Gardening Tips : ಗಾರ್ಡನಿಂಗ್ʼ ಮಾಡಲು ಇಂಟ್ರೇಸ್ಟ್ ಇದ್ಯಾ ? ಹಾಗಾದ್ರೇ ನಿಮಗಾಗಿ ಇಲ್ಲಿದೆ ಒಂದಿಷ್ಟು ಸಲಹೆಗಳು

ಮನೆ ಮುಂದೆ ಹಸಿರಾಗಿದ್ದರೆ ಮನಸ್ಸಿಗೂ ಒಂದು ರೀತಿ ಹಿತ. ವಾತಾವರಣ ಕೂಡ ತಂಪಾಗಿರುತ್ತದೆ. ಅದಕ್ಕೆ ಮನೆ ಮುಂದೆ ಗಾರ್ಡನ್ ಇದ್ರೆ ಚಂದ. ಆದರೆ ಈ ಗಾರ್ಡನ್ ಮೇಂಟೇನ್ ಮಾಡಲು ಕೆಲ ಟಿಪ್ಸ್ ಗಳನ್ನು ಪಾಲಿಸಿದರೆ ಕೈತೋಟ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ‌

ಗಿಡಗಳಿಗೆ ಗಂಜಲದಿಂದ ಪೋಷಣೆ ಮಾಡಿ. ಕೈತೋಟದಲ್ಲಿ ಉತ್ತಮವಾಗಿ ಗಿಡವನ್ನು ಬೆಳೆಸಿದರೂ ಕೆಲವೊಮ್ಮೆ ಗಿಡಕ್ಕೆ ರೋಗ ಬಂದು ಫಸಲು ಕೊಡದೆ ಹಾಗೆಯೇ ಒಣಗಿ ಹೋಗುತ್ತದೆ. ಅದಕ್ಕಾಗಿ ರಾಸಾಯನಿಕ ಔಷಧಿ ಬಳಸುವ ಬದಲು ಮನೆಯ ಔಷಧವನ್ನು ಬಳಸಿದರೆ ಉತ್ತಮ.

ಇದನ್ನೂ ಓದಿ: ಬಟರ್ ಫ್ರೂಟ್ ನಲ್ಲಿದೆ ದಿವ್ಯ ಔಷಧ ! ಬಟರ್ ಫ್ರೂಟ್ ತಿನ್ನಿರಿ ಆರೋಗ್ಯ ವೃದ್ದಿಸಿಕೊಳ್ಳಿ

ಯಾವುದೇ ಗಿಡಕ್ಕಾದರೂ ರೋಗ ಬಂದರೆ ಮೊದಲಿಗೆ ಅದಕ್ಕೆ ತಿಳಿಯಾದ ಮಜ್ಜಿಗೆಯನ್ನು ಉಪ್ಪು ಮಿಶ್ರಣ ಮಾಡಿಕೊಂಡು ಸಿಂಪಡಿಸಿದರೆ ಉತ್ತಮ. ಹಸುವಿನ ಗಂಜಲ ಮತ್ತು ಬೇವಿನ ಸೊಪ್ಪಿನ ರಸವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಿಡಕ್ಕೆ ಸಿಂಪಡಿಸಿದರೆ ಕ್ರಿಮಿಕೀಟಗಳಿದ್ದರೆ ಸಾಯುತ್ತವೆ.

ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಕುಬ್ಜ…..! ವೀಕೆಂಡ್ ಲಾಕ್ ಡೌನ್ ನಲ್ಲಿ ಉಪ್ಪಿ ಫುಲ್ ಬ್ಯುಸಿ…!!

ಅದರಲ್ಲೂ ಹಸಿರು ಹುಳುಗಳು ಗಿಡದ ಎಲೆಗಳನ್ನೆಲ್ಲಾ ತಿಂದು ಚೆನ್ನಾಗಿ ಬೆಳೆಯಲು ಬಿಡುವುದಿಲ್ಲ. ಇದರಿಂದ ಫಸಲು ಕೂಡ ಕಡಿಮೆಯಾಗುತ್ತದೆ. ಬಾಲ್ಕನಿ ಗಾರ್ಡನ್‌ನಲ್ಲಿ ಕುಂಡಗಳನ್ನು ಹೆಚ್ಚಾಗಿ ಬಳಸುವುದರಿಂದ ನೀವು ಆಯ್ಕೆ ಮಾಡುವ ಗಿಡಗಳು ಕಡಿಮೆ ಆಳದ ಬೇರನ್ನು ಹೊಂದಿರಬೇಕು.

(Is It Intrest To Do Gardeningʼ? So here are some tips for you)

Comments are closed.