ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ : ಜಾರಕಿಹೊಳಿ, ಪಾಟೀಲ್, ಗೋಪಾಲಯ್ಯಗಿಲ್ಲ ಉಸ್ತುವಾರಿ ಹೊಣೆ

0

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯಲ್ಲಿ ಮೇಜರ್ ಸರ್ಜರಿ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ಮುನಿಸಿಕೊಂಡು ಬಿಜೆಪಿ ಸೇರಿದ್ದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಕೆ.ಗೋಪಾಲಯ್ಯ ಹಾಗೂ ಶ್ರೀಮಂತ ಪಾಟೀಲ್ ಉಸ್ತುವಾರಿ ಹೊಣೆಯಿಂದ ವಂಚಿತರಾಗಿದ್ದಾರೆ.

ತೀವ್ರ ಪೈಪೋಟಿಯಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ಉಸ್ತುವಾರಿ ಹೊಣೆಯನ್ನು ತನ್ನ ಬಳಿಯಲ್ಲಿಯೇ ಉಳಿಸಿಕೊಂಡಿದ್ದಾರೆ. ಅಲ್ಲದೇ ಉಳಿದ ಜಿಲ್ಲೆಗಳ ಉಸ್ತುವಾರಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ.

ನೂತನ ಉಸ್ತುವಾರಿ ಸಚಿವರ ಪಟ್ಟಿ : ಬೆಂಗಳೂರು ಬಿ.ಎಸ್.ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಉಳಿದಂತೆ ಬೆಂಗಳೂರು ಗ್ರಾಮಾಂತರ ಆರ್.ಅಶೋಕ್, ಮಂಡ್ಯ ನಾರಾಯಣ ಗೌಡ, ತುಮಕೂರು ಮತ್ತು ಹಾಸನ ಮಾಧುಸ್ವಾಮಿ, ಬೆಳಗಾವಿ ಮತ್ತು ಧಾರವಾಡ ಜಗದೀಶ್ ಶೆಟ್ಟರ್,

ಉಡುಪಿ ಮತ್ತು ಹಾವೇರಿ ಬಸವರಾಜ್ ಬೊಮ್ಮಾಯಿ, ಕೊಪ್ಪಳ ಬಿ.ಸಿ.ಪಾಟೀಲ್, ಚಿತ್ರದುರ್ಗ ಶ್ರೀರಾಮುಲು, ಉತ್ತರ ಕನ್ನಡ ಶಿವರಾಮ್ ಹೆಬ್ಬಾರ್, ದಾವಣಗೆರೆ ಬೈರತಿ ಬಸವರಾಜು, ಬಳ್ಳಾರಿ ಆನಂದ್ ಸಿಂಗ್, ಮೈಸೂರು ಎಸ್.ಟಿ.ಸೋಮಶೇಖರ್, ಕೊಡಗು ವಿ.ಸೋಮಣ್ಣ,

ಕಲಬುರಗಿ ಮತ್ತು ಬಾಗಲಕೋಟೆ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್, ಯಾದಗಿರಿ ಮತ್ತು ಬೀದರ್ ಪ್ರಭು ಚವ್ಹಾಣ್, ರಾಮನಗರ ಅಶ್ವಥ್ ನಾರಾಯಣ್, ಶಿವಮೊಗ್ಗ ಕೆ.ಎಸ್.ಈಶ್ವರಪ್ಪ, ದಕ್ಷಿಣ ಕನ್ನಡ ಕೋಟ ಶ್ರೀನಿವಾಸ ಪೂಜಾರಿ, ಚಾಮರಾಜನಗರ ಎಸ್.ಸುರೇಶ್ ಕುಮಾರ್, ಚಿಕ್ಕಮಗಳೂರು ಸಿ.ಟಿ.ರವಿ, ಗದಗ ಸಿ.ಸಿ.ಪಾಟೀಲ್, ಕೋಲಾರ ಎಚ್.ನಾಗೇಶ್, ವಿಜಯಪುರ ಶಶಿಕಲಾ ಜೊಲ್ಲೆ, ಬಳ್ಳಾರಿ ಆನಂದ ಸಿಂಗ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Leave A Reply

Your email address will not be published.