ಕಿಚ್ಚನಿಗ್ಯಾಕೆ ಕಾಡುತ್ತಿದೆ 8ರ ನಂಟು : ಬಿಗ್ ಬಾಸ್ ಶುರುವಾಗೋದು ಯಾವಾಗ ಗೊತ್ತಾ ?

ಸದ್ಯ ಎಲ್ಲೆಲ್ಲೂ ಬಿಗ್ ಬಾಸ್ ನದ್ದೇ ಮಾತು. ಕನ್ನಡದಲ್ಲಿ ಬಿಗ್ ಬಾಸ್ ಯಾವಾಗ ಶುರುವಾಗುತ್ತೆ ಅನ್ನೋ ಕುತೂಹಲ ಹೆಚ್ಚುತ್ತಿದ್ದು, ನಡುವಲ್ಲೇ 8ರ ನಂಟಿನ ಪ್ರೋಮೋವೊಂದು ಸಖತ್ ಸೌಂಡ್ ಮಾಡ್ತಿದೆ.

ನಟ ಕಿಚ್ಚ ಸುದೀಪ್ ಅವರನ್ನು 8ರ ನಂಟು ಬಿಡದೆ ಕಾಡುತ್ತಿದೆ. ವಿದೇಶಕ್ಕೆ ಹಾರೋದಕ್ಕೆ ಹೊರಟಿದ್ದ ಸುದೀಪ್ ಪಾಸ್ ಪೋರ್ಟ್ ಝೆರಾಕ್ಸ್ ತೆಗೆಯೋಕೆ ಹೋದ್ರೆ ಅಲ್ಲಿ 8ರ ಸಂಖ್ಯೆ ಪ್ರಿಂಟ್ ಆಗುತ್ತೆ. ಅರೆಕ್ಷಣ ಶಾಕ್ ಆದ ಸುದೀಪ್ ತಾವೇ ಪ್ರಿಂಟಿಂಗ್ಸ್ ಬಟನ್ ಪ್ರೆಸ್ ಮಾಡ್ತಾರೆ. ಆವಾಗ ಬಿಗ್ ಬಾಸ್ ಲೋಗೋ ಪ್ರಿಂಟ್ ಆಗುತ್ತೆ.

ಹಿಂದಿ, ತಮಿಳು, ತೆಲುಗಿನಲ್ಲಿ ಈಗಾಗಲೇ ಬಿಗ್ ಬಾಸ್ ಸೀಸನ್ ಆರಂಭವಾಗಿದ್ದು, ಕನ್ನಡದಲ್ಲಿ ಈ ಬಾರಿ ತಡವಾಗಿ ಶುರುವಾಗ್ತಿದೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಪ್ರೋಮೋ ರಿಲೀಸ್ ಮಾಡಿದೆ ಬಿಗ್ ಬಾಸ್ ತಂಡ. ಕನ್ನಡದ ಜನಪ್ರಿಯ ವಾಹಿನಿ ಕಲರ್ಸ್ ಕನ್ನಡಲ್ಲಿಯೇ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ.

ಬಿಗ್ ಬಾಸ್ ಶೋ ವರ್ಷದಿಂದ ವರ್ಷಕ್ಕೆ ಹೊಸತನದಿಂದಲೆ ಕೂಡಿರುತ್ತಿದೆ. ಅದ್ರಲ್ಲೂ ಬಿಗ್ ಬಾಸ್ ಸೀಸನ್ 8ರ ಪ್ರೋಮೋ ತುಂಬಾನೆ ಚೆನ್ನಾಗಿ ಮೂಡಿಬಂದಿದೆ. 8ರ ಸಂಖ್ಯೆಯನ್ನೇ ಪ್ರೋಮೋದಲ್ಲಿ ಹೆಚ್ಚು ಹೈಲೇಟ್ ಮಾಡಿರೋದನ್ನು ನೋಡಿದ್ರೆ ಈ ಬಾರಿ ಫೆಬ್ರವರಿ 8ಕ್ಕೆ ಬಿಗ್ ಬಾಸ್ ಶೋ ಆರಂಭವಾಗೋ ಸಾಧ್ಯತೆಯಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಶೋ ನಲ್ಲಿನ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಶೋ ಯಾವಾಗ ಆರಂಭವಾಗುತ್ತೆ ಅನ್ನೋ ಗುಟ್ಟನ್ನು ಮಾತ್ರ ಕಲರ್ಸ್ ಕನ್ನಡ ಬಿಟ್ಟುಕೊಟ್ಟಿಲ್ಲ. ಬಿಗ್ ಬಾಸ್ 8 ರ ಸೀಸನ್ ನಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ ಅನ್ನೋ ಕುತೂಹಲವೂ ಸೃಷ್ಟಿಯಾಗಿದೆ. ಅದ್ರಲ್ಲೂ ನಿರ್ದೇಶಕ ಇಂದ್ರಜಿತ್ ಲಂಕೇಶ್, ಡ್ರೋನ್ ಪ್ರತಾಪ್, ಶುಭಾಪೂಂಜಾ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಪ್ರೇಕ್ಷಕರಿಗೆ ರಸದೌತಣವನ್ನೇ ಉಳಬಡಿಸಲಿದೆ ಅನ್ನೋದು ಪ್ರೋಮೋದಿಂದಲೇ ಖಚಿತವಾಗುತ್ತಿದೆ.

Comments are closed.