೀಸಾ ಸಂಕಷ್ಟ: 3 ವರ್ಷ H-1B ಬಂದ್? ಸಂಸತ್ತಿನಲ್ಲಿ ಮಸೂದೆ ಮಂಡನೆ

ಜಗತ್ತಿನ ಪ್ರಮುಖ ನೈಸರ್ಗಿಕ ಅನಿಲ ರಫ್ತುದಾರರು ಕತಾರ್‌ ಇಂಧನ ವಲಯಕ್ಕೆ ಯಾವುದೇ ತೊಂದರೆ ಆಗದಂತೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸದ್ಯ ಪರಿಸ್ಥಿತಿಯ ಕುರಿತು ಕತಾರ್‌ ಎನರ್ಜಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಜಾಗತಿಕ ಇಂಧನ ಪೂರೈಕೆಗೆ ಈ ಘಟನೆ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡುವ ಕುರಿತು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ.

Qatar Massive explosion rocks gas plant 54 injured, 18 missing Kannada News

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories