ಭರ್ಜರಿ ಎಂಟ್ರಿ ಕೊಟ್ಟ 2026 ಕವಾಸಕಿ Z900: ಸೂಪರ್‌ ಬೈಕ್‌ನ ಬೆಲೆ ಎಷ್ಟು ಗೊತ್ತಾ?

2026 Kawasaki Z900 Bike: ಜಪಾನಿನ ಪ್ರಸಿದ್ಧ ಬೈಕ್‌ ತಯಾರಿಕಾ ಕಂಪನಿ ಕವಾಸಕಿ ತನ್ನ ಮಿಡಲ್‌ವೇಟ್‌ ನೇಕೆಡ್‌ ಬೈಕ್‌ Z900 ನ 2026 ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೈಕ್‌ನ ಕ್ರೇಜ್‌ ಇರವವರಿಗೆ ಈ ಬೈಕ್‌ ಹೊಸ ಅನುಭವ ನೀಡಲಿದೆ. ಭಾರತದಲ್ಲಿ ಇದರ ಎಕ್ಸ್‌ ಶೋ ರೂಂ ಬೆಲೆಯನ್ನು 9.99 ಲಕ್ಷ ರೂ. ನಿಗದಿಪಡಿಸಿದೆ.

2025 ರ ಮಾದರಿ ಬೈಕ್‌ನಲ್ಲಿರುವ ನವೀಕರಣಗಳನ್ನೇ ಇದು ಎರವಲು ಪಡೆದುಕೊಂಡಿದೆ. ಆದರೆ ಕಂಪನಿಯು ಇದರ ಬಣ್ಣಗಳಲ್ಲಿ ಬದಲಾವಣೆ ಮಾಡಿದೆ. ಜೊತೆಗೆ ಗ್ರಾಹಕರಿಗೆ ಕೊಡುಗೆಯಾಗಿ ಆಕರ್ಷಕ ಬೆಲೆಯನ್ನು ನೀಡುತ್ತಿದೆ. ಈ ಬೈಕ್‌ನ ವೈಶಿಷ್ಟ್ಯ ಮತ್ತು ಬೆಲೆಯನ್ನು ತಿಳಿಯೋಣ.

2026 ಕವಾಸಕಿ Z900 ವೈಶಿಷ್ಟ್ಯ

ಕವಾಸಕಿ Z900 2026 ಮಾದರಿ ಬೈಕ್‌ 2025ರ ಎಂಜಿನ್‌ ಅನ್ನೇ ಹೊಂದಿದೆ. 948cc, ಇನ್‌ಲೈನ್‌ –4 ಲಿಕ್ವಿಡ್ ಕೂಲ್ಡ್‌ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆದರೆ ಇದರ ಎಂಜಿನ್‌ ಹಿಂದಿನ ಮಾದರಿಗಿಂತ 1 hp ಶಕ್ತಿ ಮತ್ತು 1.2 Nm ಟಾರ್ಕ್ ಅನ್ನು ಹೆಚ್ಚಿಗೆ ಉತ್ಪಾದಿಸುತ್ತದೆ. ಅಂದರೆ ಇದು 125hp ಪವರ್‌ ಮತ್ತು 98.6Nm ಟಾರ್ಕ್‌ ಉತ್ಪಾದಿಸುತ್ತದೆ. ಇದರ ಎಂಜಿನ್‌ ಅನ್ನು 6 ಸ್ಪೀಡ್‌ ಗೇರ್‌ಬಾಕ್ಸ್‌ಗೆ ಅಳವಡಿಸಲಾಗಿದೆ. ಇನ್ನು ಈ ಬೈಕ್‌ನ ಎಲೆಕ್ಟ್ರಾನಿಕ್‌ ಭಾಗಗಳು ಬದಲಾಗದೇ ಉಳಿದಿವೆ. ಇದರಲ್ಲಿ ಅತ್ಯುತ್ತಮ ಕ್ರೂಸ್‌ ಕಂಟ್ರೋಲ್‌ ಇದ್ದು, ಬೈಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ ಇದರಲ್ಲಿದೆ. ಇದರ ಪವರ್‌ ಮೋಡ್‌ ಮತ್ತು ರೈಡಿಂಗ್‌ ಮೋಡ್‌ಗಳು ಸವಾರರಿಗೆ ಹೆಚ್ಚಿನ ಅನುಕೂಲ ನೀಡಲಿದೆ. ಇದರಲ್ಲಿ ಡ್ಯುಯಲ್‌ ಚಾನಲ್‌ ಎಬಿಎಸ್‌ ಇರುವುದರಿಂದ ಸವಾರರಿಗೆ ಉತ್ತಮ ನಿಯಂತ್ರಣ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಫ್ಯಾಮಿಲಿ ಕಾರ್: ಮಹೀಂದ್ರಾ ಬೊಲೆರೊ ನಿಯೊ ವೈಶಿಷ್ಟ್ಯ ಏನು?

ಯಾವ ಬಣ್ಣಗಳಲ್ಲಿ ಲಭ್ಯ?

2026ರ ಮಾಡೆಲ್‌ನಲ್ಲಿ ಕವಾಸಕಿ Z900 ಅನ್ನು ಎರಡು ಹೊಸ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಐಕಾನಿಕ್ ಕ್ಯಾಂಡಿ ಗ್ರೀನ್: ಇದು 2025 ರ ಮಾದರಿಯಲ್ಲಿ ಲಭ್ಯವಿರಲಿಲ್ಲ. ಆದರೆ ಈ ಬಣ್ಣವು ಅಭಿಮಾನಿಗಳ ಅಪಾರ ನೆಚ್ಚಿನ ಬಣ್ಣವಾಗಿದ್ದರಿಂದ ಈ ಬಣ್ಣವನ್ನು ಮತ್ತೆ ತರಲಾಗಿದೆ.

ಹೊಸ ಕಪ್ಪು ಬಣ್ಣದ ಆಯ್ಕೆ: ಚಿನ್ನದ ಬಣ್ಣದ ಚೌಕಟ್ಟುಗಳಿರುವ ಮತ್ತು ಅದಕ್ಕೆ ಪ್ರೀಮಿಯಂ ಮತ್ತು ಆಕರ್ಷಕ ನೋಟವನ್ನು ನೀಡುವ ಕಪ್ಪು ಬಣ್ಣದ ಬೈಕ್‌ ಅನ್ನು ಆಯ್ದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಇನ್ನಷ್ಟು ಅಗ್ಗವಾದ ಮಾರುತಿ ಆಲ್ಲೊ ಕೆ10: ಹಬ್ಬದ ಸೀಸನ್‌ನ್ನಲ್ಲಿ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!

(2026 Kawasaki Z900 bike launched in India check the price and specifications of the bike)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories