ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ 7 ಸೀಟರ್ ಟಾಪ್ 10 ಕಾರುಗಳ ಪಟ್ಟಿ

Top 10 selling 7 seater cars : ಭಾರತದಲ್ಲಿ ಈಗ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಐಶಾರಾಮಿ ವಸ್ತುಗಳ ಸಾಲಿನಿಂದ ಅಗತ್ಯ ವಸ್ತುಗಳ ಸಾಲಿಗೆ ಇದು ಸೇರಿಕೊಂಡಿದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ಹಲವು ಬಗೆಯ ಕೈಗಟಕುವ ದರದ ಕಾರುಗಳು ಖರೀದಿಗೆ ಲಭ್ಯವಿದೆ.
ಮೊದಲೆಲ್ಲಾ ಒಂದು ಕಾರು ಕೊಂಡರೆ ಆಯಿತು ಎನ್ನುವ ಜನರು, ಈಗ ಸುರಕ್ಷತೆಯ ಜೊತೆಗೆ ಆರಾಮದಾಯಕ ಸೌಲಭ್ಯಗಳನ್ನು ಬಯಸುತ್ತಾರೆ. ಚಿಕ್ಕ ಕುಟುಂಬದವರಿಗೆ ಸ್ಥಳದ ಸಮಸ್ಯೆ ಎದುರಾಗುವುದಿಲ್ಲ.
ಆದರೆ ಅದೇ ದೊಡ್ಡ ಕುಟುಂಬ, ಸ್ನೇಹಿತರ ಬಳಗ ಇರುವವರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಸ್ಥಳದ ಅಭಾವದ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿಯೇ ಭಾರತದಲ್ಲಿ ಈಗ 7 ಸೀಟುಗಳ ಕಾರು ಹೆಚ್ಚು ಜನಪ್ರಿಯಗೊಳ್ಳುತ್ತಿದೆ.
ಅದರಲ್ಲಿ SUV, MUV, XUV ಕಾರುಗಳ ಖರೀದಿಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದನ್ನು ಅರಿತ ಕಾರು ತಯಾರಿಕ ಕಂಪನಿಗಳು ಕೈಗೆಟಕುವ ದರದಲ್ಲಿ 7 ಸೀಟುಗಳ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿವೆ.
Top 10 selling 7 seater cars : ಮಾರುತಿ ಸುಜುಕಿ ಎರ್ಟಿಗಾ:
ಸದ್ಯ 7 ಸೀಟುಗಳ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಅದು ಜೂನ್ ತಿಂಗಳಿನಲ್ಲಿ 14,151 ಯೂನಿಟ್‌ಗಳನ್ನು ಮಾರಾಟ ಮಾಡಿದೆ.
ಜೂನ್ 2024 ರಲ್ಲಿ, ಇದನ್ನು 15,902 ಗ್ರಾಹಕರು ಖರೀದಿಸಿದ್ದರು. ಆದರೆ, ಈ ಕಾರಿನ ಮಾರಾಟವು ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಶೇ 11 ರಷ್ಟು ಕುಸಿದಿದೆ ಎನ್ನಲಾಗುತ್ತಿದೆ.
ಆದರೂ ಮಾರುತಿ ಸುಜುಕಿ ಎರ್ಟಿಗಾ ತನ್ನ ವಿಶ್ವಾಸಾರ್ಹತೆ, ಮೈಲೇಜ್ ಮತ್ತು ಉತ್ತಮ ಕ್ಯಾಬಿನ್ ಸ್ಥಳಾವಕಾಶದಿಂದಾಗಿ ಭಾರತೀಯ ಕುಟುಂಬಗಳಲ್ಲಿ ಇನ್ನೂ ಬಹಳ ಜನಪ್ರಿಯವಾಗಿದೆ.
ಮಹೀಂದ್ರ ಸ್ಕಾರ್ಪಿಯೋ:
ಮಹೀಂದ್ರಾ ಸ್ಕಾರ್ಪಿಯೋ ಸರಣಿಯ ಎಸ್‌ಯುವಿಗಳು ಕಳೆದ ವರ್ಷ ಜೂನ್‌ನಲ್ಲಿ 12,740 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇದರ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 4 ರಷ್ಟು ಹೆಚ್ಚಾಗಿದೆ.
ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಸ್ಕಾರ್ಪಿಯೋ-ಎನ್ ಎರಡನ್ನೂ ಒಳಗೊಂಡಿರುವ ಸ್ಕಾರ್ಪಿಯೋ ಕಾರು ತನ್ನ ಕಾರ್ಯಕ್ಷಮತೆ, ನಿರ್ಮಾಣ ಗುಣಮಟ್ಟ ಮತ್ತು ಆಫ್-ರೋಡ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.
ಟೊಯೋಟಾ ಇನ್ನೋವಾ:
ಟೊಯೋಟಾ ಇನ್ನೋವಾ ಕಾರು ಜೂನ್‌ನಲ್ಲಿ ಟಾಪ್ 10 ಕಾರುಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ತಿಂಗಳಿನಲ್ಲಿ ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಎರಡನ್ನೂ ಒಳಗೊಂಡಿರುವ ಇನ್ನೋವಾ MPV ಕಾರನ್ನು 8,802 ಖರೀದಿಸಿದ್ದಾರೆ.
ಜೂನ್ 2024 ರಲ್ಲಿ 9,412 ಯೂನಿಟ್‌ಗಳಿಗೆ ಹೋಲಿಸಿದರೆ 6% ರಷ್ಟು ಕುಸಿತವಾಗಿದೆ. ಇನ್ನೋವಾ ಕಾರುಗಳು ತನ್ನ ವಿಶ್ವಾಸಾರ್ಹತೆ, ಆರಾಮದಾಯಕ ಸವಾರಿಯಿಂದಾಗಿ ಹೆಚ್ಚಿನ ಮರುಮಾರಾಟ ಮೌಲ್ಯಕ್ಕೆ ಹೆಸರುವಾಸಿಯಾಗಿದೆ.
ಕಿಯಾ ಕ್ಯಾರೆನ್ಸ್:
ಭಾರತದಲ್ಲಿ ಸದ್ಯ ಜನಪ್ರಿಯ 7 ಆಸನಗಳ ಕಾರುಗಳ ಪೈಕಿ ಕ್ಯಾರೆನ್ಸ್ ಜೂನ್‌ನಲ್ಲಿ ಅಬ್ಬರ ಹೆಚ್ಚಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 54 ರಷ್ಟು ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.
ಜೂನ್‌ನಲ್ಲಿ ಇದು 7,921 ಯುನಿಟ್‌ಗಳು ಮಾರಾಟಗೊಂಡಿದೆ. ಜೂನ್ 2024 ರಲ್ಲಿ, ಇದನ್ನು 5,154 ಗ್ರಾಹಕರನ್ನು ಆಕರ್ಷಿಸಿತ್ತು. ಇತ್ತೀಚೆಗೆ, ಕ್ಯಾರೆನ್ಸ್ ಕ್ಲಾವಿಸ್ ಮತ್ತು ಕ್ಯಾರೆನ್ಸ್ ಕ್ಲಾವಿಸ್ ಇವಿ ಸಹ ಬಿಡುಗಡೆ ಮಾಡಲಾಗಿದೆ.
ಮಹೀಂದ್ರಾ ಬೊಲೆರೊ:
ಮಹೀಂದ್ರಾ ಬೊಲೆರೊ 7 ಸೀಟುಗಳ ಕಾರುಗಳ ಪಟ್ಟಿಯಲ್ಲಿ ಶೇ.2 ರಷ್ಟು ಬೆಳವಣಿಗೆಯೊಂದಿಗೆ 5 ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಬೊಲೆರೊ ಸರಣಿಯ ಎಸ್‌ಯುವಿಗಳಲ್ಲಿ, ಒಟ್ಟು 7,478 ಬೊಲೆರೊ ಮಾರಾಟಗೊಂಡಿದೆ.
ಇದರಲ್ಲಿ ಬೊಲೆರೊ ನಿಯೋ ಮತ್ತು ಬೊಲೆರೊ ನಿಯೋ ಪ್ಲಸ್ ಸೇರಿಕೊಂಡಿದೆ. ಜೂನ್ 2024 ರಲ್ಲಿ ಮಾರಾಟವಾದ 7,365 ಯುನಿಟ್‌ಗಳಿಂತ ಈ ವರ್ಷದ ಜೂನ್‌ನಲ್ಲಿ ಹೆಚ್ಚಿಗೆ ಯೂನಿಟ್ ಮಾರಾಟವನ್ನು ಕಂಡಿದೆ.
