ಮಣಿಪಾಲ : ರೋಟರಿ ಕ್ಲಬ್ ಕೋಟ ಬ್ರಿಗೆಡ್‌ಗೆ ಚಾರ್ಟರ್‌ ಹಸ್ತಾಂತರ

ರೋಟರಿ ಜಿಲ್ಲೆ 3182ರ ಗವರ್ನರ್‌ ರೊ. ಪಾಲಾಕ್ಷ ಕೆ ಅವರು ಹೊಸ ಕ್ಲಬ್‌ ರೋಟರಿ ಕೋಟ್‌ ಬ್ರಿಗೆಡ್‌ ಚಾರ್ಟರ್‌ ಅಧ್ಯಕ್ಷರಾದ ರೊ. ಪ್ರಥ್ವಿನ್‌ ಸಿ. ಮೆಂಡನ್‌, ಕಾರ್ಯದರ್ಶಿ ರೊ.ಪ್ರವೀಳಾ ಶಿವರಾಜ್ ಅವರಿಗೆ ಸನದು ಹಸ್ತಾಂತರಿಸಿದ್ದಾರೆ.

ಮಣಿಪಾಲ : ರೋಟರಿ ಜಿಲ್ಲೆ 3182ರ ಅಡಿಯಲ್ಲಿ ಹೊಸ ಕ್ಲಬ್‌ ಆಗಿ ರೂಪುಗೊಂಡಿರುವ ರೋಟರಿ ಕ್ಲಬ್‌ ಕೋಟ ಬ್ರಿಗೆಡ್‌ಗೆ ( Rotary Club Kota brigade)  ಸನದು ಹಸ್ತಾಂತರ ಕಾರ್ಯಕ್ರಮವು ಇಂದು ಮಣಿಪಾಲದ ಮಧುವನ್‌ ಸರಾಯ್‌ನಲ್ಲಿ ನಡೆಯಿತು.

ರೋಟರಿ ಜಿಲ್ಲೆ 3182ರ ಗವರ್ನರ್‌ ರೊ. ಪಾಲಾಕ್ಷ ಕೆ ಅವರು ಹೊಸ ಕ್ಲಬ್‌ ರೋಟರಿ ಕೋಟ್‌ ಬ್ರಿಗೆಡ್‌ ಚಾರ್ಟರ್‌ ಅಧ್ಯಕ್ಷರಾದ ರೊ. ಪ್ರಥ್ವಿನ್‌ ಸಿ. ಮೆಂಡನ್‌, ಕಾರ್ಯದರ್ಶಿ ರೊ.ಪ್ರವೀಳಾ ಶಿವರಾಜ್ ಅವರಿಗೆ ಸನದು ಹಸ್ತಾಂತರಿಸಿದ್ದಾರೆ.

ನ್ಯೂ ಕ್ಲಬ್‌ ಅಡ್ವೈಸರ್‌ ಆಗಿರುವ ರೊ.ಚಂದ್ರಶೇಖರ ಮೆಂಡನ್‌, ನಿಯೋಜಿತ ಅಸಿಸ್ಟೆಂಟ್‌ ಗವರ್ನರ್‌ ರೊ. ಸುಧಾಕರ ಶೆಟ್ಟಿ, ನಿಯೋಜಿತ ಲೆಫ್ಟಿನೆಂಟ್‌ ಗವರ್ನರ್‌ ರೊ. ದಯಾನಂದ ಆಚಾರ್‌, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್‌ ಹಂದಟ್ಟು, ರೋಟರಿ ಕ್ಲಬ್‌ ಕೋಟ ಬ್ರಿಗೆಡ್‌ನ ನಿಯೋಜಿತ ಅಧ್ಯಕ್ಷರಾದ ಪ್ರಕಾಶ್‌ ಪೂಜಾರಿ, ಕಾರ್ಯದರ್ಶಿ ಶಿವರಾಜ್‌, ಮಾಜಿ ಅಧ್ಯಕ್ಷರಾದ ರೊ.ವೆಂಕಟೇಶ್‌ ಆಚಾರ್‌, ಸುರೇಶ್‌ ಆಚಾರ್‌ ಹಾಗೂ ಸದಸ್ಯರಾದ ರಾಘವೇಂದ್ರ ಆಚಾರ್‌, ಅರುಣ್‌ ಗುಂಡ್ಮಿ, ಅಭಿಷೇಕ್‌ ಹಂದಟ್ಟು ಮುಂತಾದವರು ಪಾಲ್ಗೊಂಡಿದ್ದರು.

rotary club kota brigade charter handover manipal

ಸಮಾರಂಭದಲ್ಲಿ ನಿಕಟಪೂರ್ವ ಗವರ್ನರ್‌ ಸಿ.ಎ. ದೇವಾನಂದ್‌, ಚುನಾಯಿತ ಗವರ್ನರ್‌ ಅಲೆನ್‌ ಲೂಹಿಸ್‌, ಪಿಡಿಜಿ ಬಿಎನ್‌ ರಮೇಶ್‌,  ಜಲೇಂದ್ರ, ಫಣಿ ಕುಮಾರ್‌, ಪ್ರದೀಪ್‌,  ಶ್ಯಾಮಸುಂದರ್‌ ನಾಯರಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರೋಟರಿ ಗವರ್ನರ್‌ ರೊ. ಪಾಲಾಕ್ಷ ಕೆ. ಅವರನ್ನು ರೋಟರಿ ಕ್ಲಬ್‌ ಕೋಟ ಬ್ರಿಗೆಡ್‌ ವತಿಯಿಂದ ಅಭಿನಂದಿಸಲಾಯಿತು.

rotary club kota brigade charter handover manipal

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories