ಮಧ್ಯಮ ಗಾತ್ರದ SUV ಗಳಿಗೆ ಪೈಪೋಟಿ ಕೊಡಲು ಮತ್ತೆ ಬಂದ ರೆನಾಲ್ಟ್‌ ಡಸ್ಟರ್‌ 2026

Renault Duster 2026: ಹೊಸದಾಗಿ ಬಿಡಗಡೆಯಾದ ರೆನಾಲ್ಟ್‌ ಡಸ್ಟರ್‌ ಕೇವಲ ತನ್ನ ಹಳೆ ಬ್ರಾಂಡ್‌ನೊಂದಿಗಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿಲ್ಲ. ಇದು ಹೊಸ ತಂತ್ರಜ್ಞಾನ, ವೈಶಿಷ್ಟ್ಯ ಮುಂತಾದ ಬದಲಾವಣೆಗಳೊಂದಿಗೆ ಮಿಡ್‌ ಎಸ್‌ಯುವಿ ಗಳ ನಡುವೆ ಸ್ಪರ್ಧೆಗೂ ಇಳಿದಿದೆ.

Renault Duster 2026: ರೆನಾಲ್ಟ್‌ ಡಸ್ಟರ್‌ ಇಂದು ಭಾರತದ ಮಾರುಕಟ್ಟೆಗೆ ಹೊಸ ಬದಲಾವಣೆಗಳೊಂದಿಗೆ ಪಾದಾರ್ಪಣೆ ಮಾಡಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗಕ್ಕೆ ಇದು ಸೇರ್ಪಡೆಯಾಗುವ ಮೂಲಕ ಕ್ರೆಟಾ, ಸೆಲ್ಟೋಸ್ ಮತ್ತು ವಿಕ್ಟೋರಿಯಾಸ್‌ ನಂತರ ಕಾರುಗಳೊಂದಿಗೆ ಸ್ಪರ್ಧೆಗೆ ಸಜ್ಜಾಗಿದೆ. ಕಂಪನಿಯು ತನ್ನ ಎದುರಾಳಿಗಳಿಗಿಂತ ಮುಂದೆ ಇರುವ ಸುಲವಾಗಿ ಇದರ ಆರಂಭಿಕ ಬೆಲೆಯನ್ನು 10.49 ಲಕ್ಷ ರೂ. (ಎಕ್ಸ್ ಶೋ ರೂಂ ಬೆಲೆ) ಇರಿಸಿದೆ. ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಿರುವ ಡಸ್ಟರ್‌ ಮೊದಲಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಹಾಗೂ ಸ್ಮಾರ್ಟ್‌ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಹಾಗಾದರೆ ಹೊಸ ಡಸ್ಟರ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಎಂದು ನೋಡೋಣ.

ರೆನಾಲ್ಟ್‌ ಡಸ್ಟರ್‌ 2026 ವೈಶಿಷ್ಟ್ಯ

ಕಂಪನಿಯು ರೆನಾಲ್ಟ್‌ ಡಸ್ಟರ್ ಅನ್ನು ಮೂರು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಇದರ ಅತ್ಯಂತ ಪ್ರೀಮಿಯಂ ಮಾದರಿಯು 1.8-ಲೀಟರ್ ನಾಲ್ಕು ಸಿಲಿಂಡರ್ ಡೈರೆಕ್ಟ್-ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಸಂಯೋಜಿಸಿ E-TECH ಹೈಬ್ರಿಡ್ ವ್ಯವಸ್ಥೆಯನ್ನು ರೂಪಿಸುತ್ತದೆ. ಇನ್ನು ಇದರ ಎರಡನೆಯ ಇಂಜಿನ್‌ ಆಯ್ಕೆಯೆಂದರೆ 6-ಸ್ಪೀಡ್ ಮ್ಯಾನುವಲ್ ಅಥವಾ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನ ಆಗಿದೆ. ಮೂಲ ಮಾದರಿಯು 1.0-ಲೀಟರ್ ಮೂರು-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಮಾತ್ರ ಜೋಡಿಸಲಾಗಿದೆ.

ಇದನ್ನೂ ಓದಿ: ಭಾರತದ ಅತ್ಯಂತ ಅಗ್ಗದ 7 ಸೀಟರ್ ಕಾರ್‌ ಇದು; ನಿಸ್ಸಾನ್ ಗ್ರಾವೈಟ್ ದರ ಎಷ್ಟು ಗೊತ್ತಾ?

ಇನ್ನು ಕಾರಿನ ಒಳಗೆ ಹೆಚ್ಚು ಪ್ರೀಮಿಯಂ ಸ್ವರ್ಷ ನೀಡಲಾಗಿದೆ. ಗೂಗಲ್‌ನ ಓಪನ್‌ಆರ್‌ ಲಿಂಗ್‌ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಹೊಂದಿದ್ದು ಚಾಲಕರಿಗೆ ಉತ್ತಮ ಮಾರ್ಗದರ್ಶನ ನೀಡಲಿದೆ. ಪನೋರಮಿಕ್‌ ಸನ್‌ರೂಫ್, ಎಸಿ ಇರುವ ಮುಂಭಾಗದ ಸೀಟುಗಳು, ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯ ಇರುವುದರಿಂದ ಈ ಕಾರು ಹೆಚ್ಚು ವಿಶೇಷವೆನಿಸುತ್ತದೆ. 360-ಡಿಗ್ರಿ ಕ್ಯಾಮೆರಾ ಮತ್ತು 17 ADAS ವೈಶಿಷ್ಟ್ಯಗಳು ಸುರಕ್ಷಿತ ಚಾಲನೆಗೆ ಸಾಕ್ಷಿಯಾಗಬಲ್ಲದು.

 

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories