Hyundai Creta : ಹೈಬ್ರಿಡ್ ಎಂಜಿನ್, ಹೊಸ ವಿನ್ಯಾಸದೊಂದಿಗೆ ಹೊಸ ಕ್ರೆಟಾ ಎಂಟ್ರಿ
2027 Hyundai Creta Spy Shots : ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆಯಿರುವ ಎಸ್‌ಯುವಿಗಳಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಒಂದು. ಇದೀಗ ಕ್ರೇಟಾ ತನ್ನ ಮೂರನೇ ತಲೆಮಾರಿನ (3rd Gen) ಮಾದರಿಯೊಂದಿಗೆ ಬಿಡುಗಡೆಗೆ ಸಜ್ಜಾಗಿದೆ.

2027 Hyundai Creta Spy Shots: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆಯಿರುವ ಎಸ್‌ಯುವಿಗಳಲ್ಲಿ ಹ್ಯುಂಡೈ ಕ್ರೆಟಾ (Hyundai Creta) ಒಂದು. ಇದೀಗ ಕ್ರೇಟಾ ತನ್ನ ಮೂರನೇ ತಲೆಮಾರಿನ (3rd Gen) ಮಾದರಿಯೊಂದಿಗೆ ಬಿಡುಗಡೆಗೆ ಸಜ್ಜಾಗಿದೆ. 2027ರಲ್ಲಿ ಹ್ಯುಂಡೈ ಕ್ರೆಟಾದ ಸ್ಪೈ ಶಾಟ್‌ಗಳು (Spy Shots) ವಾಹನ ಪ್ರಿಯರಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಹೊಸ ಕಾರು ವಿನ್ಯಾಸ, ಇಂಜಿನ್‌ನಲ್ಲಿಯೂ ಬದಲಾವಣೆ ಆಗಿರಲಿದೆ.
2027 ಕ್ರೇಟಾ ಹೊಸ ವಿನ್ಯಾಸದಲ್ಲಿ ಏನೆಲ್ಲಾ ಬದಲಾವಣೆ
ಹೊಸ 2027 ಹ್ಯುಂಡೈ ಕ್ರೆಟಾವು ಹೆಚ್ಚು ಬಾಕ್ಸಿ (Boxy) ಮತ್ತು ದಪ್ಪನಾದ ವಿನ್ಯಾಸವನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯ ದುಂಡಗಿನ ಆಕಾರಕ್ಕೆ ಹೋಲಿಸಿದರೆ, ಹೊಸ ಕ್ರೆಟಾ ಹೆಚ್ಚು ನೇರವಾದ (Upright) ಮತ್ತು ಕಠಿಣವಾದ ಎಸ್‌ಯುವಿ ಲುಕ್ ಅನ್ನು ಪಡೆಯಲಿದೆ.
ದೊಡ್ಡ ಗಾತ್ರ: ಹೊಸ ಕ್ರೆಟಾವು K3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಪ್ರಸ್ತುತ 4,330 mm ಉದ್ದವಿರುವ ಕಾರು ಈಗ ಸುಮಾರು 4,400 mm ನಿಂದ 4,500 mm ವರೆಗೆ ಉದ್ದವಾಗುವ ನಿರೀಕ್ಷೆಯಿದೆ. ಇದು ಕಾರಿನ ಒಳಭಾಗದಲ್ಲಿ ಹೆಚ್ಚು ಸ್ಥಳಾವಕಾಶವನ್ನು ನೀಡುತ್ತದೆ.
ಲೈಟಿಂಗ್ ಮತ್ತು ವೀಲ್ಸ್: ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ ಐಯಾನಿಕ್ (Ioniq) ಮಾದರಿಯ ಪಿಕ್ಸೆಲ್ ಎಲ್‌ಇಡಿ ಲೈಟಿಂಗ್, ನವೀಕರಿಸಿದ ಗ್ರಿಲ್ ಮತ್ತು ಬಂಪರ್‌ಗಳನ್ನು ಕಾಣಬಹುದು. ಇದರ ಜೊತೆಗೆ, ದೊಡ್ಡದಾದ 19 ಇಂಚಿನ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದೆ. ಇದು ಕಾರಿನ ಒಟ್ಟಾರೆ ಸ್ಪೋರ್ಟಿ ಹಾಗೂ ಆಕ್ರಮಣಕಾರಿ ಲುಕ್ ಅನ್ನು ಹೆಚ್ಚಿಸಿದೆ.
2027 ಕ್ರೇಟಾ ಅತ್ಯಾಧುನಿಕ ಇಂಟಿರೀಯರ್
ಹೊಸ ಕ್ರೆಟಾದ ಒಳಭಾಗದಲ್ಲಿ ಸಾಕಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಕ್ಯಾಬಿನ್ ಹೆಚ್ಚು ಪ್ರೀಮಿಯಂ ಆಗಿದ್ದು, ಪ್ರಯಾಣಿಕರ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಡಿಸ್‌ಪ್ಲೇ ಮತ್ತು ಡ್ಯಾಶ್‌ಬೋರ್ಡ್: ಹೊಸದಾಗಿ ವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ 12.3 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಅಥವಾ ಹೊಸ ಟ್ರಿನಿಟಿ ಡಿಸ್‌ಪ್ಲೇಯನ್ನು ನೀಡುವ ಸಾಧ್ಯತೆಯಿದೆ.
ಬಾಸ್ ಮೋಡ್ (Boss Mode): ಹಿಂಭಾಗದ ಸವಾರರ ಆರಾಮಕ್ಕಾಗಿ ಎಲೆಕ್ಟ್ರಿಕ್ ಬೂಸ್ಟ್ ಮತ್ತು ಬಾಸ್ ಮೋಡ್ ಸೌಲಭ್ಯವನ್ನು ಸ್ಪೈ ಚಿತ್ರಗಳು ಖಚಿತಪಡಿಸಿವೆ. ಜೊತೆಗೆ ಪ್ರೀಮಿಯಂ ಲೆಥೆರೆಟ್ ಸೀಟ್‌ಗಳನ್ನು ನೀಡಲಾಗಿದೆ.
ಸುರಕ್ಷತೆ: ಹೊಸ ತಲೆಮಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸುಧಾರಿತ ADAS (Advanced Driver Assistance Systems) ತಂತ್ರಜ್ಞಾನ ಮತ್ತು ಹೆಚ್ಚಿನ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
Also Read : ಟಾಟಾ ಪಂಚ್‌ಗೆ ಠಕ್ಕರ್ ಕೊಡಲು ಬರ್ತಿದೆ ಮಾರುತಿಯ ಹೊಸ SUV : ಕಡಿಮೆ ಬಜೆಟ್, ಸಿಕ್ಕಾಪಟ್ಟೆ ಮೈಲೇಜ್..!
2027 ಕ್ರೇಟಾ ಹೈಬ್ರೀಡ್ ಎಂಜಿನ್ ಮತ್ತು ಪವರ್‌ಟ್ರೇನ್
2027ರ ಹ್ಯುಂಡೈ ಕ್ರೆಟಾವು ಪ್ರಸ್ತುತ ಇರುವ ಜನಪ್ರಿಯ ಎಂಜಿನ್ ಆಯ್ಕೆಗಳನ್ನು ಮುಂದುವರಿಸುವ ನಿರೀಕ್ಷೆಯಿದೆ.
- 1.5-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 PS)
- 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (160 PS)
- 1.5-ಲೀಟರ್ ಡೀಸೆಲ್ ಎಂಜಿನ್ (116 PS)
ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್, iVT, 7-ಸ್ಪೀಡ್ DCT ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮುಂದುವರಿಯಲಿವೆ.
ಜೊತೆಗೆ, ಈ ಬಾರಿ ಹ್ಯುಂಡೈ ಸಂಸ್ಥೆಯು ಕ್ರೆಟಾದಲ್ಲಿ ಮೊದಲ ಬಾರಿಗೆ ಸ್ಟ್ರಾಂಗ್ ಹೈಬ್ರಿಡ್ (Strong Hybrid) ಪವರ್‌ಟ್ರೇನ್ ಅನ್ನು ಪರಿಚಯಿಸುವ ಸಾಧ್ಯತೆ ದಟ್ಟವಾಗಿದೆ. ಇದು ಉತ್ತಮ ಮೈಲೇಜ್ ಹಾಗೂ ಪರಿಸರ ಸ್ನೇಹಿ ಚಾಲನೆಗೆ ನೆರವಾಗಲಿದೆ.
Also Read : ಇವಿ ಪ್ರಿಯರಿಗಾಗಿ ಸ್ಮಾರ್ಟ್ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾದ ಒಬೆನ್ ರೋರ್ ಇವೋ ಇಲೆಕ್ಟ್ರಿಕ್ ಬೈಕ್
2027 ಕ್ರೇಟಾ ಬಿಡುಗಡೆ ಯಾವಾಗ ಗೊತ್ತಾ ?
ಹೊಸ 3ನೇ ತಲೆಮಾರಿನ ಹ್ಯುಂಡೈ ಕ್ರೆಟಾ 2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಗ್ಗೆಯಿಡುವ ನಿರೀಕ್ಷೆಯಿದೆ. ಈ ಕಾರು ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
2027 Hyundai creta spy shots hybrid




