ಭಾರತದ ರಸ್ತೆಯಲ್ಲಿ ಧೂಳೆಬ್ಬಿಸಲು ಹೊಸ ಮಾಡೆಲ್‌ನೊಂದಿಗೆ ಮತ್ತೆ ಬಂದ ರೆನಾಲ್ಟ್ ಡಸ್ಟರ್
Renault Duster 2026: ರೆನಾಲ್ಟ್ ಕಂಪನಿಯ ಮಧ್ಯಮ ಗಾತ್ರದ ಎಸ್‌ಯುವಿ ಡಸ್ಟರ್ ಕಾರು 2022ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿತ್ತು. ಆದರೆ ಅದರ ಬೇಡಿಕೆ ಹೆಚ್ಚಿದ್ದರಿಂದ ಕಂಪನಿ ಇದೀಗ ಮತ್ತೊಮ್ಮೆ ಹೊಸದಾಗಿ ಬಿಡುಗಡೆ ಮಾಡಿದೆ.
ಇದರಿಂದ ಹೊಸದಾಗಿ ಬಿಡುಗಡೆ ಮಾಡಿರುವ ರೆನಾಲ್ಟ್ ಡಸ್ಟರ್ 2026 ಮಾಡೆಲ್ ಈ ಕಾರು ಮತ್ತೊಮ್ಮೆ ಭಾರತದ ರಸ್ತೆಗಳಲ್ಲಿ ಓಡಾಡಲಿದೆ ಎಂಬುದನ್ನು ಗುರುತಿಸಬಹುದಾಗಿದೆ.
ಈ ಹೊಸ ಮಾಡಲ್‌ನ ಕಾರನ್ನು ರೆನಾಲ್ಟ್ ನ್ಯೂ ಮಾಡ್ಯುಲರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಿದೆ. ಈ ಕಾರು ಭಾರತದ ರಸ್ತೆಗೆ ಶೇಕಡಾ 90 ರಷ್ಟು ನಿರ್ದಿಷ್ಟವಾಗಿ ಹೊಂದಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಕಂಪನಿಯು ಈ ಕಾರಿನ ಬಾಳಿಕೆ, ಚಾಲನಾ ಸೌಲಭ್ಯಗಳನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ ಬಿಡುಗಡೆ ಮಾಡಿದೆ. ಇದರ ವೈಶಿಷ್ಟ್ಯಗಳೇನು ಎಂದು ತಿಳಿಯೋಣ.
ಪ್ರೀ ಬುಕಿಂಗ್ ಮತ್ತು ಬೆಲೆ
ಹೊಸದಾಗಿ ಬಿಡುಗಡೆಯಾಗಿರುವ ರೆನಾಲ್ಟ್ ಡಸ್ಟರ್ 2026 ಮಾಡೆಲ್ ಕಾರಿನ ಪ್ರೀ ಬುಕಿಂಗ್ ಪ್ರಾರಂಭವಾಗಿದೆ. 21,000 ರೂ. ಟೋಕನ್ ಮೊತ್ತದಿಂದ ಪ್ರೀ ಬುಕಿಂಗ್ ಮಾಡಬಹುದಾಗಿದೆ.
ಡಸ್ಟರ್‌ನ ಬೆಲೆಯನ್ನು ಇನ್ನೂ ಘೋಷಿಸಿಲ್ಲವಾದರೂ ಮಾರ್ಚ್ 2026ರಲ್ಲಿ ಬಹಿರಂಗ ಪಡಿಸುವುದಾಗಿ ರೆನಾಲ್ಟ್ ಹೇಳಿಕೊಂಡಿದೆ. ಭಾರತದಲ್ಲಿ ರೆನಾಲ್ಟ್ ಡಸ್ಟರ್‌ನ ಬೆಲೆ ಸುಮಾರು 9.50 ಲಕ್ಷದಿಂದ (ಎಕ್ಸ್ ಶೋ ರೂಂ ಬೆಲೆ) ಪ್ರಾರಂಭವಾಗಿ 20 ಲಕ್ಷ ರೂ.ಗಳವರೆಗೆ ನಿರೀಕ್ಷಿಸಲಾಗಿದೆ.