Also Read : ಕೇವಲ ₹10,000 EMI ನಲ್ಲಿ ಖರೀದಿಸಿ ಮಾರುತಿ ಸ್ವಿಫ್ಟ್
Top 10 selling 7 seater cars : ಮಹೀಂದ್ರಾ XUV 700
ಮಹೀಂದ್ರಾದ ಅದ್ಭುತ SUV XUV700 ಕಾರು ಗ್ರಾಹಕರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಅದರ ಪ್ರೀಮಿಯಂ ವೈಶಿಷ್ಟ್ಯಗಳು, ಶಕ್ತಿಶಾಲಿ ಎಂಜಿನ್, ಸುಧಾರಿತ ಸುರಕ್ಷತಾ ತಂತ್ರಜ್ಞಾನದೊಂದಿಗೆ, ಇದು ತನ್ನ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಉಳಿದಿದೆ.
ಈ ಕಾರು ಜೂನ್‌ನಲ್ಲಿ 6,198 ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವುದರ ಮೂಲಕ ವರ್ಷದಿಂದ ವರ್ಷಕ್ಕೆ 5% ಬೆಳವಣಿಗೆ ಕಂಡಿದೆ.
ಟೊಯೋಟಾ ಫಾರ್ಚೂನರ್
ತನ್ನ ಶಕ್ತಿ, ವಿಶ್ವಾಸಾರ್ಹತೆ ಮತ್ತು ಆಫ್-ರೋಡ್ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿರುವ ಟೊಯೋಟಾ ಫಾರ್ಚೂನರ್ ಜೂನ್‌ನಲ್ಲಿ 2,743 ಯುನಿಟ್‌ಗಳನ್ನು ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇ 3 ರಷ್ಟು ಬೆಳವಣಿಗೆ ಕಂಡುಕೊಂಡಿದೆ.
ಮಾರುತಿ ಸುಜುಕಿ XL6:
ಜೂನ್ ತಿಂಗಳಿನಲ್ಲಿ ಮಾರುತಿ ಸುಜುಕಿ XL6 ಶೇ. 39 ರಷ್ಟು ಮಾರಾಟದೊಂದಿಗೆ ಭಾರಿ ಕುಸಿತ ಎದುರಿಸಿದೆ. ಕಳೆದ ತಿಂಗಳು ಇದು 2,011 ಗ್ರಾಹಕರನ್ನು ಮಾತ್ರ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಟೊಯೋಟಾ ರೂಮಿಯಾನ್:
ಕೈಗೆಟುಕುವ ದರದ 7 ಆಸನಗಳ ಟೊಯೋಟಾ ರೂಮಿಯನ್ ಕಾರು ಜೂನ್‌ನಲ್ಲಿ 1,415 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ವಾರ್ಷಿಕ ಆಧಾರದ ಮೇಲೆ ಶೇ. 10 ರಷ್ಟು ಕುಸಿತವಾಗಿದೆ.
Top 10 selling 7 seater cars : ಟಾಟಾ ಸಫಾರಿ
ಟಾಟಾ ಸಫಾರಿಯು ಜೂನ್‌ನಲ್ಲಿ ಮಾರಾಟದಲ್ಲಿ ಭಾರಿ ಕುಸಿತವನ್ನು ಎದುರಿಸಿ 10 ನೇ ಸ್ಥಾನ ಗಳಿಸಿದೆ. ಕಳೆದ ತಿಂಗಳು 922 ಗ್ರಾಹಕರು ಸಫಾರಿ ಖರೀದಿಸಿದ್ದರು. ಅದೇ ಜೂನ್ 2024 ರಲ್ಲಿ ಸಫಾರಿ 1,394 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು.
Also Read : Top 12 EV cars 2025 ರಲ್ಲಿ ಬಿಡುಗಡೆ ಆಗೋ ಟಾಪ್ 12 ಇವಿ ಕಾರುಗಳು
ಅದಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಶೇ. 34 ರಷ್ಟು ಮಾರಾಟವಾಗಿ ಭಾರಿ ಕುಸಿತ ಕಂಡಿದೆ. ಹೊಸದಾಗಿ ನವೀಕರಣಗೊಂಡಿದ್ದರೂ ಸಹ ಸಫಾರಿ ಪ್ರೀಮಿಯಂ 7-ಸೀಟರ್ SUV ವಿಭಾಗದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ.
top 10 selling 7 seater cars in India for big family maruti suzuki ertiga to tata safari in Kannada News



