ಕೊರೊನಾದಿಂದ ಕುಂದಾಪುರದ ವ್ಯಕ್ತಿ ಸಾವು : ಬೇರೆ ವ್ಯಕ್ತಿಯ ಶವ ಕಳುಹಿಸಿ ಅಧಿಕಾರಿಗಳ ಎಡವಟ್ಟು

0
https://youtu.be/85XP7Y8gYiw

ಕುಂದಾಪುರ : ಕೊರೊನಾ ವೈರಸ್ ಸೋಂಕಿನ ಹೆಸರಲ್ಲಿ ದಿನಕ್ಕೊಂದು ಎಡವಟ್ಟು ನಡೆಯುತ್ತಲೇ ಇದೆ. ಕೋವಿಡ್ ಸೋಂಕಿನ ಸಾವನ್ನಪ್ಪಿದ್ದ ವ್ಯಕ್ತಿಯ ಶವದ ಬದಲು ಬೇರೆ ವ್ಯಕ್ತಿಯ ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಆಸ್ಪತ್ರೆಯವರ ಎಡವಟ್ಟಿನ ವಿರುದ್ದ ಸಾರ್ವಜನಿಕರು ಸ್ಮಶಾನದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ತಲೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದಾಳೆಂದು ವರದಿ ನೀಡಿ ವಿವಾದಕ್ಕೆ ಕಾರಣವಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಅಧಿಕಾರಿಗಳಿಂದ ಮತ್ತೊಂದು ಎಡವಟ್ಟು ನಡೆದಿದೆ. ಕುಂದಾಪುರ ತಾಲೂಕಿನ ನೇರಂಬಳ್ಳಿಯ 60 ವರ್ಷದ ವ್ಯಕ್ತಿಯೋರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕೊರೊನಾ ಸೋಂಕಿನಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಹೀಗಾಗಿ ಕುಂದಾಪುರದ ಸ್ಮಶಾನದಲ್ಲಿ ವ್ಯಕ್ತಿಯ ಮೃತದೇಹದ ಮರಣೋತ್ತರ ಕಾರ್ಯ ನಡೆಸಲು ಸಂಬಂಧಿಕರು ಹಾಗೂ ಊರವರು ಸಿದ್ದತೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಿಕರು ಸ್ಮಶಾನಕ್ಕೆ ಶವವನ್ನು ನೋಡಿದಾಗ ಅನುಮಾನ ವ್ಯಕ್ತವಾಗಿತ್ತು. ಮೃತಪಟ್ಟ ವ್ಯಕ್ತಿ ಸುಮಾರು 6 ಅಡಿ ಎತ್ತರವಿದ್ರು.

ಆದರೆ ಆಸ್ಪತ್ರೆಯವರು ಕಳುಹಿಸಿದ ಶವ ಅಷ್ಟು ಎತ್ತರವಾಗಿರಲಿಲ್ಲ. ಹೀಗಾಗಿ ಸಂಬಂಧಿಕರು ಶವದ ಮುಖವನ್ನು ತೋರಿಸೋದಕ್ಕೆ ಹೇಳಿದಾಗ ಅಂಬ್ಯುಲೆನ್ಸ್ ಸಿಬ್ಬಂದಿ ಒಪ್ಪಿಗೆ ಸೂಚಿಸಲಿಲ್ಲ. ಕೊನೆಗೆ ಬಲವಂತಾಗಿ ಸಂಬಂಧಿಕರು ಶವದ ಪ್ಯಾಕ್ ಓಪನ್ ಮಾಡಿದಾಗ ಶಾಕ್ ಎದುರಾಗಿತ್ತು.

ಆಸ್ಪತ್ರೆಯ ಸಿಬ್ಬಂದಿ ಮೃತ ವ್ಯಕ್ತಿಯ ಮೃತ ದೇಹದ ಬದಲು ಕಾರ್ಕಳದ ವ್ಯಕ್ತಿಯ ಮೃತದೇಹವನ್ನು ಕಳುಹಿಸಿ ಕೊಟ್ಟಿದ್ದರು. ಇದರಿಂದಾಗಿ ಸಂಬಂಧಿಕರು ಹಾಗೂ ಸಾರ್ವಜನಿಕರು ಸ್ಮಶಾನದಲ್ಲಿಯೇ ಕೆಲ ಕಾಲ ಪ್ರತಿಭಟನೆಯನ್ನು ನಡೆಸಿದ್ದಾರೆ.

https://youtu.be/NEHVg9ZJBnE

ಈ ವೇಳೆಯಲ್ಲಿ ಶವವನ್ನು ವಾಪಾಸ್ ಕೊಂಡೊಯ್ಯಲು ಅಧಿಕಾರಿಗಳ ಸೂಚನೆಯ ಮೇರೆಗೆ ಅಂಬ್ಯಲೆನ್ಸ್ ಸಿಬ್ಬಂದಿ ಮುಂದಾದಾಗ ಸಂಬಂಧಿಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕೊನೆಗೆ ಅಧಿಕಾರಿಗಳು ನೇರಂಬಳ್ಳಿಯ ವ್ಯಕ್ತಿಯ ಶವವನ್ನು ಸ್ಥಳಕ್ಕೆ ತಂದಿದ್ದು, ಅಂತ್ಯಕ್ರೀಯೆ ನಡೆಸಲಾಯಿತು. ಕೊನೆಗೆ ತಂದಿದ್ದ ಬದಲಿ ಶವವನ್ನು ಕಾರ್ಕಳಕ್ಕೆ ಸಾಗಿಲಸಾಗಿದೆ.

ನೇರಂಬಳ್ಳಿಯ ನಾಗರಾಜ ಆಚಾರ್ಯ, ಪ್ರಕಾಶ್ ಆಚಾರ್ಯ, ಅಣ್ಣಪ್ಪ ಶೇರಿಗಾರ್ ನೇರಂಬಳ್ಳಿ, ಗೋಪಾಲ್ ಶೇರಿಗಾರ್ ನೇರಂಬಳ್ಳಿ, ಶ್ರೀಧರ ಆಚಾರ್ಯ ವಡೇರಹೋಬಳಿ, ರಾಜಗೋಪಾಲ್ ಆಚಾರ್ಯ ಕೊಟೇಶ್ವರ ಸೇರಿದಂತೆ ಊರಿನ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಹೆಸರಲ್ಲಿ ದಂಧೆ ನಡೆಯುತ್ತಿದೆಯೆಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಮೇಲೆ ಅನುಮಾನ ಮೂಡಿಸುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ತಪ್ಪತಸ್ಥರ ವಿರುದ್ದ ಸೂಕ್ತಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

Leave A Reply

Your email address will not be published.