ಐಆರ್ಸಿಟಿಸಿಯಿಂದ ಪಂಚ ಮಹಾತೀರ್ಥ ಯಾತ್ರೆ ಘೋಷಣೆ – ಕೇವಲ 24 ಸಾವಿರದಲ್ಲಿ 5 ಪ್ರಸಿದ್ಧ ಪುಣ್ಯಕ್ಷೇತ್ರ ದರ್ಶನ
ದೇಶದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರವಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಬೇಕೆಂಬ ಹಂಬಲ ಹೊಂದಿರುವ ಭಕ್ತಾದಿಗಳಿಗಾಗಿ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ ಅತ್ಯಂತ ಕೈಗೆಟುಕುವ ದರದಲ್ಲಿ ವಿಶೇಷ ಆಧ್ಯಾತ್ಮಿಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ.
ದೇಶದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರವಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಬೇಕೆಂಬ ಹಂಬಲ ಹೊಂದಿರುವ ಭಕ್ತಾದಿಗಳಿಗಾಗಿ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ ಅತ್ಯಂತ ಕೈಗೆಟುಕುವ ದರದಲ್ಲಿ ವಿಶೇಷ ಆಧ್ಯಾತ್ಮಿಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ‘ಪಂಚ ಮಹಾತೀರ್ಥ ದರ್ಶನ ಯಾತ್ರೆ’ ಹೆಸರಿನ ಈ ವಿಶೇಷ ಪ್ರವಾಸವು ಬಜೆಟ್ ಮತ್ತು ಸಮಯದ ಕೊರತೆಯಿಂದ ಧಾರ್ಮಿಕ ಪ್ರವಾಸಗಳನ್ನು ಮುಂದೂಡುತ್ತಿದ್ದ ಸಾರ್ವಜನಿಕರಿಗೆ ಉತ್ತಮ ಅವಕಾಶ ಕಲ್ಪಿಸಿದೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಭಾರತ್ ಗೌರವ್ ಟೂರಿಸ್ಟ್ ರೈಲು’ ಮೂಲಕ ಈ ಸುದೀರ್ಘ ಆಧ್ಯಾತ್ಮಿಕ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಸುಮಾರು 13 ರಾತ್ರಿಗಳು ಮತ್ತು 12 ದಿನಗಳ ಕಾಲ ನಡೆಯಲಿರುವ ಈ ಪ್ರವಾಸವು ಪ್ರಸಕ್ತ ವರ್ಷದ ಆಗಸ್ಟ್ 29 ರಂದು ಅಧಿಕೃತವಾಗಿ ಆರಂಭಗೊಂಡು ಸೆಪ್ಟೆಂಬರ್ 10 ರಂದು ಮುಕ್ತಾಯವಾಗಲಿದೆ.
ಈ ಅವಧಿಯಲ್ಲಿ ಯಾತ್ರಾರ್ಥಿಗಳು ಒಡಿಶಾದ ಜಗನ್ನಾಥ ಪುರಿ, ಅಸ್ಸಾಂನ ಶಕ್ತಿಪೀಠ ಕಾಮಾಕ್ಯ ದೇವಸ್ಥಾನ, ಬಿಹಾರದ ಪವಿತ್ರ ಗಯಾ ಮತ್ತು ಬೋಧಗಯಾ ಕ್ಷೇತ್ರಗಳು ಸೇರಿದಂತೆ ಉತ್ತರ ಪ್ರದೇಶದ ಅತ್ಯಂತ ಪುರಾತನ ನಗರಗಳಾದ ಕಾಶಿ ವಿಶ್ವನಾಥ ಕ್ಷೇತ್ರ ಹಾಗೂ ಭವ್ಯ ರಾಮಮಂದಿರವಿರುವ ಅಯೋಧ್ಯೆಯನ್ನು ಕಣ್ಣುಂಬಿಕೊಳ್ಳಬಹುದಾಗಿದೆ.
Also Read: Operation Sindhoor: ಆಪರೇಷನ್ ಸಿಂಧೂರ ವೀರರಿಗೆ ಅಮರ ಗೌರವ; ಯುದ್ಧ ಸ್ಮಾರಕದಲ್ಲಿ ಹೆಸರು ಶಾಶ್ವತ
ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೂರು ವಿಭಿನ್ನ ದರಗಳನ್ನು ನಿಗದಿಪಡಿಸಲಾಗಿದೆ. ಸ್ಲೀಪರ್ ಕ್ಲಾಸ್ನಲ್ಲಿ ಪ್ರಯಾಣಿಸಲು ಬಯಸುವವರಿಗೆ ಪ್ರತಿ ವ್ಯಕ್ತಿಗೆ ₹24,200 ದರ ನಿಗದಿಯಾಗಿದ್ದರೆ, ಥರ್ಡ್ ಎಸಿ ಕ್ಲಾಸ್ಗೆ ₹40,100 ಹಾಗೂ ಸೆಕೆಂಡ್ ಎಸಿ ಸೌಲಭ್ಯಕ್ಕೆ ₹49,500 ವೆಚ್ಚವಾಗಲಿದೆ.
ಇನ್ನು ಈ ಪ್ರವಾಸದ ಪ್ರಮುಖ ವಿಶೇಷತೆಯೆಂದರೆ ಭಕ್ತರು ಪ್ರತ್ಯೇಕವಾಗಿ ಹೋಟೆಲ್ ಅಥವಾ ವಾಹನಗಳನ್ನು ಕಾಯ್ದಿರಿಸುವ ಅಗತ್ಯವಿರುವುದಿಲ್ಲ. ರೈಲು ಟಿಕೆಟ್, ಹೋಟೆಲ್ ಅಥವಾ ಧರ್ಮಶಾಲೆಯಲ್ಲಿ ಉತ್ತಮ ವಸತಿ ವ್ಯವಸ್ಥೆ, ಮೂರು ಹೊತ್ತಿನ ಶುದ್ಧ ಸಸ್ಯಾಹಾರಿ ಊಟ, ಸ್ಥಳೀಯ ತಾಣಗಳ ವೀಕ್ಷಣೆಗಾಗಿ ಬಸ್ ಸೌಲಭ್ಯ ಹಾಗೂ ಸುರಕ್ಷತೆಗಾಗಿ ಪ್ರವಾಸ ವಿಮೆಯನ್ನು ಈ ಪ್ಯಾಕೇಜ್ ಒಳಗೊಂಡಿದೆ.
IRCTC announces Panch Mahatirtha Yatra 5 famous pilgrimage sites to be visited by just 24 thousand people



