ಐಫೋನ್‌ ಪ್ರಿಯರಿಗೆ ಗುಡ್‌ನ್ಯೂಸ್‌ ! ಫ್ಲಿಪ್‌ಕಾರ್ಟ್ ಗೋಟ್‌ ಸೇಲ್‌ನಲ್ಲಿ ಐಫೋನ್‌ 17 ಸರಣಿಯ ಮೇಲೆ ಭಾರಿ ರಿಯಾಯಿತಿ

ಐಫೋನ್ ಖರೀದಿಸಬೇಕೆಂಬ ಕನಸು ಕಾಣುತ್ತಿರುವವರಿಗೆ ಫ್ಲಿಪ್‌ಕಾರ್ಟ್‌ ಗೋಟ್‌ ಸೇಲ್‌ ಸುವರ್ಣಾವಕಾಶವಾಗಿದೆ. ಜುಲೈ 4 ರಿಂದ ಪ್ರಾರಂಭವಾಗುವ ಈ ಸೇಲ್‌ನಲ್ಲಿ ಐಫೋನ್‌ನ ಯಾವ ಫೋನ್‌ಗಳಿಗೆ ಎಷ್ಟು ರಿಯಾಯಿತಿ ಘೋಷಿಸಲಾಗಿದೆ? ಇಲ್ಲಿದೆ ಓದಿ.

ಇ–ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಜುಲೈ 4 ರಿಂದ ತನ್ನ ಗೋಟ್‌ (GOAT) ಸೇಲ್‌ ಪ್ರಾರಂಭವಾಗಲಿದೆ. ಈ ಮಾರಾಟವು ಬಳಕೆದಾರರಿಗೆ ಒಂದಕ್ಕಿಂತ ಒಂದು ದೊಡ್ಡ ರಿಯಾಯಿತಿಗಳನ್ನು ನೀಡಲಿದೆ. ಆದರೆ ಈಗ ಫ್ಲಿಪ್‌ಕಾರ್ಟ್‌ ಈ ಗೋಟ್‌ ಮಾರಾಟಕ್ಕೂ ಮುನ್ನ ಐಫೋನ್‌ಗಳ ಮೇಲೆ ಲಭ್ಯವಿರುವ ಭಾರಿ ಕೊಡುಗೆಗಳನ್ನು ಘೋಷಿಸಿದೆ. ಐಫೋನ್ ಖರೀದಿಸಬೇಕೆಂಬ ಕನಸು ಕಾಣುತ್ತಿರುವವರಿಗೆ ಇದು ಬಂಪರ್‌ ಕೊಡುಗೆಯಾಗಲಿದೆ. ಮೆಮೊರಿ ಚಿಪ್‌ಗಳ ಬೇಡಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಐಫೋನ್‌ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಈ ಮಾರಾಟವು ಐಫೋನ್‌ ಪ್ರಿಯರಿಗೆ ಒಂದು ಉತ್ತಮ ಅವಕಾಶವಾಗಿದೆ.

ಯಾವುದಕ್ಕೆ ಎಷ್ಟು ರಿಯಾಯಿತಿ?

* ಐಫೋನ್‌ 17 ಅನ್ನು 82,900 ರೂ. ಬೆಲೆಗೆ ಆಪಲ್ ಬಿಡುಗಡೆ ಮಾಡಿತ್ತು. ಆದರೆ ಈ ಮಾರಾಟದ ಭಾಗವಾಗಿ ಅದನ್ನು ಕೇವಲ 70,990 ರೂ.ಗೆ ಖರೀದಿಸಬಹುದಾಗಿದೆ. ಅಂದರೆ ಒಟ್ಟು 12,000 ರೂ.ಗಳ ರಿಯಾಯಿತಿ ಸಿಗಲಿದೆ.

* ಐಫೋನ್‌ 17 ಪ್ರೋ ಬೆಲೆ 1,34,900 ರೂ. ಗಳಿಂದ ಪ್ರಾರಂಭವಾಗುತ್ತದೆ. ಆದರೆ ಈ ಸೇಲ್‌ನಲ್ಲಿ 1,12,900 ರೂ. ಗಳಿಗೆ ಲಭ್ಯವಿದೆ. ಈ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ 22,000 ರೂ. ರಿಯಾಯಿತಿಗಳನ್ನು ನೀಡುತ್ತಿದೆ.

* ಈ ಸೇಲ್ ನ ಪ್ರಮುಖ ಆಕರ್ಷಣೆ ಐಫೋನ್ 17 ಪ್ರೊ ಮ್ಯಾಕ್ಸ್. ನೀವು ಇದನ್ನು ರೂ. 1,27,900 ಗೆ ಖರೀದಿಸಬಹುದು. ಅಂದರೆ ಈ ಫೋನ್‌ ಮೇಲೆ 22,000 ರೂ. ರಿಯಾಯಿತಿ ಪಡೆಯಬಹುದು.

* ಈ ಸೇಲ್‌ನಲ್ಲಿ ಐಫೋನ್ 17E ಬೆಲೆ 60,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ ಏರ್ ಬೆಲೆ 95,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ 16 ಬೆಲೆ 59,900 ರೂ.ಗಳಿಂದ ಪ್ರಾರಂಭವಾಗುತ್ತದೆ ಐಫೋನ್ 16 ಪ್ಲಸ್ ಬೆಲೆ 73,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ 16E ಬೆಲೆ 55,900 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಐಫೋನ್ 15 ಬೆಲೆ 49,900 ರೂ.ಗಳಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಇನ್‌ಕಾಗ್ನಿಟೋ ಮೋಡ್ ಯಾವಾಗ ಬಳಸಬೇಕು? ಬಹುತೇಕರಿಗೆ ಗೊತ್ತಿಲ್ಲದ ಉಪಯುಕ್ತ ಮಾಹಿತಿ

ಏನೆಲ್ಲಾ ಕೊಡುಗೆಗಳಿವೆ?

ಫ್ಲಿಪ್‌ಕಾರ್ಟ್‌ನ ಗೋಟ್‌ ಸೇಲ್‌ನಲ್ಲಿ ಐಫೋನ್‌ ಖರೀದಿಗೆ ಹೆಚ್ಚುವರಿಯಾಗಿ, ಬ್ಯಾಂಕ್ ಕೊಡುಗೆಗಳು, ವಿನಿಮಯ ಬೋನಸ್‌ಗಳು ಮತ್ತು ನೋ-ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡಲಾಗಿದೆ. ಈ ಮೂಲಕ ಐಫೋನ್ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಐಸಿಐಸಿಐ ಬ್ಯಾಂಕ್ ಆಫ್ ಬರೋಡಾ ಮತ್ತು ಎಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಇಷ್ಟೇ ಅಲ್ಲದೇ ಹೊಸ ಫಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 3,000 ರೂ. ಮೌಲ್ಯದ ವೆಲ್‌ಕಮ್‌ ವೋಚ‌ರ್ ಸಿಗುತ್ತದೆ. ಪ್ಲಸ್ ಅಥವಾ ಬ್ಲಾಕ್‌ ಬಣ್ಣದ ಸದಸ್ಯರು 24 ಗಂಟೆಗಳ ಮೊದಲು (ಜುಲೈ 3) ಗೋಟ್ ಸೇಲ್‌ಗೆ ಆರಂಭಿಕ ಪ್ರವೇಶವನ್ನು ಪಡೆಯಬಹುದಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories