Kannada Today Horoscope : ದಿನ ಭವಿಷ್ಯ 25 ಜುಲೈ 2026: ಆಷಾಡ ಶುಕ್ಲ ಏಕಾದಶಿಯ ದ್ವಾದಶ ರಾಶಿಗಳ ಸಂಪೂರ್ಣ ಫಲ

ಆಷಾಢ ಮಾಸದ ಶುಕ್ಲ ಪಕ್ಷದ ಶುಭದಿನದಂದು ದೇವಶಯನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಕರ್ಕಾಟಕ ರಾಶಿಯಲ್ಲಿ ಹಾಗೂ ಚಂದ್ರ ಏಕಾದಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

Kannada Today Horoscope : ದಿನ ಭವಿಷ್ಯ 25 ಜುಲೈ 2025ರ ಶನಿವಾರದಂದು ಆಷಾಢ ಮಾಸದ ಶುಕ್ಲ ಪಕ್ಷದ ಶುಭದಿನದಂದು ದೇವಶಯನಿ ಏಕಾದಶಿಯನ್ನು ಆಚರಿಸಲಾಗುತ್ತದೆ. ಕರ್ಕಾಟಕ ರಾಶಿಯಲ್ಲಿ ಹಾಗೂ ಚಂದ್ರ ಏಕಾದಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ (Aries)

ನಿಮ್ಮ ಪಾಲಿಗೆ ಇಂದು ಆರ್ಥಿಕವಾಗಿ ಹೆಚ್ಚು ಅನುಕೂಲ ಇರಲಿದೆ. ಹಲವು ಸಮಯಗಳಿಂದ ಬರಬೇಕಿದ್ದ ಹಳೆ ಬಾಕಿ ಕೈ ಸೇರುವ ಸಾಧ್ಯತೆ. ಸಾಲದ ಹೊರೆಯಿಂದ ಬರಲು ಹಲವು ದಾರಿಗಳು ಗೋಚರಿಸಲಿದೆ. ಉದ್ಯಮಿಗಳಿಗೆ ಹೊಸ ಅವಕಾಶ ಸಿಗಲಿದ್ದು, ಲಾಭದ ಪ್ರಮಾಣವೂ ಹೆಚ್ಚಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ವೃತ್ತಿ ಜೀವನದಲ್ಲಿ ಸವಾಲುಗಳು ಬಗೆ ಹರಿಯಲಿದೆ, ನಿಮ್ಮ ಆತ್ಮವಿಶ್ವಾಸ ವೃದ್ದಿಸಲಿದೆ. ಸಣ್ಣ ಪ್ರಯಾಣ ಯಶಸ್ವಿ ಆಗಲಿದ್ದು, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ವೃಷಭ ರಾಶಿ (Taurus)

ಹಣಕಾಸಿನ ಸ್ಥಿತಿ ಚೆನ್ನಾಗಿಯೇ ಇದ್ದರೂ ಕೂಡ ಅನಿರೀಕ್ಷಿತ ಖರ್ಚುಗಳು ಎದುರಾಗಲಿದೆ. ನಿಮ್ಮ ಬಜೆಟ್‌ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಹೊಸ ಮನೆಯ ನಿರ್ಮಾಣ, ಆಸ್ತಿ ಖರೀದಿಗೆ ಸೂಕ್ತವಾಗಿರುವ ದಿನ. ಉದ್ಯೋಗಸ್ಥರಿಗೆ ಉತ್ತಮ ಸಹಕಾರ ದೊರಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಇರಲಿದ್ದು, ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಆಹಾರ ಸೇವನೆಯ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬ ಸದಸ್ಯರ ಜೊತೆಗೆ ಮನಸ್ತಾಪ ಆಗದಂತೆ ತಾಳ್ಮೆಯಿಂದ ವ್ಯವಹರಿಸಿ. ಸಂಜೆಯ ಹೊತ್ತಿಗೆ ಶುಭ ಸುದ್ದಿ ಕೇಳಲಿದ್ದೀರಿ.

ಮಿಥುನ ರಾಶಿ (Gemini)

ಕುಟುಂಬದಲ್ಲಿ ಆಸ್ತಿ ಸಂಬಂಧಿಸಿದ ಗೊಂದಲ ಬಗೆ ಹರಿಯಲಿದೆ. ವ್ಯವಹಾರಿಕವಾಗಿ ಹೂಡಿಕೆಗೆ ಇದು ಸೂಕ್ತ ಸಮಯ. ಉದ್ಯೋಗ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚಿನ ಒಲವು. ವೃತ್ತಿರಂಗದಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿ ಭಾಗವಹಿಸುವಿರಿ. ಸಹೋದರರ ಜೊತೆಗಿನ ಬಾಂಧವ್ಯ ವೃದ್ದಿಯಾಗಲಿದೆ. ಇಡೀ ದಿನ ನೀವು ಉತ್ಸಾಹದಿಂದ ಪಾಲ್ಗೊಳ್ಳುವಿರಿ.

ಕರ್ಕಾಟಕ ರಾಶಿ (Cancer)

ಹೊಸ ಉದ್ಯೋಗದ ಹುಡುಕಾಟದಲ್ಲಿ ಇದ್ದವರಿಗೆ ಆಶಾದಾಯ ವಾತಾವರಣ. ಮನೆ, ಆಸ್ತಿ, ವಾಹನ ಖರೀದಿಯ ಯೋಗವಿದೆ. ಮೇಲಾಧಿಕಾರಿಗಳ ಸಹಕಾರದಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಆರೋಗ್ಯದ ಕಡೆಗೆ ಗಮನ ಹರಿಸಿ, ವ್ಯಾಪಾರಿಗಳಿಗೆ ಸಾಧಾರಣ ಲಾಭ ದೊರೆಯಲಿದೆ. ಕೌಟುಂಬಿಕವಾಗಿಯೂ ಸಂತಸದ ವಾತಾವರಣ. ಸಂಗಾತಿಯಿಂದ ಪ್ರೀತಿ ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಹೊಂದಾಣಿಕೆ ಅತೀ ಅಗತ್ಯ.

ಸಿಂಹ ರಾಶಿ (Leo)

ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠ, ಗೌರವ ಹೆಚ್ಚಲಿದೆ. ಹೂಡಿಕೆಗಳಿಂದ ಹೆಚ್ಚಿ ರಿಟರ್ನ್ಸ್‌ ಸಿಗಲಿದೆ. ಆರ್ಥಿಕ ಸ್ಥಿತಿ ವೃದ್ದಿಸಲಿದೆ. ಉದ್ಯೋಗಿಗಳಿಗೆ ಬಡ್ತಿ, ಹೊಸ ಜವಬ್ದಾರಿಗಳು ನಿಮ್ಮ ಹೆಗಲೇರುವ ಸಾಧ್ಯತೆಯಿದೆ. ವ್ಯಾಪಾರ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಲಾಭ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಿರಿ. ನಿಮ್ಮ ನಾಯಕತ್ವದ ಗುಣಕ್ಕೆ ಸೂಕ್ತ ಜವಾಬ್ದಾರಿ ಸಿಗಲಿದೆ. ಹೊಸ ಅವಕಾಶಗಳಿಂದಾಗಿ ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಕಾಣಲಿದ್ದೀರಿ.

ಕನ್ಯಾ ರಾಶಿ (Virgo)

ನ್ಯಾಯಾಲಯ ವ್ಯಾಜ್ಯಗಳು ಬಗೆ ಹರಿಯಲಿದೆ. ಬುದ್ದಿವಂತಿಕೆಯಿಂದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಶತ್ರುಗಳ ತಂತ್ರವನ್ನು ನೀವು ವಿಫಲಗೊಳಿಸುತ್ತೀರಿ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಿದ್ದರೂ ಕೂಡ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪ್ರೇಮಿಯ ನೆನಪು ಇಡೀ ದಿನ ನಿಮ್ಮನ್ನು ಕಾಡಲಿದೆ, ಪ್ರೇಮಿಯ ಜೊತೆಗೆ ಹೊಂದಾಣಿಕೆ ಸೂಕ್ತ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ. ಆರೋಗ್ಯದ ಸ್ಥಿತಿ ವೃದ್ದಿಸಲಿದ್ದು, ಹಳೆಯ ಕಾಯಿಲೆಗಳು ಶಮನವಾಗಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಲಿದೆ. ಹಣಕಾಸಿನ ವಿಚಾರದಲ್ಲಿ ನೀವಿಂದು ನೆಮ್ಮದಿ ಆಗಿ ಇರಲಿದ್ದೀರಿ.

ತುಲಾ ರಾಶಿ (Libra)

ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುವ ದಿನ. ಹೊಸ ವ್ಯವಹಾರ, ಉದ್ಯಮ ಆರಂಭಿಸುವುದಕ್ಕೆ ಇಂದು ಸೂಕ್ತವಾದ ದಿನ. ಪಾಲುದಾರಿಕೆಯ ವ್ಯವಹಾರ ಮಾಡುವುದರಿಂದಲೂ ಹೆಚ್ಚಿನ ಲಾಭ ಪಡೆಯಬಹುದು. ಕೌಟುಂಬಿಕವಾಗಿ ನೆಮ್ಮದಿ ಇರಲಿದ್ದು, ಆತ್ಮೀಯರ ಜೊತೆಗೆ ಕಾಲ ಕಳೆಯುತ್ತೀರಿ. ಎಂತಹಾ ಸಣ್ಣ ಪುಟ್ಟ ಅಡೆತಡೆಗಳು ಎದುರಾದ್ರೂ ಅವುಗಳನ್ನು ಸಮರ್ಥವಾಗಿ ಮುನ್ನೆಡೆಸುತ್ತೀರಿ. ಮನೋರಂಜನೆಯ ವಿಚಾರದಲ್ಲಿ ನೀವಿಂದು ನೆಮ್ಮದಿ ಆಗಿ ಇರಲಿದ್ದೀರಿ. ಪ್ರೇಮಿಗಳ ಪಾಲಿಗೆ ಇಂದು ಶುಭದಿನ.

ವೃಶ್ಚಿಕ ರಾಶಿ (Scorpio)

ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಸಾಮಾಜಿಕವಾಗಿಯೂ ನಿಮ್ಮ ಗೌರವ ಹೆಚ್ಚಲಿದೆ. ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಪ್ರಯಾಣದ ವಿಚಾರದಲ್ಲಿಯೂ ನಿಮಗೆ ಅನುಕೂಲಕರವಾಗಿರಲಿದೆ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಆರೋಗ್ಯದ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದ್ದು, ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಮನಸ್ಸು ವಾಲಲಿದೆ. ದಿನದ ಅಂತ್ಯಕ್ಕೆ ನೀವು ಶುಭ ಸುದ್ದಿಗಳನ್ನು ಕೇಳಲಿದ್ದೀರಿ.

ಧನಸ್ಸು ರಾಶಿ (Sagittarius)

ದೈವ ಬಲದ ಜೊತೆಗೆ ಅದೃಷ್ಟ ಸದಾ ನಿಮ್ಮ ಜೊತೆಗೆ ಇರಲಿದೆ. ತಂದೆ ಅಥವಾ ಹಿರಿಯರ ಆಸ್ತಿಯ ವಿಚಾರದಲ್ಲಿ ನೀವು ಇಂದು ಶುಭ ಸುದ್ದಿಯನ್ನು ಕೇಳಲಿದ್ದೀರಿ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯನ್ನು ಕಾಣಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಭಾಗ್ಯವಿದೆ. ಹೊಸ ಹುದ್ದೆ, ಜವಾಬ್ದಾರಿಯಿಂದ ಮನಸಿಗೆ ನೆಮ್ಮದಿ ಇರಲಿದೆ. ಆದರೆ ಹಿರಿಯ ಮಾರ್ಗದರ್ಶನದಲ್ಲಿಯೇ ನೀವು ಮುಂದುವರಿಯಿರಿ.

ಮಕರ ರಾಶಿ (Capricorn)

ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ಪರಿಸ್ಥಿತಿ ವೃದ್ದಿಸಲಿದ್ದು, ಆರ್ಥಿಕ ಪರಿಸ್ಥಿತಿಯೂ ಹೆಚ್ಚಲಿದೆ. ಹೊಸ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಇಂದು ಸೂಕ್ತವಾಗಿರುವ ದಿನ. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಅನ್ನು ಹೆಚ್ಚಿಸಿಕೊಳ್ಳಿ. ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರಲಿದೆ. ಆರೋಗ್ಯದ ವಿಚಾರದಲ್ಲಿ ಸುಧಾರಣೆ ಕಾಣಲಿದ್ದು, ನೆಮ್ಮದಿ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳುತ್ತಾ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ಸಾಮಾಜಿಕವಾಗಿ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅನುಕೂಲಕರ.

ಕುಂಭ ರಾಶಿ (Aquarius)

ಹಲವು ಸಮಯಗಳಿಂದಲೂ ಕಾಡುತ್ತಿರುವ ಸಾಲಕ್ಕೆ ಮುಕ್ತಿ ಸಿಗಲಿದೆ. ಉದ್ಯೋಗ ಕ್ಷೇತ್ರ, ಸಾಮಾಜಿಕವಾಗಿಯೂ ಅಧಿಕಾರ ಪ್ರಾಪ್ತಿಯಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಎದುರಾಗಿರುವ ಗೊಂದಲಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸಿ. ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಮಾನಸಿಕವಾಗಿ ನೀವಿಂದು ನೆಮ್ಮದಿ ಆಗಿ ಇರಲಿದ್ದೀರಿ. ವಿರೋಧಿಗಳು ನಿಮ್ಮಿಂದು ಅಂತರ ಕಾಯ್ದುಕೊಳ್ಳಲಿದ್ದಾರೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸಿ.

ಮೀನ ರಾಶಿ (Pisces)

ಹಲವು ಮೂಲಗಳಿಂದ ನಿಮಗೆ ಇಂದು ಆರ್ಥಿಕ ಲಾಭ ಸಿಗಲಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ನೀವು ನಿಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಲಿದ್ದೀರಿ. ಬಂಧುಗಳ ಭೇಟಿಯಿಂದ ನಿಮಗೆ ಸಂತಸ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇರಲಿದ್ದು, ವ್ಯಾಪಾರ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಲಾಭ ದೊರೆಯಲಿದೆ. ದೂರ ಪ್ರಯಾಣವು ಆರ್ಥಿಕವಾಗಿ ನಿಮಗೆ ಹೊಸ ಚೈತನ್ಯವನ್ನು ನೀಡಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರುವುದು ಬಹಳ ಒಳಿತು.

Kannada Today Horoscope July 25 2026

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021