Toxic ‘Tabaahi’ Song: ಯಶ್-ಕಿಯಾರಾ ಅಡ್ವಾಣಿ ಹಾಟ್‌ ಕೆಮಿಸ್ಟ್ರಿಗೆ ಇಂಟರ್‌ನೆಟ್‌ ಶೇಕ್! ರಿಲೀಸ್ ಆಯ್ತು ‘ಟಾಕ್ಸಿಕ್’ ಮೊದಲ ವಿಡಿಯೋ ಸಾಂಗ್!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಾಗೂ ಇಡೀ ಭಾರತೀಯ ಸಿನಿಪ್ರೇಮಿಗಳಿಗೆ ಇಂದು ಅಸಲಿ ಹಬ್ಬ! ‘ದಿ ವೇಟ್ ಈಸ್ ಫೈನಲಿ ಓವರ್!’ ಕಾಯ್ತಾ ಕಾಯ್ತಾ ಕಣ್ಣು ದಣಿದಿದ್ದ ಸಿನಿಕಾಲಿಗರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ' (Tabaahi) ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಾಗೂ ಇಡೀ ಭಾರತೀಯ ಸಿನಿಪ್ರೇಮಿಗಳಿಗೆ ಇಂದು ಅಸಲಿ ಹಬ್ಬ! ‘ದಿ ವೇಟ್ ಈಸ್ ಫೈನಲಿ ಓವರ್!’ ಕಾಯ್ತಾ ಕಾಯ್ತಾ ಕಣ್ಣು ದಣಿದಿದ್ದ ಸಿನಿಕಾಲಿಗರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ, ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ’ (Tabaahi) ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಇದುವರೆಗೆ ಕೇವಲ ಮೂರು ಬಿಡಿಬಿಡಿ ಟೀಸರ್‌ಗಳ ಮೂಲಕ ಚಿತ್ರದ ರಗಡ್ ಲುಕ್ ತೋರಿಸಿದ್ದ ಚಿತ್ರತಂಡ, ಇದೀಗ ಈ ಹಾಡಿನ ಮೂಲಕ ಚಿತ್ರದಲ್ಲಿ ‘ರಾಯ’ನ (ಯಶ್ ಪಾತ್ರ) ಸಖತ್ ರೊಮ್ಯಾಂಟಿಕ್ ಎಪಿಸೋಡ್ ಕೂಡ ಇದೆ ಅನ್ನೋದನ್ನ ರಿವೀಲ್ ಮಾಡಿದೆ. ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ನಡುವಿನ ಕೆಮಿಸ್ಟ್ರಿ ನೋಡಿ ಇಂಟರ್‌ನೆಟ್ ಜಗತ್ತು ದಂಗಾಗಿ ಹೋಗಿದೆ.

‘ತಬಾಹಿ’ ಹಾಡಿನ ಆಡಿಯೋ ರಿಲೀಸ್ ಆದಾಗಲೇ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ಶಾರ್ಟ್ಸ್‌ಗಳ ಮೂಲಕ ಚಾರ್ಟ್‌ಬಸ್ಟರ್ ಲಿಸ್ಟ್ ಸೇರಿಕೊಂಡಿತ್ತು. ಆದರೆ, ಈ ಹಾಡಿನ ಅಸಲಿ ಮಜಾ ಇರೋದೇ ವಿಶ್ಯುಯಲ್ಸ್‌ನಲ್ಲಿ ಅಂತ ಇವತ್ತು ಪ್ರೂವ್ ಆಗಿದೆ. KVN ಪ್ರೊಡಕ್ಷನ್ಸ್ , ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಝೀ ಮ್ಯೂಸಿಕ್ ಕಂಪನಿ ಜತೆಗೂಡಿ ಬಿಡುಗಡೆ ಮಾಡಿರೋ ಈ ವಿಡಿಯೋ ಸಾಂಗ್, ‘ಟಾಕ್ಸಿಕ್’ ಸಿನಿಮಾ ಯಾವ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂಡಿಬಂದಿದೆ ಅನ್ನೋದಕ್ಕೆ ಸಾಕ್ಷಿ ನುಡಿಯುತ್ತಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.