220 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 4 ವರ್ಷದ ಬಾಲಕ

ಹರಿಯಾಣ : 220 ಅಡಿ ಆಳದ ಕೊಳವೆ ಬಾವಿಗೆ 4 ವರ್ಷದ ಬಾಲಕನೋರ್ವ ಬದ್ದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ನಾಲ್ಕು ವರ್ಷದ ಬಾಲಕನ ರಕ್ಷಣೆಗೆ ಇದೀಗ ಎನ್‌ಡಿಆರ್‌ಎಫ್‌ ( NDRF), ಎಸ್‌ಡಿಆರ್‌ಎಫ್‌ (SDRF) ಜೊತೆಗೆ ಸೇನೆ ಮತ್ತು ಸ್ಥಳೀಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹರಿಯಾಣ : 220 ಅಡಿ ಆಳದ ಕೊಳವೆ ಬಾವಿಗೆ 4 ವರ್ಷದ ಬಾಲಕನೋರ್ವ ಬಿದ್ದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ನಾಲ್ಕು ವರ್ಷದ ಬಾಲಕನ ರಕ್ಷಣೆಗೆ ಇದೀಗ ಎನ್‌ಡಿಆರ್‌ಎಫ್‌ ( NDRF), ಎಸ್‌ಡಿಆರ್‌ಎಫ್‌ (SDRF) ಜೊತೆಗೆ ಸೇನೆ ಮತ್ತು ಸ್ಥಳೀಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹರಿಯಾಣದ ಅಂಬಾಲಾ ಜಿಲ್ಲೆಯ ಧನೌರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿರ್ಭಯ್ ( 4ವರ್ಷ) ಎಂಬ ಬಾಲಕನೇ ಕೊಳವೆ ಬಾವಿಗೆ ಬಿದ್ದವನು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 6.30 ರ ಸುಮಾರಿಗೆ ಬಾಲಕ ತಂದೆಯ ಜೊತೆಗೆ ಹೊಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ನಿರ್ಭಯ್‌ ತನ್ನ ತಂದೆ ಮಂಜಿತ್‌ ಜೊತೆಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜ ಕರ್ನೈಲ್ ಸಿಂಗ್ ಅವರಿಗೆ ಉಪಹಾರವನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆಯಲ್ಲಿ ಕೊಳವೆ ಬಾವಿಯ ಬಳಿಯಲ್ಲಿ ಬಾಲಕ ಆಟವಾಡಲು ಆರಂಭಿಸಿದ್ದಾನೆ. ಕೊಳವೆ ಬಾವಿಗೆ ಮಣ್ಣು ಹಾಕುತ್ತಿದ್ದ ಬಾಲಕ ಸುತ್ತಲಿನ ಮಣ್ಣು ಒದ್ದೆಯಾಗಿದ್ದ ಕಾರಣದಿಂದಾಗಿ ಕಾಲು ಜಾರಿ ಬಿದ್ದು ಕೊಳವೆ ಬಾವಿಯೊಳಗೆ ಬಿದ್ದಿದ್ದಾರೆ.

ಕೂಡಲೇ ನಿರ್ಭಯ್ ತಂದೆ ಮತ್ತು ಅಜ್ಜ ಕೊಳವೆ ಬಾವಿಗೆ ಧಾವಿಸಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರು, ಸ್ಥಳೀಯರು ಸೇರಿಕೊಂಡು ಆತನನ್ನು ರಕ್ಷಿಸಲು ಯತ್ನಿಸಿದರಾದ್ರೂ ಪ್ರಯತ್ನ ಫಲಕಾರಿಯಾಗಲಿಲ್ಲ.

ಘಟನೆಯ ಕುರಿತು ಬೆಳಿಗ್ಗೆ 7.30 ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಜಿಲ್ಲಾಡಳಿತದ ತಂಡಗಳು ವಿಶೇಷ ರಕ್ಷಣಾ ಉಪಕರಣಗಳೊಂದಿಗೆ ಆಗಮಿಸಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಉಪ ಆಯುಕ್ತ ಅಜಯ್ ಸಿಂಗ್ ತೋಮರ್ ಅವರು ಕಾರ್ಯಾಚರಣೆಯ ನೇತೃತ್ವವಹಿಸಿಕೊಂಡಿದ್ದಾರೆ. ಬೋರ್‌ವೆಲ್ ಸುಮಾರು ಒಂಬತ್ತು ಇಂಚು ವ್ಯಾಸವನ್ನು ಹೊಂದಿದ್ದು, ಕಾರ್ಯಾಚರಣೆಯನ್ನು ಹೆಚ್ಚು ಸವಾಲಿನ ಕೆಲಸವಾಗಿದೆ ಎಂದಿದ್ದಾರೆ. ಅಲ್ಲದೇ ಮಗುವನ್ನು ಸುರಕ್ಷಿತವಾಗಿ ಮೇಲ್ಮೈಗೆ ತರಲು ರಕ್ಷಣಾ ಸಿಬ್ಬಂದಿ ಸಮಯವನ್ನು ನೋಡದೇ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಪದೇ ಪದೇ ಕೊಳವೆ ಬಾವಿಗೆ ಮಕ್ಕಳು ಬೀಳುವ ಪ್ರಕರಣಗಳು ಮರುಕಳಿಸುತ್ತಿದ್ದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಸದ್ಯ ಕೊಳವೆ ಬಾವಿಗೆ ಬಿದ್ದಿರುವ ನಿರ್ಭಯ್‌ ಬದುಕಿ ಬರುವಂತೆ ಜನರು ಪ್ರಾರ್ಥಿಸುತ್ತಿದ್ದಾರೆ.

4 year old boy falls into 220-foot borewell in Haryana Rescue Operation Kannada News

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »