BMW X3 SUV: 65 ಲಕ್ಷದ BMW ಕಾರು 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗ ಪಡೆಯುತ್ತದೆ! ಭಾರತದ ಮಾರುಕಟ್ಟೆಗೆ ಬಿಡುಗಡೆ

ಅತ್ಯಂತ ಜನಪ್ರಿಯ ಕಾರು ಕಂಪನಿ BMW ಭಾರತದಲ್ಲಿ ಹೊಸ X3 ಡೀಸೆಲ್ ಕಾರುಗಳನ್ನು ಬಿಡುಗಡೆ ಮಾಡಿದೆ. ಐಷಾರಾಮಿ ಆವೃತ್ತಿಯ ಕಾರು ಇದಾಗಿದ್ದು ಹೊಸ BMW X3 xDrive20d ಅನ್ನು ಸ್ಥಳೀಯವಾಗಿ BMW ಕಂಪನಿಯ ಚೆನ್ನೈ ಘಟಕದಲ್ಲಿ ಈ ಕಾರುಗಳನ್ನು (BMW X3 SUV) ಉತ್ಪಾದಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಎರಡು ಪೆಟ್ರೋಲ್ ರೂಪಾಂತರಗಳ ಜೊತೆಗೆ ಇಂದಿನಿಂದ ಡೀಲರ್‌ಶಿಪ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಈ ಕಾರು ಎರಡು ಲೀಟರ್‌ಗಳ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 190 hp ಮತ್ತು 1,750 – 2,500 rpm ನಲ್ಲಿ 400 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 7.9 ಸೆಕೆಂಡ್‌ಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಪಡೆಯುತ್ತದೆ ಮತ್ತು 213 ಕಿಮೀ ವೇಗವನ್ನು ಹೊಂದಿದೆ.

ಹೊಸ BMW X3 ಮಿನರಲ್ ವೈಟ್, ಫೈಟೋನಿಕ್ ಬ್ಲೂ, ಬ್ರೂಕ್ಲಿನ್ ಗ್ರೇ, ಸೋಫಿಸ್ಟೊ ಗ್ರೇ, ಬ್ಲ್ಯಾಕ್ ಸಫೈರ್ ಮತ್ತು ಕಾರ್ಬನ್ ಬ್ಲಾಕ್ ಸೇರಿದಂತೆ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. BMW ಸರ್ವಿಸ್ ಇನ್ಕ್ಲೂಸಿವ್ ಮತ್ತು BMW ಸರ್ವಿಸ್ ಇನ್ಕ್ಲೂಸಿವ್ ಪ್ಲಸ್ BMW X3 ಜೊತೆಗೆ ಲಭ್ಯವಿದೆ. ಈ ಸೇವಾ ಪ್ಯಾಕೇಜ್‌ಗಳು 3 ವರ್ಷಗಳು/40,000 ಕಿಮೀಗಳಿಂದ 10 ವರ್ಷಗಳು/2,00,000 ಕಿಮೀಗಳವರೆಗಿನ ಯೋಜನೆಗಳ ಆಯ್ಕೆಯೊಂದಿಗೆ ಷರತ್ತು ಆಧಾರಿತ ಸೇವೆ (CBS) ಮತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಳ್ಳುತ್ತವೆ. ಪ್ರತಿ ಕಿಮೀಗೆ ರೂ 1.53 ರ ಆಕರ್ಷಕ ಬೆಲೆಯಲ್ಲಿ ಪ್ರಾರಂಭವಾಗುತ್ತವೆ. BMW X3 ಐಚ್ಛಿಕ BMW ರಿಪೇರಿ ಸೌಲಭ್ಯವೂ ಸಹ ದೊರೆಯಲಿದೆ. ಇದು ಸ್ಟ್ಯಾಂಡರ್ಡ್ ಎರಡು-ವರ್ಷದ ವಾರಂಟಿ ಅವಧಿ ಮುಗಿದ ನಂತರ ಮೂರನೇ ವರ್ಷದ ಕಾರ್ಯಾಚರಣೆಯಿಂದ ಗರಿಷ್ಠ ಆರನೇ ವರ್ಷಕ್ಕೆ ವಾರಂಟಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಒಟ್ಟಾರೆಯಾಗಿ, ಈ ಪ್ಯಾಕೇಜುಗಳು ಸಂಪೂರ್ಣ ಮನಸ್ಸಿನ ಶಾಂತಿ ಮತ್ತು ಅನಿಯಮಿತ ಚಾಲನಾ ಆನಂದವನ್ನು ಆನಂದಿಸಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದು ಕಂಪನಿಯು ಭರವಸೆ ನೀಡಿದೆ.

ಇದನ್ನೂ ಓದಿ: Chhatrapati Shivaji Jayanti 2022: ಛತ್ರಪತಿ ಶಿವಾಜಿ 392ನೆ ಜಯಂತಿ; ದೇಶದ ಧೀರ ಅರಸನ ಕುರಿತು ನೀವು ತಿಳಿಯಲೇಬೇಕಾದ ಮಾಹಿತಿ

(BMW X3 diesel SUV launched in India at Rs 65 50 lakh)

Comments are closed.