ರೆನಾಲ್ಟ್ ಡಸ್ಟರ್ 2026 ವೈಶಿಷ್ಟ್ಯ
ಹೊಸದಾಗಿ ಬಿಡುಗಡೆಯಾಗಿರುವ ಡಸ್ಟರ್ 2026 ಮಾಡೆಲ್ ಕಾರು 212 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವುದರಿಂದ ಮಧ್ಯಮ ಗಾತ್ರದ ಎಸ್‌ಯುವಿಗಳಲ್ಲಿ ಉತ್ತಮ ಆಯ್ಕೆ ಎನ್ನಬಹುದು. ಇದರಲ್ಲಿ ಮೆನಿ ಪವರ್ ಟ್ರೇನ್ ಆಯ್ಕೆ ನೀಡಲಾಗಿದೆ.
ಟರ್ಬೊ TCe 160 ರೂಪಾಂತರವು 163PS ಮತ್ತು 280Nm ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು ವೆಟ್ ಕ್ಲಚ್ ಮತ್ತು ಇ-ಶಿಫ್ಟರ್ ಅನ್ನು ಒಳಗೊಂಡಿರುವ ಆರು-ವೇಗದ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಪ್ರಸರಣದೊಂದಿಗೆ ಜೋಡಿಸಲಾಗಿದೆ.
ಸ್ಟ್ರಾಂಗ್ ಹೈಬ್ರಿಡ್ ಇ-ಟೆಕ್ 160 ಆವೃತ್ತಿಯಲ್ಲಿ 1.8-ಲೀಟರ್ GDI ಮೀಸಲಾದ ಹೈಬ್ರಿಡ್ ಎಂಜಿನ್ ಅನ್ನು ಎಂಟು-ವೇಗದ DHT ಮತ್ತು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ನೀಡಲಾಗಿದೆ. ಇದು 1.4kWh ಬ್ಯಾಟರಿಯನ್ನು ಬೆಂಬಲಿಸುತ್ತದೆ. ಇದರಿಂದ ಈ ಕಾರು ನಗರ ಪ್ರದೇಶಗಳಿಗೆ 80% ಸೂಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: ಟೊಯೊಟಾದ ಪ್ರಪ್ರಥಮ ಇವಿ ಕಾರ್: ಅರ್ಬನ್ ಕ್ರೂಸರ್ ಇವಿ ಇಂದು ಭಾರತದಲ್ಲಿ ಅನಾವರಣ
ಇನ್ನು ಈ ಕಾರು ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ ಕಾರಿನ ಹೆಸರನ್ನು ದೊಡ್ಡದಾಗಿ ಪ್ರದರ್ಶಿಸಲಾಗಿದೆ. ಒಳಭಾಗದಲ್ಲಿ ಪನೋರಮಿಕ್ ಸನ್‌ರೂಫ್, ಸ್ವಯಂ ಚಾಲಿತ ಸೀಟುಗಳು, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಸ್ಕ್ರೀನ್ ಹೊಂದಿದೆ.
ಸುರಕ್ಷತೆ ಮತ್ತು ತಂತ್ರಜ್ಞಾನದಲ್ಲಿ ಇದು ವೆಲ್-2 ADAS, 360-ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ವಿದ್ಯುತ್ ಚಾಲಿತ ಟೈಲ್‌ಗೇಟ್ ಸೇರಿವೆ. ಇದರ ಬೂಟ್ ಸಾಮರ್ಥ್ಯವು 700 ಲೀಟರ್ ಹೊಂದಿರುವುದರಿಂದ ದೊಡ್ಡ ಜಾಗ ಕಾಣಬಹುದಾಗಿದೆ.



