Yamaha FZS : ಯಮಹಾ ಎಫ್‌ಝಡ್ ಪ್ರಿಯರೇ, ನೀವು ಓದಲೇಬೇಕಾದ ಸುದ್ದಿಯಿದು !

ಯಮಹಾ ಮೋಟಾರ್ ಇಂಡಿಯಾ ಬಿಡುಗಡೆಗೊಳಿಸಿರುವ ಎಫ್‌ಝಡ್ ಎಸ್‌ಎಫ್‌ಐಡಿಎಲ್‌ಎಕ್ಸ್(FZS-Fi Dlx) ಮಾರುಕಟ್ಟೆಯಲ್ಲಿ ಸಖತ್ ಸುದ್ದಿಮಾಡುತ್ತಿದೆ. 2022 ರ ಎಫ್‌ಝಡ್‌ಎಸ್‌ಎಫ್‌ಐ (Yamaha FZS-Fi Dlx) ಬೆಲೆ ₹115,900 ಆಗಿದ್ದರೆ, ಹೊಸ ಮಾದರಿಯ ಎಕ್ಸ್ ಶೋ ರೂಂ ಬೈಕ್ ಬೆಲೆ ₹1,18,900 ಆಗಿದೆ. ಯಮಹಾ ಭಾರತದಲ್ಲಿ ಯಮಹಾ FZS 25 ನ ಹೊಸ ಬಣ್ಣ ರೂಪಾಂತರಗಳನ್ನು ಪರಿಚಯಿಸಿದೆ. ಯಮಹಾ FZS25 ನ 2022 ಆವೃತ್ತಿಯನ್ನು ಪ್ರಾರಂಭಿಸಲು ಗ್ರಾಹಕ ನಿರೀಕ್ಷೆಯನ್ನು ಸಹ ಇದು ಮೀರಿಸುವಂತಿದೆ. ಪರಿಚಯಿಸಲಾದ ಹೊಸ ಬಣ್ಣಗಳೆಂದರೆ ಮ್ಯಾಟ್ ಕಾಪರ್ ಮತ್ತು ಮ್ಯಾಟ್ ಬ್ಲ್ಯಾಕ್.

ಎರಡೂ ಹೊಸ ಯಮಹಾ ಮಾದರಿಗಳು ಕಂಪನಿಯ ಬ್ಲೂಟೂತ್ ಕನೆಕ್ಟ್-ಎಕ್ಸ್ ಅಪ್ಲಿಕೇಶನ್‌ನೊಂದಿಗೆ ಕನೆಕ್ಟ್ ಮಾಡಲ್ಪಟ್ಟಿವೆ. ಎಸ್‌ಎಫ್‌ಐಡಿಎಲ್‌ಎಕ್ಸ್‌ ವೆರೈಟಿಗಳಲ್ಲಿ ಎಲ್ ಇ ಡಿ ಫ್ಲಾಷರ್‌ಗಳನ್ನು ಸೇರಿಸುವುದರೊಂದಿಗೆ ಎಲ್ ಈ ಡಿ ಟೈಲ್ ಲೈಟ್‌ಗಳನ್ನು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಎರಡನೆಯದು ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಡೀಪ್ ರೆಡ್ ಮತ್ತು ಸಾಲಿಡ್ ಗ್ರೇ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಬಣ್ಣದ ಮಿಶ್ರಲೋಹದ ಚಕ್ರಗಳು ಮತ್ತು ಡ್ಯುಯಲ್ ಟೋನ್ ಬಣ್ಣಗಳೊಂದಿಗೆ ಎರಡು ಹಂತದ ಸಿಂಗಲ್ ಸೀಟ್ ಅನ್ನು ಸಹ ಹೊಂದಿದೆ.

ಹೊಸ ಶ್ರೇಣಿಯನ್ನು ಅದರ ‘ದಿ ಕಾಲ್ ಆಫ್ ದಿ ಬ್ಲೂ’ ಅಡಿಯಲ್ಲಿ ಪರಿಚಯಿಸಲಾಗಿದೆ ಎಂದು ಕಂಪನಿ ಹೇಳುತ್ತದೆ. ಹೊಸ ಮಾಡೆಲ್ ಅನ್ನು ರಿಫ್ರೆಶ್ ಮಾಡಿದ ಸ್ಟೈಲಿಂಗ್ ಮತ್ತು ವೈಶಿಷ್ಟ್ಯಗಳೊಂದಿಗೆ ಲಾಂಚ್ ಮಾಡಲಾಗಿದೆ. ಹೊಸ ಮಾದರಿ ಶ್ರೇಣಿಯು ಜನವರಿ ಎರಡನೇ ವಾರದಿಂದ ಎಲ್ಲಾ ಅಧಿಕೃತ ಯಮಹಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಾಗಲಿದೆ.

“ದಿ ಕಾಲ್ ಆಫ್ ದಿ ಬ್ಲೂ ವೆರೈಟಿಗಳಲ್ಲಿ , ನಾವು ನಮ್ಮ ಗ್ರಾಹಕರನ್ನು ತಲುಪುವುದನ್ನು ಮುಂದುವರಿಸುತ್ತೇವೆ ಮತ್ತು ಅವರ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳನ್ನು ಪೂರೈಸಲು ನಮ್ಮ ಉತ್ಪನ್ನ ಶ್ರೇಣಿಯನ್ನು ನವೀಕರಿಸುತ್ತೇವೆ. ಅಂತಹ ಒಂದು ಅಪ್‌ಗ್ರೇಡ್ ನಮ್ಮ ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿದ ಎಫ್ ಝಡ್ ಎಸ್ ಎಫ್ ಎಲ್ ಡಿ ಎಲ್ ಎಕ್ಸ್ ಮಾದರಿಯ ಬಿಡುಗಡೆಯಾಗಿದೆ. ಈ ರೂಪಾಂತರದ ಲಾಂಚ್ ಎಫ್ ಝಡ್ ಮಾದರಿ ಶ್ರೇಣಿಯ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸುತ್ತದೆ. “ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಐಶಿನ್ ಚಿಹಾನ ಮಾಹಿತಿ ನೀಡಿದ್ದಾರೆ.ಎಫ್ ಝಡ್ 150 ಸಿಸಿ ಶ್ರೇಣಿಯ 3 ನೇ ಪೀಳಿಗೆಯು ಭಾರತೀಯ ಯುವಕರಿಗೆ ಸ್ಟೈಲ್ ಮತ್ತು ವರ್ಕಿಂಗ್ ಪರಿಪೂರ್ಣ ಸಂಯೋಜನೆಯಾಗಿದೆ ಎಂದು ಸಾಬೀತುಪಡಿಸುವ ಮೂಲಕ ಭಾರಿ ಯಶಸ್ಸನ್ನು ಕಂಡಿದೆ.

ಇದನ್ನೂ ಓದಿ: Bajaj Pulsar Price Hike: ಬಜಾಜ್ ಪಲ್ಸರ್ ಬೆಲೆ ಹೆಚ್ಚಳ; ಪರಿಷ್ಕೃತ ಬೆಲೆ ಕಾಸಿಗೆ ತಕ್ಕ ಕಜ್ಜಾಯವೇ?

(Yamaha FZS-Fi Dlx Yamaha introduces two colour variants of Yamaha FZS 25 in India Check price and availability)

Comments are closed.