27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡಿದ ವಿಶ್ವದ ಶ್ರೀಮಂತ ದಂಪತಿ…! ವಿಚ್ಚೇಧನಕ್ಕೆ ಅರ್ಜಿ ಹಾಕಿದ ಮೈಕ್ರೋಸಾಫ್ಟ್ ಕಪಲ್ಸ್….!!

ವಿಶ್ವದ ಅತ್ಯಂತ ಶ್ರೀಮಂತ ದಂಪತಿ ಖ್ಯಾತಿಯ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ದಂಪತಿ 27 ವರ್ಷದ ಸಾಂಗತ್ಯಕ್ಕೆ ಅಂತ್ಯ ಹಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 27 ವರ್ಷದ ದಾಂಪತ್ಯ ಅಂತ್ಯಗೊಳಿಸುವುದಾಗಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಘೋಷಿಸಿದ್ದು, ಸದ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಚ್ಚೇಧನ ಪಡೆಯುವುದಾಗಿ ಸ್ವತಃ  ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಘೋಷಿಸಿದ್ದು, ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.  27 ವರ್ಷದ ದಾಂಪತ್ಯದ ಬಳಿಕ ನಾವು  ವಿಚ್ಛೇಧನ ಘೋಷಿಸಿದ್ದೇವೆ. ಆದರೆ ಜಾಗತಿಕ ಆರೋಗ್ಯ,ಲಿಂಗ ಸಮಾನತೆ,ಶಿಕ್ಷಣ ಸೇರಿದಂತೆ  ಹಲವು ಸಮಾಜಮುಖಿ ಕಾರ್ಯಕ್ರಮಗಳಿಗೆ  ಧನಸಹಾಯ ನೀಡುವ ಬಿಲ್ ಮತ್ತು ಮೆಲಿಂಡಾ ಗೇಟ್ಸ್  ಫೌಂಡೇಶನ್ ನ್ನು ಜಂಟಿ ಸಹಭಾಗಿತ್ವದಲ್ಲಿ ಮುಂದುವರೆಸುತ್ತೇವೆ ಎಂದಿದ್ದಾರೆ.

ಕಳೆದ 27 ವರ್ಷದಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದು,  ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಫೌಂಡೇಶನ್ ಸ್ಥಾಪಿಸಿದ್ದೇವೆ. ಆದರೆ ಈಗ  ದಾಂಪತ್ಯ ಜೀವನವನ್ನು, ಒಟ್ಟಿಗೆ ಬದುಕುವುದನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.

ಅಮೇರಿಕಾ ಹಾಗೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿರುವ 67 ವರ್ಷದ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ 56 ವರ್ಷದ  ದಂಪತಿ ಮೈಕ್ರೋಸಾಫ್ಟ್ ಸಂಸ್ಥಾಪಕರಾಗಿದ್ದು, 124 ದಶಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

1987 ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರಾಡೆಕ್ಟ್ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ್ದ ಬಿಲ್ ಗೇಟ್ಸ್ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಿಲಿಂಡಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. 1994 ರಲ್ಲಿ ಮದುವೆಯಾಗಿದ್ದ  ಈ ಜೋಡಿ 2021 ರಲ್ಲಿ  ತಮ್ಮ 27 ವರ್ಷದ ಮದುವೆಬಂಧಕ್ಕೆ ಕೊನೆ ಹಾಡುತ್ತಿದ್ದಾರೆ.

ಈ ಶ್ರೀಮಂತ ದಂಪತಿಯ  ಈ ನಿರ್ಧಾರ ವಿಶ್ವವನ್ನೇ ಚಕಿತಗೊಳಿಸಿದ್ದು, ಬಿಲ್ ಬೇಟ್ಸ್ ಸ್ಥಾಪಿಸಿದ ದತ್ತಿ ಸಂಸ್ಥೆಗಳ ಕತೆಯೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಆದರೆ ಇದನ್ನು ಜಂಟಿಯಾಗಿ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುವ ಮೂಲಕ ಬಿಲ್ ಗೇಟ್ಸ್ ಆತಂಕಕ್ಕೆ ತೆರೆ ಎಳೆದಿದ್ದಾರೆ.

Comments are closed.