“ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಬೇಕಾ? ಇಂದೇ ಈ ಟಿಪ್ ಟ್ರೈ ಮಾಡಿ!”

"ಇವತ್ತು ನಾನು ನಿಮಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ, ನಿಮ್ಮ ಮನೆಯಲ್ಲೇ ಸಿಗುವ ಕೇವಲ ಎರಡೇ ವಸ್ತುಗಳಿಂದ ಮುಖದ ಕಪ್ಪು ಕಲೆಗಳು, ಮೊಡವೆಯ ಕಲೆಗಳು (Acne scars) ಮತ್ತು ಟ್ಯಾನ್ ಅನ್ನು ಹೇಗೆ ಕಂಪ್ಲೀಟ್ ಆಗಿ ಕಮ್ಮಿ ಮಾಡಬಹುದು.

ಮುಖದ ಮೇಲೆ ಒಂದೇ ಒಂದು ಸಣ್ಣ ಕಪ್ಪು ಕಲೆ ಬಂದ್ರೂ ಸಾಕು, ನಮ್ಮ ಇಡೀ ಮೂಡ್ ಆಫ್ ಆಗಿಬಿಡುತ್ತೆ ಅಲ್ವಾ? ಪಾರ್ಟಿ ಇರಲಿ, ಫಂಕ್ಷನ್ ಇರಲಿ, ಮೇಕಪ್ ಮಾಡಿ ಆ ಕಲೆಗಳನ್ನ ಮುಚ್ಚಿ ಮುಚ್ಚಿ ಸಾಕಾಗಿದ್ರೆ… “ಇವತ್ತು ನಾನು ನಿಮಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ, ನಿಮ್ಮ ಮನೆಯಲ್ಲೇ ಸಿಗುವ ಕೇವಲ ಎರಡೇ ವಸ್ತುಗಳಿಂದ ಮುಖದ ಕಪ್ಪು ಕಲೆಗಳು, ಮೊಡವೆಯ ಕಲೆಗಳು (Acne scars) ಮತ್ತು ಟ್ಯಾನ್ ಅನ್ನು ಹೇಗೆ ಕಂಪ್ಲೀಟ್ ಆಗಿ ಕಮ್ಮಿ ಮಾಡಬಹುದು ಅಂತ ಹೇಳ್ತೀನಿ

ಈ ಮ್ಯಾಜಿಕಲ್ ಪ್ಯಾಕ್‌ಗೆ ಬೇಕಾಗಿರೋದು ಎರಡೇ ಸಾಮಗ್ರಿ. ಮೊದಲನೆಯದು **ಹಸಿ ಹಾಲು (Raw Milk)**, ಎರಡನೆಯದು ಜೇನುತುಪ್ಪ (Honey)”. ತುಂಬಾ ಜನ ಅಂದುಕೊಳ್ತಾರೆ, ಇವೆರಡರಿಂದ ಕಲೆ ಹೆಂಗೆ ಕಮ್ಮಿ ಆಗುತ್ತೆ ಅಂತ?ಹಾಲಿನಲ್ಲಿ ನ್ಯಾಚುರಲ್ ಆಗಿ ‘ಲ್ಯಾಕ್ಟಿಕ್ ಆಸಿಡ್’ ಇರುತ್ತೆ. ಇದು ಚರ್ಮದ ಆಳಕ್ಕೆ ಹೋಗಿ ಕಲೆಗಳನ್ನು ಹಗುರವಾಗಿಸುತ್ತೆ (Skin lightening). ಜೊತೆಗೆ ಇದೊಂದು ಅದ್ಭುತವಾದ ನ್ಯಾಚುರಲ್ ಕ್ಲೆನ್ಸರ್. ಜೇನುತುಪ್ಪದಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿರುತ್ತವೆ. ಇದು ಮುಖದಲ್ಲಿ ಮತ್ತೆ ಮೊಡವೆಗಳು ಬರದಂತೆ ತಡೆಯುತ್ತೆ ಮತ್ತು ಚರ್ಮವನ್ನ ಸಾಫ್ಟ್ ಆಗಿ ಇಡುತ್ತೆ.”

