ನಾಳೆ ಬಿಡುಗಡೆಯಾಗಲಿರುವ ರಾಯಲ್ ಎನ್ಫೀಲ್ಡ್ ಗೆರಿಲ್ಲಾ 450 ಹೊಸ ಆವೃತ್ತಿ: ಟೀಸರ್ ನೋಡಿ ಫಿದಾ ಆದ ಬೈಕ್ ಪ್ರಿಯರು..!
Royal Enfield Guerrilla 450: ಕಂಪನಿಯು 450 ಸಿಸಿ ಬೈಕ್ ನ ನವೀಕರಿಸಿದ ಆವೃತ್ತಿಯನ್ನು ಟೀಸ್ ಮಾಡುವ ಮೂಲಕ ಇದರ ಬಗ್ಗೆ ಕುತೂಹಲ ಹುಟ್ಟು ಹಾಕಿದೆ
Royal Enfield Guerrilla 450: ರಾಯಲ್ ಎನ್ಫೀಲ್ಡ್ 2024 ರಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಗೆರಿಲ್ಲಾ 450 ಅನ್ನು ಪರಿಚಯಿಸಿತ್ತು. ಇದರ ನಂತರ ಇದೇ ಮೊದಲ ಬಾರಿಗೆ ನವೀಕರಣಗೊಂಡು ಮಾರ್ಚ್ 27 ರಂದು ಬಿಡುಗಡೆಯಾಗಲಿದೆ. ಕಂಪನಿಯು 450 ಸಿಸಿ ಬೈಕ್ ನ ನವೀಕರಿಸಿದ ಆವೃತ್ತಿಯನ್ನು ಟೀಸ್ ಮಾಡುವ ಮೂಲಕ ಇದರ ಬಗ್ಗೆ ಕುತೂಹಲ ಹುಟ್ಟು ಹಾಕಿದೆ. ಇದರಲ್ಲಿ ಏನೆಲ್ಲಾ ನವೀಕರಗಣಗಳನ್ನು ಮಾಡಲಾಗಿದೆ ಎಂಬ ಅಂಶವನ್ನು ಗೌಪ್ಯವಾಗಿ ಇಡಲಾಗಿದ್ದರೂ ಇಂಜಿನ್ ಮತ್ತು ಕೆಲವು ವೈಶಿಷ್ಟ್ಯಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಈ ಹೊಸ ಆವೃತ್ತಿಯ ಯಂತ್ರ ಭಾಗಗಳಲ್ಲಿ ಬದಲಾವಣೆಯಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ ಹಂಟರ್ 350 ಯ ಹೊಸ ಆವೃತ್ತಿಯಲ್ಲಿಯೂ ಇದೇ ರೀತಿಯ ಬದಲಾವಣೆ ಮಾಡಿದ್ದನ್ನು ನೋಡಬಹುದು. ಬೈಕ್ ಸವಾರರಿಗೆ ಹೆಚ್ಚಿನ ಆರಾಮದಾಯಕ ಪ್ರಯಾಣ ನೀಡಲು ಅಗತ್ಯವಿರುವ ಸೌಕರ್ಯಗಳನ್ನು ಇದರಲ್ಲಿ ಅಳವಡಿಸುವ ಸಾಧ್ಯತೆಗಳಿವೆ. ಕ್ಲಿಷ್ಟಕರ ರಸ್ತೆಗಳ ಮೇಲೂ ಬೈಕ್ ಮೇಲೆ ಇನ್ನಷ್ಟು ಉತ್ತಮ ಹಿಡಿತ ಸಾಧಿಸಬಹುದಾದ ವೈಶಿಷ್ಟ್ಯಗಳನ್ನು ಬದಲಾಯಿಸಬಹುದು.
ಟೀಸ್‌ರ್‌ನ ಪ್ರಕಾರ ಗ್ರಾಹಕರನ್ನು ಸೆಳೆಯಲು ಬೈಕ್‌ನ ವೈಶಿಷ್ಟ್ಯಗಳನ್ನು ಹೆಚ್ಚಿಸುವುದರ ಜೊತೆಗ ಬಣ್ಣ ಹಾಗೂ ಡಿಸೈನ್‌ಗಳು ಸುಧಾರಣೆಯಾಗಬಹುದು. ಸದ್ಯ ಈ ಬೈಕ್ ಬ್ರಾವಾ ಬ್ಲೂ, ಶ್ಯಾಡೋ ಆಶ್, ಪೀಕ್ಸ್ ಬ್ರಾಂಜ್, ಸ್ಮೋಕ್ ಸಿಲ್ವರ್, ಪ್ಲಾಯಾ ಬ್ಲ್ಯಾಕ್ ಮತ್ತು ಗೋಲ್ಡ್ ಡಿಪ್ ಶೇಡ್‌ಗಳಲ್ಲಿ ಲಭ್ಯವಿದೆ.
ಈಗಿರುವ ಆವೃತ್ತಿಯ ಗೆರಿಲ್ಲಾ 450 ಮೋಟಾರ್ ಸೈಕಲ್ 43 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹೊಂದಿದೆ. ಇದು 140 ಎಂಎಂ ವೀಲ್ ಟ್ರಾವೆಲ್ ಅನ್ನು ಒದಗಿಸುತ್ತದೆ. ಹಿಂಭಾಗದಲ್ಲಿ 150 ಎಂಎಂ ಟ್ರಾವೆಲ್ ನೀಡುವ ಮೊನೊ-ಶಾಕ್, ಡ್ಯುಯಲ್ ಪಿಸ್ಟನ್ ಕ್ಯಾಲಿಪರ್ ಹೊಂದಿರುವ 310 ಎಂಎಂ ವೆಂಟಿಲೇಟೆಡ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಸಿಂಗಲ್ ಡಿಸ್ಕ್ ಒಳಗೊಂಡಿದೆ. ಸುರಕ್ಷತೆಗಾಗಿ, ತಯಾರಕರು ಇದರಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅಳವಡಿಸಿರುವುದು ವಿಶೇಷ. ಈ ಬೈಕ್ 17-ಇಂಚಿನ ಚಕ್ರಗಳ ಮೇಲೆ ಓಡುತ್ತದೆ.
ಇದನ್ನೂ ಓದಿ: ಕವಾಸಕಿ ನಿಂಜಾ 300 ಬೈಕ್‌ಗೆ ಭರ್ಜರಿ ಡಿಸ್ಕೌಂಟ್! ಮಾರ್ಚ್ ಮುಗಿಯುವುದರ ಒಳಗೆ ಬುಕ್ ಮಾಡಿ
ಸದ್ಯ 2.56 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಯ ರಾಯಲ್ ಎನ್ಫೀಲ್ಡ್ ಗೆರಿಲ್ಲಾ 450 ಯಲ್ಲಿ ಹಿಮಾಲಯನ್ 450 ಯಲ್ಲಿ ಅಳವಡಿಸಲಾಗಿರುವ ಶೆರ್ಫಾ ಎಂಜಿನ್ ಬಳಸಲಾಗಿದೆ. ಈ ಎಂಜಿನ್ 452 ಸಿಸಿ ಡಿಸ್ಪ್ಲೇಸ್‌ಮೆಂಟ್, ಲಿಕ್ವಿಡ್ ಕೂಲ್ಡ್, 40nm ಗರಿಷ್ಠ ಟಾರ್ಕ್‌ನೊಂದಿಗೆ 40 hp ಪವರ್ ಉತ್ಪಾದಿಸುತ್ತದೆ. ಇದರಲ್ಲಿ ಎರಡು ರೈಡಿಂಗ್ ಮೋಡ್, 6 ಸ್ಪೀಡ್ ಗೇರ್ ಬಾಕ್ಸ್ ಇದೆ.