“ಇದನ್ನ ರೆಡಿ ಮಾಡೋದು ಹೇಗೆ “

  • ಒಂದು ಕ್ಲೀನ್ ಬೌಲ್ ತಗೊಂಡು, ಅದಕ್ಕೆ ೨ ದೊಡ್ಡ ಚಮಚ ಕಾಯಿಸದ ಹಸಿ ಹಾಲು ಹಾಕಿ. ಹಸಿ ಹಾಲಿನಲ್ಲೇ ಪೋಷಕಾಂಶಗಳು ಜಾಸ್ತಿ ಇರುತ್ತೆ.
  • “ಇದಕ್ಕೆ ಒಂದು ಚಮಚ ಪ್ಯೂರ್ ಜೇನುತುಪ್ಪ ಸೇರಿಸಿ. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸ್ವಲ್ಪ ಲಿಕ್ವಿಡ್ ತರಾನೇ ಇರುತ್ತೆ.”
  • “ಈಗ ನಿಮ್ಮ ಮುಖವನ್ನು ಫೇಸ್ ವಾಶ್‌ನಿಂದ ಕ್ಲೀನ್ ಮಾಡಿಕೊಳ್ಳಿ. ಆಮೇಲೆ ಒಂದು ಕಾಟನ್ ಪ್ಯಾಡ್ ಅಥವಾ ಹತ್ತಿ ತಗೊಂಡು, ಈ ಮಿಶ್ರಣದಲ್ಲಿ ಅದ್ದಿ ನಿಮ್ಮ ಮುಖಕ್ಕೆ ನೀಟಾಗಿ ಅಪ್ಲೈ ಮಾಡಿ. ಕಪ್ಪು ಕಲೆಗಳು ಎಲ್ಲೆಲ್ಲಿ ಜಾಸ್ತಿ ಇದೆಯೋ, ಅಲ್ಲಿ ಸ್ವಲ್ಪ ಹಗುರವಾಗಿ ಮಸಾಜ್ ಮಾಡಿ.”
  • “ಇದನ್ನ ೧೫ ರಿಂದ ೨೦ ನಿಮಿಷ ಹಾಗೇ ಬಿಡಿ. ಅದು ಚೆನ್ನಾಗಿ ಒಣಗಿದ ಮೇಲೆ, ಉಗುರುಬೆಚ್ಚಗಿನ ನೀರು ಅಥವಾ ನಾರ್ಮಲ್ ತಣ್ಣೀರಿನಿಂದ ಮುಖ ತೊಳೆಯಿರಿ.”

“ಇಲ್ಲಿ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು:”

1. ನಿಮಗೇನಾದ್ರೂ ಹಾಲಿನ ಉತ್ಪನ್ನಗಳಿಂದ ಅಲರ್ಜಿ ಇದ್ರೆ ಅಥವಾ ಅತಿ ಹೆಚ್ಚು ಎಣ್ಣೆ ಜಿಡ್ಡಿನ ಚರ್ಮ ಇದ್ರೆ, ಈ ಪ್ಯಾಕ್ ಹಚ್ಚಿದಾಗ ಸಣ್ಣದಾಗಿ ಮೊಡವೆ ಬರಬಹುದು. ಅಂತವರು ಬಳಸಬೇಡಿ.
2. ಮೊದಲ ಬಾರಿ ಬಳಸುವಾಗ ಕಿವಿಯ ಹಿಂಭಾಗ ಅಥವಾ ಕತ್ತಿನ ಹತ್ತಿರ ಸ್ವಲ್ಪ ಹಚ್ಚಿ ನೋಡಿ (Patch test). ಯಾವುದೇ ಉರಿ ಬರದಿದ್ದರೆ ಮಾತ್ರ ಮುಖಕ್ಕೆ ಯೂಸ್ ಮಾಡಿ.
3 ಈ ಪ್ಯಾಕ್ ತೊಳೆದ ತಕ್ಷಣ ಯಾವುದೇ ಕೆಮಿಕಲ್ ಸೋಪ್ ಅಥವಾ ಫೇಸ್ ವಾಶ್ ಹಾಕಬೇಡಿ.

“ಇನ್ನು ನಾನು ಹೇಳಿದ ಬೋನಸ್ ಟಿಪ್ ಏನಪ್ಪಾ ಅಂದ್ರೆ… ಈ ಫೇಸ್ ಪ್ಯಾಕ್ ಅನ್ನು ನೀವು **ರಾತ್ರಿ ಮಲಗುವ ಮುನ್ನ** ಯೂಸ್ ಮಾಡಿದ್ರೆ ಡಬಲ್ ರಿಸಲ್ಟ್ ಸಿಗುತ್ತೆ. ಯಾಕಂದ್ರೆ ರಾತ್ರಿ ಹೊತ್ತು ನಮ್ಮ ಸ್ಕಿನ್ ರಿಪೇರಿ ಮೋಡ್‌ನಲ್ಲಿರುತ್ತೆ. ವಾರದಲ್ಲಿ ೩ ದಿನ ಇದನ್ನ ನಿಯಮಿತವಾಗಿ ಫಾಲೋ ಮಾಡಿ, ಕೇವಲ ಎರಡೇ ವಾರದಲ್ಲಿ ನಿಮ್ಮ ಮುಖದ ಗ್ಲೋ ನೋಡಿ ನಿಮಗೇ ಆಶ್ಚರ್ಯ ಆಗುತ್ತೆ!”

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.